ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಭ್ರಮ
ಮಾನಸ ಗಂಗೋತ್ರಿ ಅಂಗಳದಲ್ಲಿ ಮೊದಲ ಕಾರ್ಯಕ್ರಮ
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಹದೇವಪ್ಪ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮಕ್ಕೆ ಮಾನಸ ಗಂಗೋತ್ರಿ ಅಂಗಳದಲ್ಲಿ ಮುನ್ನಡಿ ಬರೆಯಲಾಯಿತು. ಯುವ ಸಮೂಹವನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ ಯುವಸಂಭ್ರಮ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ಆ ಮೂಲಕ ದಸರೆಯ ಸಂಭ್ರಮ ಕಳೆಗಟ್ಟಿತು.
ಎಲ್ಲೆಲ್ಲೂ ಯುವ ಸಮೂಹ. ಶಿಳ್ಳೆ, ಚಪ್ಪಾಳೆ, ಕೇಕೆಯ ಜೊತೆಗೆ ಜೈಕಾರ. ವೇದಿಕೆ ಮೇಲೆ ನೃತ್ಯಗಾರರಿಂದ ಪ್ರದರ್ಶನ ಒಂದೆಡೆ ನಡೆಯುತ್ತಿದ್ರೆ. ಮುಂಭಾಗದಲ್ಲಿ ಯುವಕ -ಯುವತಿಯರಿಂದ ಸಂಭ್ರಮವೋ ಸಂಭ್ರಮ.
ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಭ್ರಮ ಮನೆ ಮಾಡತೊಡಗಿದೆ. ನಾಡಹಬ್ಬ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಯುವ ದಸರಾಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಮಾನಸ ಗಂಗೋತ್ರಿಯ ಅಂಗಳದಲ್ಲಿ ನಟ ಶ್ರೀ ಮುರುಳಿ, ನಟಿ ರುಕ್ಮಿಣಿ ವಸಂತ್ ಚಾಲನೆ ನೀಡಿದ್ರು. ಈ ವೇಳೆ ಸಚಿವ ಮಹದೇವಪ್ಪ ಸೇರಿ ಮೈಸೂರು ಜಿಲ್ಲಾಡಳಿತ ಸಾಥ್ ನೀಡಿದ್ರು. ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಹದೇವಪ್ಪ, ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿ ಅಂತ ಕರೆ ನೀಡಿದ್ರು.
ಚುಮು ಚುಮು ಚಳಿಯ ನಡುವೆ ಸಂಗೀತ ರಸದೌತಣ ಹುಚ್ಚೆದ್ದು ಕುಣಿದ ಯುವಸಮುದಾಯ ಯುವಸಂಭ್ರಮಕ್ಕೆ ಸಾಕ್ಷಿಯಾಯಿತು. ಮೈಸೂರು ದಸರಾ ಹಾಗೂ ಚಲನಚಿತ್ರಕ್ಕೆ ಮೈಸೂರು ಜನತೆಯ ಬೆಂಬಲಕ್ಕೆ ನಟಿ ರುಕ್ಮಿಣಿ, ನಟ ಶ್ರೀಮುರುಳಿ ಮನಸೋತ್ರು.
ಒಟ್ಟಾರೆ ಮೊದಲ ದಿನವೇ ಯುವ ದಸಾರದಲ್ಲಿ ಮೈಸೂರಿನ ಯುವ ಜನತೆ ಮಿಂದೆದ್ರು. ಈ ಸಂತಸ, ಸಂಭ್ರಮ ಮತ್ತಷ್ಟು ದಿನಗಳ ಕಾಲ ಇರಲಿದ್ದು. ಯುವ ದಸರಾವನ್ನು ಕಣ್ತುಂಬಿಕೊಂಡು ಕುಣಿದು ಕುಪ್ಪಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ