/newsfirstlive-kannada/media/post_attachments/wp-content/uploads/2024/07/YSR-Congress_Pawan-Kalyan.jpg)
ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ನಾಯಕತ್ವದ ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ ವೈಎಸ್ಆರ್ ಕಾಂಗ್ರೆಸ್ಸನ್ನು ಹೀನಾಯವಾಗಿ ಸೋಲಿಸಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದು ಇನ್ನೂ 2 ತಿಂಗಳು ಕಳೆದಿಲ್ಲ ಆಗಲೇ ದ್ವೇಷದ ರಾಜಕೀಯ ಶುರುವಾಗಿದೆ. ಈ ಹಿಂದೆ ತಮ್ಮನ್ನು ಟಾರ್ಗೆಟ್ ಮಾಡಿದ್ದ ವೈಎಸ್ಆರ್ ಕಾಂಗ್ರೆಸ್ ಮೇಲೆ ಟಿಡಿಪಿ ದಾಳಿ ಮುಂದುವರಿಸಿದೆ.
ಇನ್ನು, ಆಂಧ್ರದ ಪಲ್ನಾಡು ಜಿಲ್ಲಾ ವಿನುಕೊಂಡ ಎಂಬಲ್ಲಿ ರಷೀದ್ ಎಂಬ ವೈಎಸ್ಆರ್ ಕಾಂಗ್ರೆಸ್ ಸ್ಥಳೀಯ ನಾಯಕನನ್ನು ಟಿಡಿಪಿ ಮುಖಂಡ ಜಿಲಾನಿ ಎಂಬ ಹಂತಕ ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ್ದಾನೆ. ಈ ಭೀಕರ ಕೊಲೆಗೆ ಇಡೀ ಆಂಧ್ರಪ್ರದೇಶವೇ ಬೆಚ್ಚಿಬಿದ್ದಿದೆ. ರಷೀದ್ ಕೊಲೆ ಬಗ್ಗೆ ಇದುವರೆಗೂ ಸಿಎಂ ಚಂದ್ರಬಾಬು ನಾಯ್ಡು ಆಗಲಿ, ಡಿಸಿಎಂ ಪವನ್ ಕಲ್ಯಾಣ್ ಆಗಲಿ ತುಟಿ ಬಿಚ್ಚಿಲ್ಲ. ಹಾಗಾಗಿ ಪವನ್ ಕಲ್ಯಾಣ್ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ.
ఎరా @PawanKalyan AP ని బీహార్ చేసేసారు కదరా అందరు కలిసి
— Praveen Reddy (@MPRAVEENREDDY13) July 18, 2024
? arachakalu dharunalu aagavu Andhra lo... Ruling lo unnadhi evaraina ilantivi control cheyyalerani andharu okate Ani malli prove aindhi.
— Prabhas Fan (@ivdsai)
🙏 arachakalu dharunalu aagavu Andhra lo... Ruling lo unnadhi evaraina ilantivi control cheyyalerani andharu okate Ani malli prove aindhi.
— Prabhas Fan (@ivdsai) July 17, 2024
">July 17, 2024
ಪವನ್ ಕಲ್ಯಾಣ್ ವಿರುದ್ಧ ಭುಗಿಲೆದ್ದ ಆಕ್ರೋಶ
ಪವನ್ ಕಲ್ಯಾಣ್ ಅವರೇ ಆಂಧ್ರಪ್ರದೇಶವನ್ನು ಬಿಹಾರ ಮಾಡಲು ಹೊರಟಿದ್ದೀರಾ? ಯಾಕೆ ಇನ್ನೂ ಕೊಲೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ನಿಮಗೆ ಅಧಿಕಾರ ಕೊಟ್ಟಿದ್ದು ದ್ವೇಷದ ರಾಜಕೀಯ ಮಾಡೋದಕ್ಕಾ? ಅಧಿಕಾರದಲ್ಲಿ ಯಾವುದೇ ಪಕ್ಷ ಇದ್ರೂ ಈ ರೀತಿ ಘಟನೆಗಳ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ರಾಕ್ಷಸ ಕೃತ್ಯ; ಆಂಧ್ರದಲ್ಲಿ ಜಗನ್ ಪಕ್ಷದ ಯುವ ನಾಯಕನ ಕೊಚ್ಚಿ ಕೊಲೆ; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ