Advertisment

ಧ್ರುವ ಸರ್ಜಾ ಫ್ಯಾನ್ಸ್​ಗೆ ಧಮ್ಕಿ​ ಹಾಕಿದ್ದ ಯೂಟ್ಯೂಬರ್ ಸುಧಾಕರ್ ಗೌಡ ಪೊಲೀಸರ ಅತಿಥಿ; ವಿಡಿಯೋ ವೈರಲ್

author-image
Veena Gangani
Updated On
ಧ್ರುವ ಸರ್ಜಾ ಫ್ಯಾನ್ಸ್​ಗೆ ಧಮ್ಕಿ​ ಹಾಕಿದ್ದ ಯೂಟ್ಯೂಬರ್ ಸುಧಾಕರ್ ಗೌಡ ಪೊಲೀಸರ ಅತಿಥಿ; ವಿಡಿಯೋ ವೈರಲ್
Advertisment
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಆ ವಿಡಿಯೋ
  • ಮಾದನಾಯಕನಹಳ್ಳಿ ಠಾಣೆಗೆ ದೂರು ಕೊಟ್ಟ ಧ್ರುವ ಸರ್ಜಾ ಫ್ಯಾನ್ಸ್
  • ‘ಗ್ರೂಪ್​ ಮಾಡಿಕೊಂಡು ಹೆದರಿಸುತ್ತೀದ್ದೀರಿ ಅಲ್ವಾ ನೇರವಾಗಿ ಮಾತಾಡಿ’

ಕನ್ನಡದ ಸ್ಟಾರ್​ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್ ಅಲಿಯಾಸ್ ಸುಧಾಕರ್ ಗೌಡ ಪೊಲೀಸರ ವಶದಲ್ಲಿದ್ದಾನೆ. ನಟ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾದ ಬಗ್ಗೆ ಸುಧಾಕರ್ ಮಾತಾಡಿದ್ದರು. ಸಿನಿಮಾ ಚೆನಾಗಿಲ್ಲ. ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

Advertisment

ಇದನ್ನೂ ಓದಿ:ಕನ್ನಡದ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್​ ಅರೆಸ್ಟ್​; ಕಾರಣವೇನು?

publive-image

ಇನ್ನೂ, ಧ್ರುವ ಸರ್ಜಾ ಅವರ ಮಾರ್ಟಿನ್ ಬಗ್ಗೆ ನನಗೆ ಅನಿಸಿದ್ದನ್ನು ನಾನು ಹೇಳಿದ್ದೀನಿ. ಮೂರು ದಿನಗಳಿಂದ ನನಗೆ ಬೆದರಿಕೆ ಕರೆ ಮಾಡುತ್ತಿದ್ದೀರಿ ಅಲ್ವಾ ಅವರನ್ನು ಉಳಿಸುವುದಿಲ್ಲ. ಸಿನಿಮಾ ಚೆನ್ನಾಗಿದ್ರೆ, ಚೆನ್ನಾಗಿದೆ ಅಂತ ಹೇಳೋದು ಬಿಡೋದು ನನ್ನಿಷ್ಟ. ಅದನ್ನು ಹೇಳುವುದು ನನ್ನ ಹಕ್ಕು. ಎಲ್ಲ ಸೇರಿಕೊಂಡು ನನಗೇನೂ ಹೆದರಿಸುತ್ತಿದ್ದೀರಾ? ನಾನು ಹೋದ್ರು ಪರವಾಗಿಲ್ಲ ಹೀಗೆ ಗ್ರೂಪ್​ ಮಾಡಿಕೊಂಡು ಹೆದರಿಸುತ್ತೀದ್ದೀರಿ ಅಲ್ವಾ ಬನ್ನಿ ನೇರವಾಗಿ ಮಾತಾಡಿ ಅಂತ ಹೇಳಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.


">October 15, 2024

ಈಗಾಗಲೇ ಹಲ್ಲೆ ಪ್ರಕರಣವೊಂದರಲ್ಲಿ ಪೊಲೀಸರು ಸುಧಾಕರ್ ಗೌಡ ಅವರನ್ನು ಬಂಧಿಸಿದ್ದಾರೆ. ಈ ಹಿಂದೆ ಹಲ್ಲೆ ಪ್ರಕರಣವೊಂದರಲ್ಲಿ ಯೂಟ್ಯೂಬರ್​ ಭಾಗಿಯಾಗಿದ್ದರು. ಆ ಪ್ರಕರಣ ಸಂಬಂಧ ಸುಧಾಕರ್ ವಿರುದ್ಧ ವಾರೆಂಟ್ ಇಶ್ಯೂ ಆಗಿತ್ತು. ಅಲ್ಲದೇ ಮಾರ್ಟಿನ್ ಸಿನಿಮಾ‌ ವಿಚಾರವಾಗಿ ಕೂಡ ವಿವಾದ ಆಗಿತ್ತು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಪಾಲಜಿ ಲೆಟರ್ ಬರೆಸಿಕೊಂಡು ವಿಡಿಯೋ ಡಿಲೀಟ್​ ಮಾಡಿಸಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಸುಧಾಕರ್ ಗೌಡನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment