newsfirstkannada.com

ಇದು ಅತ್ಯಂತ ಕೆಟ್ಟ ಕ್ಯಾಪ್ಟನ್ಸಿ -ಹಾರ್ದಿಕ್ ಪಾಂಡ್ಯ ವಿರುದ್ಧ ಪಠಾಣ್ ಆಕ್ರೋಶ

Share :

Published March 28, 2024 at 2:39pm

    ಮುಂಬೈ ಕ್ಯಾಪ್ಟನ್ ಪಾಂಡ್ಯ ವಿರುದ್ಧ ಪಠಾಣ್ ಅಸಮಾಧಾನ

    SRH ವಿರುದ್ಧ ಭಾರೀ ಮುಖಭಂಗ ಅನುಭವಿಸಿದ MI

    11 ಓವರ್​ಗಳಲ್ಲಿ 160+ ರನ್​, ಅದಕ್ಕೆ ಕಾರಣ ಕೊಟ್ಟ ಪಠಾಣ್

ನಿನ್ನೆ ನಡೆದ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್​ಗಳಿಸಿತು. ಅಭಿಷೇಕ್ ಶರ್ಮಾ, ಟ್ರಾವೀಸ್ ಹೆಡ್​, ಮಾರ್ಕರಮ್ ಹಾಗೂ ಕ್ಲಾಸೆನ್ ಮುಂಬೈ ತಂಡದ ಬೌಲರ್​​ಗಳನ್ನು ಮನಬಂದಂತೆ ದಂಡಿಸಿದರು.

ಮುಂಬೈ ತಂಡದ ಕಳಪೆ ಬೌಲಿಂಗ್ ಪ್ರದರ್ಶನ ಕಂಡು ಮಾಜಿ ಕ್ರಿಕೆಟಿಗ ಯುಸೂಫ್ ಪಠಾಣ್ ಬೇಸರ ವ್ಯಕ್ತಪಡಿಸಿದ್ದಾರೆ. ಸನ್​ರೈಸರ್ಸ್​ ತಂಡವು ಬೌಂಡರಿ, ಸಿಕ್ಸರ್ ಬಾರಿಸುತ್ತಿರುವ ಹೊತ್ತಿನಲ್ಲಿ ಕ್ಯಾಪ್ಟನ್ ಪಾಂಡ್ಯ ಮಾಡ್ತಿರುವ ರೀತಿ ಸರಿ ಇಲ್ಲ. ನನ್ನ ಪ್ರಕಾರ ಇದು ಕೆಟ್ಟ ಕ್ಯಾಪ್ಟನ್ಸಿ ಎಂದು ಜರಿದಿದ್ದಾರೆ.

ಏನಂದ್ರು ಪಠಾಣ್..?
ಸನ್‌ರೈಸರ್ಸ್ ಹೈದರಾಬಾದ್ 11 ಓವರ್‌ಗಳಲ್ಲಿ 160 ಕ್ಕಿಂತ ಹೆಚ್ಚು ರನ್ ಗಳಿಸಿದೆ. ಜಸ್ಪ್ರೀತ್ ಬುಮ್ರಾ ಅವರಿಗೆ ಇಲ್ಲಿಯವರೆಗೆ ಕೇವಲ 1 ಓವರ್ ಏಕೆ ನೀಡಲಾಗಿದೆ? ನಿಮ್ಮ ಉತ್ತಮ ಬೌಲರ್ ಬೌಲ್ ಮಾಡಬೇಕು. ಇದು ಕೆಟ್ಟ ನಾಯಕತ್ವ ಎಂದು ನಾನು ಭಾವಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IPLನಲ್ಲಿ ರೋಹಿತ್​ ಶರ್ಮಾ ವಿಶೇಷ ಸಾಧನೆ; ಮುಂಬೈ ಇಂಡಿಯನ್ಸ್​​ನಿಂದ ಗೌರವ

ಇನ್ನು, ಬೂಮ್ರಾ ಅವರಿಗೆ ಪಾಂಡ್ಯ ಇನ್ನಿಂಗ್ಸ್​ನ 4ನೇ ಓವರ್ ಎಸೆಯಲು ನೀಡಿದ್ದರು. ತಮ್ಮ ಕೋಟಾದ ಮೊದಲ ಓವರ್​ನಲ್ಲಿ ಬೂಮ್ರಾ ಕೇವಲ 5 ರನ್​​ನೀಡಿದ್ದರು. ಹೀಗಿದ್ದೂ, 11 ಓವರ್​ಗಳವರೆಗೆ ಬೂಮ್ರಾಗೆ ನೀಡದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ಬೂಮ್ರಾಗೆ ಮೊದಲೇ ಓವರ್​ ನೀಡಿದ್ದರೆ, ರನ್​ ಕಂಟ್ರೋಲ್ ಮಾಡಬಹುದಿತ್ತು, ವಿಕೆಟ್ ಕೂಡ ಬೀಳುವ ಸಾಧ್ಯತೆ ಇತ್ತು ಅನ್ನೋದು ಕೆಲವರ ವಾದವಾಗಿದೆ. ಕ್ವೇನಾ, ಪಾಂಡ್ಯ, ಕಾರ್ಟೀಜಾ ತಲಾ ನಾಲ್ಕು ಓವರ್ ಬಾಲ್ ಮಾಡಿ ಕ್ರಮವಾಗಿ 66, 46, 57 ರನ್​ಗಳನ್ನು ನೀಡಿದ್ದಾರೆ. ಚಾವ್ಲಾ, ಮುಲಾನಿ ಎರಡೆರಡು ಓವರ್ ಬಾಲ್ ಮಾಡಿ 34, 33 ರನ್​ ನೀಡಿದ್ದಾರೆ. ಇನ್ನು ನಾಲ್ಕು ಓವರ್​ ಬಾಲ್ ಮಾಡಿರುವ ಬೂಮ್ರಾ 36 ರನ್​ ನೀಡಿದ್ದಾರೆ.

ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಎಸ್​ಆರ್​​ಹೆಚ್​​ 20 ಓವರ್​ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 277 ರನ್​ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್​ 5 ವಿಕೆಟ್ ಕಳೆದುಕೊಂಡ 245 ರನ್​ಗಳಿಸಿ ಸೋಲಿಗೆ ಶರಣಾಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಅತ್ಯಂತ ಕೆಟ್ಟ ಕ್ಯಾಪ್ಟನ್ಸಿ -ಹಾರ್ದಿಕ್ ಪಾಂಡ್ಯ ವಿರುದ್ಧ ಪಠಾಣ್ ಆಕ್ರೋಶ

https://newsfirstlive.com/wp-content/uploads/2024/03/PANDYA-2.jpg

Load More