newsfirstkannada.com

ಕಾಲೇಜ್​ ಸ್ಟೂಡೆಂಟ್​ ಆಗಿ ಎಂಟ್ರಿ ಕೊಡಲು ‘ಯುವ’ ರೆಡಿ.. ಟ್ರೇಲರ್​ ಮೂಲಕ ನಿರೀಕ್ಷೆ ದುಪ್ಟಟ್ಟು ಮಾಡಿದ ದೊಡ್ಡನೆ ಕುಡಿ

Share :

Published March 21, 2024 at 2:35pm

Update March 21, 2024 at 2:36pm

    ದೊಡ್ಮನೆ ಕುಡಿಯ ‘ಯುವ’ ಸಿನಿಮಾದ ಟ್ರೇಲರ್​ ಲಾಂಚ್​

    ಅಪ್ಪ-ಮಗನ ಬಾಂಧವ್ಯವನ್ನು ಕಟ್ಟಿಕೊಂಡ ಸಿನಿಮಾವಿದು

    ಮಾರ್ಚ್ 29ಕ್ಕೆ ತೆರೆ ಮೇಲೆ ಬರಲು ಯುವರಾಜ್​ ಕುಮಾರ್​ ರೆಡಿ

ಯುವ.. ಯುವರಾಜ್​.. ಯುವರಾಜ್​ ಕುಮಾರ್​. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸೌಂಡ್​ ಮಾಡಲು ರೆಡಿಯಾದ ರಾಜ್​ ಕುಟುಂಬದ ಕುಡಿ. ತನ್ನ ಹೆಸರನ್ನೇ ಇಟ್ಟುಕೊಂಡು ಮೊದಲ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಲು ಹೊರಟಿದ್ದಾರೆ. ಇಂದು ಇವರ ನಟನೆಯ ‘ಯುವ’ ಸಿನಿಮಾದ ಟ್ರೇಲರ್​ ಲಾಂಚ್ ಆಗಿದ್ದು,​ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿಸಿದ್ದಾರೆ.

ಆ್ಯಕ್ಟಿಂಗ್​, ಫೈಟಿಂಗ್​ , ಡ್ಯಾನ್​ನಲ್ಲಿ ಸಖತ್​ ಸೈ ಎನಿಸಿಕೊಂಡಿರುವ ಯುವರಾಜ್​ ಕುಮಾರ್​ ‘ಯುವ’ ಸಿನಿಮಾದಲ್ಲಿ ಕಾಲೇಜ್ ಸ್ಟೂಡೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್​ ಡೈಲಾಗ್​ ಹೊಡೆಯುತ್ತಾ ಪುನೀತ್​ ರಾಜ್​ ಕುಮಾರಂತೆ ಕಾಣಿಸುವ ಯುವ ಅಭಿಮಾನಿಗಳ ಮನಗೆದ್ದಿದ್ದಾರೆ. ಯುವನಿಗೆ ನಾಯಕಿಯಾಗಿ ಸಪ್ತಮಿ ಗೌಡ ಮಿಂಚಿದ್ದಾರೆ.

ಕಾಲೇಜು ಜೀವನದ ಗ್ಯಾಂಗ್​ವಾರ್​ನಿಂದ ಹಿಡಿದು, ತಂದೆ-ಮಗನ ಬಾಂಧವ್ಯವನ್ನು ಈ ಸಿನಿಮಾ ಕಟ್ಟಿಕೊಟ್ಟಂತೆ ಮೇಲ್ನೋಟಕ್ಕೆ ಕಂಡಿದೆ. ಇದಲ್ಲದೆ, ಜೀವನದಲ್ಲಿ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುವ ಯುವ, ಫುಡ್​ ಡೆಲಿವರಿ ಬಾಯ್​ ಆಗಿಯೂ ಕೆಲಸ ಮಾಡೋದನ್ನ ಟ್ರೇಲರ್​ ಬಿಟ್ಟುಕೊಟ್ಟಿದೆ.

ಅಂದಹಾಗೆಯೇ ಸಂತೋಷ್ ಆನಂದ್ ರಾಮ್ ಈ ಸಿನಿಮಾಗೆ ಆ್ಯಕ್ಷನ್​ ಕಟ್​​ ಹೇಳಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಯುವ ಸಿನಿಮಾ ಮೂಡಿಬಂದಿದೆ. ಇನ್ನು ಬಿಡುಗಡೆ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 29ಕ್ಕೆ ರಾಜ್ಯಾದ್ಯಂತ ಅದ್ಧೂರಿ ಬಿಡುಗಡೆಗೆ ಯುವ ರೆಡಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಲೇಜ್​ ಸ್ಟೂಡೆಂಟ್​ ಆಗಿ ಎಂಟ್ರಿ ಕೊಡಲು ‘ಯುವ’ ರೆಡಿ.. ಟ್ರೇಲರ್​ ಮೂಲಕ ನಿರೀಕ್ಷೆ ದುಪ್ಟಟ್ಟು ಮಾಡಿದ ದೊಡ್ಡನೆ ಕುಡಿ

https://newsfirstlive.com/wp-content/uploads/2024/03/Yuva.jpg

Load More