/newsfirstlive-kannada/media/post_attachments/wp-content/uploads/2025/02/yaduveer-krishnadatta-chamaraja-wadiyar-Son-6.jpg)
ಮಹಾರಾಜ ಯದುವೀರ್ ದ್ವಿತೀಯ ಪುತ್ರನ ನಾಮಕರಣ ಮೈಸೂರು ಅರಮನೆಯ ಅಂಗಳದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎರಡನೇ ಪುತ್ರನಿಗೆ ಚಿರಂಜೀವಿ ಶ್ರೀ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ.
ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹದಿಂದ ನಮ್ಮ ಎರಡನೇ ಮಗನಿಗೆ ಅರಮನೆಯ ಸಂಪ್ರದಾಯದಂತೆ ನಾಮಕರಣ ನೆರವೇರಿದೆ.
ನಮ್ಮ ತಾಯಿಯವರಾದ ಶ್ರೀಮತಿ ಡಾ. ಪ್ರಮೋದಾ ದೇವಿ ಒಡೆಯರ್ ಅವರ ಆಧ್ವರ್ಯದಲ್ಲಿ ಚಿರಂಜೀವಿ ಶ್ರೀ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ ಎಂದು ಯದುವೀರ್ ಒಡೆಯರ್ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ದರ್ಶನ್ ವಿರುದ್ಧ ಮತ್ತೆ ಪೊಲೀಸರ ಸಂಚು’- ಡಿಗ್ಯಾಂಗ್ ಕೋರ್ಟ್‌ಗೆ ಹಾಜರಾದ ಬಳಿಕ ವಕೀಲರ ಆರೋಪ
ನಾಮಕರಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರತಿಯೊಬ್ಬ ಹಿತೈಷಿಗಳಿಗೂ ನಮ್ಮ ಹೃತ್ಪೂರ್ವಕವಾದ ವಂದನೆಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ