newsfirstkannada.com

ಫ್ಯಾನ್ಸ್​ ಮನಗೆದ್ದ ‘ಯುವ’.. ಯುವರಾಜನ ನಟನೆಗೆ ಫುಲ್​ ಖುಷ್​

Share :

Published March 30, 2024 at 7:09pm

Update March 30, 2024 at 7:12pm

  ಸ್ಯಾಂಡಲ್​ವುಡ್​ನಲ್ಲಿ ಯುವರಾಜನದ್ದೇ ದರ್ಬಾರ್​.. ಫ್ಯಾನ್ಸ್​ ಮನಗೆದ್ದ ರಾಜ್​ ಕುಡಿ

  ಯುವರಾಜನ ನವ ಅವತಾರಕ್ಕೆ ಫ್ಯಾನ್ಸ್​ ಹರ್ಷೋದ್ಗಾರ.. ಬಹುತೇಕ ಟಿಕೆಟ್ ಸೋಲ್ಡ್ ಔಟ್​

  ಯುವರಾಜನ ಮೊದಲ ಸಿನಿಮಾ ‘ಯುವ’ ಹೇಗಿದೆ? ರೆಸ್ಪಾನ್ಸ್​ ಹೇಗಿದೆ? ಈ ಸ್ಟೋರಿ ಓದಿ

ಸದ್ಯ ಸಾಂಡಲ್​ವುಡ್​ನಲ್ಲಿ ಯುವರಾಜನದ್ದೇ ಹವಾ. ದೊಡ್ಮನೆ  ಕುಡಿಯ ಮೊದಲ ಸಿನಿಮಾ ನೋಡಿದ ಅಭಿಮಾನಿಗಳ ಬಾಯಲ್ಲಂತೂ ಯುವರಾಜನದ್ದೇ ಹರ್ಷೋದ್ಗಾರ. ಅಷ್ಟರ ಮಟ್ಟಿಗೆ ‘ಯುವ’ ಅಭಿಮಾನಿಗಳ ಮನ ಗೆದ್ದಿದೆ.

ಹೌದು. ಡಾ. ರಾಜ್​ ಕುಮಾರ್​ ಮೊಮ್ಮಗ, ರಾಘವೇಂದ್ರ ರಾಜ್​ಕುಮಾರ್​ ಮಗನ ‘ಯುವ’ ಸಿನಿಮಾದ ಸದ್ಯ ಸಕ್ಸಸ್​​ ದಾರಿಯಲ್ಲಿ ಸಾಗುತ್ತಿದೆ. ಮೊದಲ ದಿನವೇ ಅಭಿಮಾನಿಗಳ ಮನ ಗೆದ್ದಿರುವ ಈ ಸಿನಿಮಾಗೆ ಸ್ಯಾಂಡಲ್​ವುಡ್​ನಲ್ಲಿ ಸೂಪರ್​​​ ರೆಸ್ಪಾನ್ಸ್​ ಸಿಗುತ್ತಿದೆ.

ರಾಜ್​ ಕುಟುಂಬದ ಮೂರನೇ ತಲೆಮಾರು ಅಷ್ಟೊಂದು ಸಕಸ್ಸ್​ ಕಂಡಿಲ್ಲ ಎಂಬ ಬೇಸರ ಅಭಿಮಾನಿಗಳಿತ್ತು. ಆದರೆ ಅವೆಲ್ಲವನ್ನು ಯುವರಾಜ್​ ಅಳಿಸಿ ಹಾಕಿದ್ದಾರೆ. ಸದ್ಯ ಥಿಯೇಟರ್​ನಲ್ಲಿ ಯುವನ ದರ್ಬಾರ್​ ನಡೆಯುತ್ತಿದೆ. ಅಭಿಮಾನಿಗಳಂತೂ ದಿವಂಗತ ಪುನೀತ್​ ರಾಜ್​ ಕುಮಾರ್​ ಅವರನ್ನು ಯುವ ರಾಜ್​ಕುಮಾರ್​ನಲ್ಲಿ ಕಾಣುತ್ತಿದ್ದಾರೆ.

ಸೋಲ್ಡ್​ ಔಟ್​​

ಸದ್ಯ ಯುವ ಸಿನಿಮಾದ ಕುರಿತು ಹೊರಬಿದ್ದ ಮಾಹಿತಿ ಪ್ರಕಾರ ಬಹುತೇಕ ಶೋಗಳು ಸೋಲ್ಡ್ ಔಟ್​ ಆಗಿದೆಯಂತೆ. ಇಂದು ಮತ್ತು ನಾಳೆ ಯುವ ಸಿನಿಮಾಗೆ ಡಿಮ್ಯಾಂಡ್​ ಹೆಚ್ಚಿದೆಯಂತೆ. ಮಾಹಿತಿ ಪ್ರಕಾರ ಮೊದಲ ದಿನವೇ 7 ರಿಂದ 8 ಕೋಟಿಯಷ್ಟು ಯುವ ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಅದಕ್ಕಿಂತ ಜಾಸ್ತಿ ಕಲೆಕ್ಷನ್​ ಮಾಡಿದೆ ಎಂದು ಬರೆದು ಹಾಕುತ್ತಿದ್ದಾರೆ. ಅಂದಹಾಗೆಯೇ ಇದಕ್ಕೆಲ್ಲ ಚಿತ್ರತಂಡ ಉತ್ತರ ನೀಡಲಿದೆ.

ಟ್ರೆಂಡಿಂಗ್​ನಲ್ಲಿ ಯುವ

ಸಾಮಾಜಿಕ ಜಾಲತಾಣದಲ್ಲೂ ಯುವ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. ಅನೇಕರು ಈ ಸಿನಿಮಾ ನೋಡಿ ರಿವ್ಯೂವ್​ ಬರೆದು ಹಾಕುತ್ತಿದ್ದಾರೆ. ಯುವ ರಾಜ್​ಕುಮಾರ್​ ನಟನೆ, ಫೈಟ್​ ಬಗ್ಗೆ ಹೊಗಳಿ ಬರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವ ಸಿನಿಮಾ ಸಾಂಗ್​, ಡೈಲಾಗ್​, ಫೈಟ್​ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ ಮನಗೆದ್ದ ‘ಯುವ’.. ಯುವರಾಜನ ನಟನೆಗೆ ಫುಲ್​ ಖುಷ್​

https://newsfirstlive.com/wp-content/uploads/2024/03/yuva-movie-1.jpg

Load More