/newsfirstlive-kannada/media/post_attachments/wp-content/uploads/2025/02/Supreme-Court-To-Ranveer-Allahbadia.jpg)
ನವದೆಹಲಿ: ತಂದೆ, ತಾಯಿ ಸೆಕ್ಸ್ ಬಗ್ಗೆ ಅಸಭ್ಯವಾಗಿ ಮಾತನಾಡಿ ಗೇಲಿ ಮಾಡಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಹಾಗೂ ಸ್ನೇಹಿತರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ನಿಮಗೆ ನಾಚಿಕೆ ಆಗಬೇಕು. ನೀವು ಬಳಸಿರುವ ಪದ ಅಸಭ್ಯ, ಅಶ್ಲೀಲ ಪದವಲ್ಲದೇ ಮತ್ತೇನು ಎಂದು ತೀವ್ರ ತರಾಟೆ ತೆಗೆದುಕೊಂಡಿದೆ.
ಅಸಭ್ಯತೆಗೆ ಸುಪ್ರೀಂ ಲಗಾಮು!
ಮನಸ್ಸಿನಲ್ಲಿರುವ ಕೆಟ್ಟದ್ದನ್ನು ಯೂಟ್ಯೂಬ್‌ನಲ್ಲಿ ರಣವೀರ್ ಹೊರ ಹಾಕಿದ್ದಾರೆ. ಸಮಾಜಕ್ಕೆ ತನ್ನದೇ ಆದ ಮೌಲ್ಯಗಳಿವೆ. ಆ ಮೌಲ್ಯಗಳನ್ನು ನೀವು ಗೌರವಿಸಬೇಕು. ಸಮಾಜವನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ನಿಯಮಗಳ ವಿರುದ್ಧ ಮಾತನಾಡುವ ಲೈಸೆನ್ಸ್ ಅನ್ನು ಯಾರಿಗೂ ಕೊಟ್ಟಿಲ್ಲ. ನೀವು ಬಳಸಿರುವ ಪದಗಳು, ಹೆಣ್ಣು ಮಗಳು, ತಂದೆ, ತಾಯಿ, ಸೋದರಿಯರು, ಇಡೀ ಸಮಾಜ ನಾಚಿಕೆ ಪಡುವಂಥದ್ದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
/newsfirstlive-kannada/media/post_attachments/wp-content/uploads/2023/11/Supreme-Court.jpg)
ಕಾರ್ಯಕ್ರಮಕ್ಕೆ ಸುಪ್ರೀಂ ಬ್ರೇಕ್!
ರಣವೀರ್ ಅಲಹಾಬಾದಿಯಾ ಭಾಗಿಯಾಗಿದ್ದ ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಇದು ಫನ್ನಿ ಕಾರ್ಯಕ್ರಮ ಅಲ್ಲ. ರಣವೀರ್ ಅಲಹಾಬಾದಿಯಾ ಸಂಪೂರ್ಣ ಜವಾಬ್ದಾರಿರಹಿತವಾಗಿ ವರ್ತಿಸಿದ್ದೀರಿ. ಮುಂದಿನ ಆದೇಶದವರೆಗೂ ರಣವೀರ್ ಅಲಹಾಬಾದಿಯಾ, ಸ್ನೇಹಿತರು ಯಾವುದೇ ಕಾರ್ಯಮಕ್ರಮ ಮಾಡಬಾರದು. ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮ ಪ್ರಸಾರವಾಗಬಾರದು ಎಂದು ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿದೆ.
ಇದನ್ನೂ ಓದಿ: ಮಾತೇ ಮುತ್ತು.. ಅಶ್ಲೀಲ ಮಾತಾಡಿದ ರಣವೀರ್ ಅಲಹಾಬಾದಿಯಾಗೆ ಶಾಕ್ ಕೊಟ್ಟ ವಿರಾಟ್ ಕೊಹ್ಲಿ!
ಮಧ್ಯಂತರ ರಿಲೀಫ್!
ರಣವೀರ್ ನಿಮಗೆ ನಾಚಿಕೆ ಆಗಬೇಕು ಎಂದಿರುವ ಸುಪ್ರೀಂಕೋರ್ಟ್, ಅಸ್ಸಾಂನಲ್ಲಿ ದಾಖಲಾಗಿರುವ ಎಫ್ಐಆರ್‌ಗೆ ತಡೆಯಾಜ್ಞೆ ನೀಡಿದೆ. ರಣವೀರ್ ಅಲಹಾಬಾದಿಯಾ ಬಂಧಿಸದಂತೆ ಸುಪ್ರೀಂಕೋರ್ಟ್‌ನಿಂದ ರಕ್ಷಣೆ ನೀಡಿ ಮಹತ್ವದ ಆದೇಶ ನೀಡಿದೆ.
ಬಂಧನಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್ ರಣವೀರ್ ಅಲಹಾಬಾದಿಯಾಗೆ ಕೆಲವೊಂದು ಮಧ್ಯಂತರ ರಿಲೀಫ್ ನೀಡಿದೆ. ರಣವೀರ್ ಅಲಹಾಬಾದಿಯಾ ವಿರುದ್ಧ ಮುಂದೆ ಮತ್ತಷ್ಟು FIR ದಾಖಲಿಸಬಾರದು. ಮಹಾರಾಷ್ಟ್ರದ ಥಾಣೆ ಪೊಲೀಸ್ ಸ್ಟೇಷನ್‌ಗೆ ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು. ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ಹೋಗಬಾರದು. ಮುಂಬೈ ಪೊಲೀಸರ ತನಿಖೆಗೆ ಸಹಕರಿಸುವಂತೆ ಸುಪ್ರೀಂಕೋರ್ಟ್‌ನಿಂದ ರಣವೀರ್‌ಗೆ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us