ಮಾರ್ಟಿನ್ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಸುಧಾಕರ್​ ಅರೆಸ್ಟ್​; ಇವರ ಆದಾಯ ಎಷ್ಟು ಗೊತ್ತಾ?

author-image
Ganesh Nachikethu
Updated On
ಮಾರ್ಟಿನ್ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಸುಧಾಕರ್​ ಅರೆಸ್ಟ್​; ಇವರ ಆದಾಯ ಎಷ್ಟು ಗೊತ್ತಾ?
Advertisment
  • ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌
  • ಮಾರ್ಟಿನ್‌ ಸಿನಿಮಾದ ಕುರಿತು ನೆಗೆಟಿವ್ ವಿಮರ್ಶೆ..!
  • ನೆಗೆಟಿವ್ ವಿಮರ್ಶೆ ಮಾಡಿದ್ದ ಸುಧಾಕರ್​ ಬಂಧನ

ಇತ್ತೀಚೆಗಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಕುರಿತು ನೆಗೆಟಿವ್ ವಿಮರ್ಶೆ ಮಾಡುವ ಮೂಲಕ ಭಾರೀ ಸದ್ದು ಮಾಡಿದವರು ಕನ್ನಡದ ರೀಲ್ಸ್ ಸ್ಟಾರ್ ಸುಧಾಕರ್.

ನೆಗೆಟಿವ್ ವಿಮರ್ಶೆ ಮಾಡಿದ್ದ ಸುಧಾಕರ್ ವಿರುದ್ಧ ಧ್ರುವ ಸರ್ಜಾ ಫ್ಯಾನ್ಸ್ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಮಾದನಾಯಕನಹಳ್ಳಿ ಪೊಲೀಸ್​​ ಠಾಣೆಗೆ ದೂರು ನೀಡಿ ತಾನು ಮಾಡಿದ್ದ ವಿಡಿಯೋ ಡಿಲೀಟ್​ ಮಾಡಿಸಿದ್ದರು. ಆದರೀಗ, ಮಾದನಾಯಕನಹಳ್ಳಿ ಪೊಲೀಸರು ಹಲ್ಲೆ ಕೇಸ್​ವೊಂದರಲ್ಲಿ ರೀಲ್ಸ್​​ ಸ್ಟಾರ್​​​ ಸುಧಾಕರ್​ ಅರೆಸ್ಟ್​ ಮಾಡಿದ್ದಾರೆ.

ಏನಿದು ಕೇಸ್​​?

ಹಲ್ಲೆ ಪ್ರಕರಣ ಒಂದರಲ್ಲಿ ಸುಧಾಕರ್ ಭಾಗಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸ್ರು ಸುಧಾಕರ್ ವಿರುದ್ಧ ವಾರೆಂಟ್ ಸಹ ಜಾರಿ ಮಾಡಿದ್ರು. ಮಾರ್ಟಿನ್ ಸಿನಿಮಾದ ನೆಗೆಟಿವ್ ವಿಮರ್ಶೆ ಸಂಬಂಧ ಧ್ರುವ ಫ್ಯಾನ್ಸ್​​ ದೂರು ನೀಡಿದ ಕಾರಣಕ್ಕೆ ಠಾಣೆಗೆ ಕರೆಸಿದ್ದ ಪೊಲೀಸರು ಕ್ಷಮೆ ಕೇಳಿಸಿ ವಿಡಿಯೋ ಡಿಲೀಟ್​ ಮಾಡಿಸಿದ್ದರು. ಈಗ ಹಲ್ಲೆ ಕೇಸಲ್ಲಿ ಸುಧಾಕರ್​ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಯೂಟ್ಯೂಬ್​ನಿಂದ ಎಷ್ಟು ದುಡಿಯುತ್ತಾರೆ ಸುಧಾಕರ್​​?

ಈ ಹಿಂದೆ ಸುಧಾಕರ್​ ಖಾಸಗಿ ಚಾನೆಲ್​​ ಒಂದಕ್ಕೆ ಸಂದರ್ಶನ ನೀಡಿದ್ರು. ಈ ಸಂದರ್ಶನದಲ್ಲಿ ತನ್ನ ಯೂಟ್ಯೂಬ್​ ರೆವೆನ್ಯೂ ಬಗ್ಗೆ ಮಾತಾಡಿದ್ದಾರೆ. ನಾನು ಡಿಗ್ರಿ ಮಾಡಿದ್ದೇನೆ. ಇಂದು ಕೆಲಸಕ್ಕೆ ಹೋಗಿದ್ರೆ 50 ಸಾವಿರ ಸಿಗುತ್ತಿತ್ತು. ಅದಕ್ಕಿಂತಲೂ ಹೆಚ್ಚು ಎಂದರೆ ಲಕ್ಷ ಲಕ್ಷ ದುಡಿಯುತ್ತೇನೆ ಎಂದಿದ್ದರು ಸುಧಾಕರ್.

ಇದನ್ನೂ ಓದಿ: ಕನ್ನಡದ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್​ ಅರೆಸ್ಟ್​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment