/newsfirstlive-kannada/media/post_attachments/wp-content/uploads/2024/03/yuva-4.jpg)
ಸ್ಯಾಂಡಲ್​ವುಡ್​ನಲ್ಲಿ ಇಂದಿನಿಂದ ಯುವ ಘರ್ಜನೆ ಶುರುವಾಗಲಿದೆ. ಪವರ್ ​ಹೌಸ್​ನಿಂದ ಮತ್ತೊಂದು ಪವರ್​​ಫುಲ್ ವೆಪನ್​​​​​ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದೆ. ಹೌದು, ಅಣ್ಣಾವ್ರ ಮೊಮ್ಮಗ, ದೊಡ್ಮನೆಯ ಫ್ಯೂಚರ್ ಸ್ಟಾರ್​ ಯುವರಾಜ್ ಕುಮಾರ್ ನಟನೆಯ​ ಚೊಚ್ಚಲ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಸಖತ್​ ಸೌಂಡ್​ ಮಾಡಲು ಸಜ್ಜಾಗಿ ನಿಂತಿದೆ.
/newsfirstlive-kannada/media/post_attachments/wp-content/uploads/2024/03/yuva-1-1.jpg)
ಕಳೆದ ಒಂದು ವರ್ಷದಿಂದ ದೊಡ್ಮನೆ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಎದುರು ನೋಡ್ತಿರುವ 'ಯುವ' ಸಿನಿಮಾ ಇಂದು ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ. ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ಯುವ ಘರ್ಜನೆ ಆರಂಭವಾಗಲಿದ್ದು, ಯುವ ಸಂಭ್ರಮ ಜೋರಾಗಿದೆ.
ಯುವ ರಿಲೀಸ್​ ಹಿನ್ನೆಲೆ ಥಿಯೇಟರ್​ಗಳ ಮುಂದೆ ಹಬ್ಬದ ಕಳೆ ಹೆಚ್ಚಿದೆ. ಕೆಜಿ ರಸ್ತೆಯ ನರ್ತಕಿ ಬಳಿ ಅಪ್ಪು ಮತ್ತು ಯುವ ರಾಜ್ ಕುಮಾರ್ ಅವರ 60 ಅಡಿ ಕಟೌಟ್​ ತಲೆ ಎತ್ತಿದೆ. ಜೆಪಿ ನಗರದ ಸಿದ್ದೇಶ್ವರದಲ್ಲಂತೂ ದೊಡ್ಡ ಉತ್ಸವವೇ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಷ್ಟೇ ಅಲ್ಲ ಹೊಸಪೇಟೆ, ದಾವಣೆಗೆರೆ, ಹಾಸನ, ಚಾಮರಾಜನಗರ ಸೇರಿ ಬಹುತೇಕ ಎಲ್ಲ ಜಿಲ್ಲೆಗಳು ಯುವನ ಎಂಟ್ರಿಗೆ ಸಜ್ಜಾಗಿದೆ.
/newsfirstlive-kannada/media/post_attachments/wp-content/uploads/2024/03/yuva-2.jpg)
ಇನ್ನು, ಜಬರ್​ದಸ್ತ್​ ಟ್ರೇಲರ್​, ವೆರೈಟಿ ಸಾಂಗ್​ಗಳಿಂದ ಕ್ರೇಜ್ ಹೆಚ್ಚಿಸಿರುವ ಯುವ, ಮೊದಲ ದಿನವೇ ಬಿಗ್ ಓಪನಿಂಗ್ ಮಾಡುವ ಲೆಕ್ಕಾಚಾರದಲ್ಲಿದೆ. ಚೊಚ್ಚಲ ಚಿತ್ರದಲ್ಲೇ ಫೈಟ್, ಡ್ಯಾನ್ಸ್​, ಡೈಲಾಗ್​ ಮೂಲಕ ಅಬ್ಬರಿಸೋ ಸೂಚನೆ ಕೊಟ್ಟಿರುವ ಯುವ ಬಾಕ್ಸಾಫೀಸ್​ನಲ್ಲೂ ಧೂಳೆಬ್ಬಿಸುವ ನಿರೀಕ್ಷೆ ಇದೆ. ಇನ್ನು ಸಂತೋಷ್ ಆನಂದ್ ರಾಮ್ ಡೈರೆಕ್ಷನ್, ಹೊಂಬಾಳೆ ಫಿಲಂಸ್ ಪ್ರೊಡಕ್ಷನ್​ ಚಿತ್ರದ ಕಿಕ್ ಹೆಚ್ಚಿಸಿದೆ. ಸಪ್ತಮಿ ಗೌಡ ನಾಯಕಿಯಾಗಿದ್ದು, ಹೊಸ ಜೋಡಿ ಭರವಸೆ ಮೂಡಿಸಿದೆ. ಇದೆಲ್ಲದರ ಜೊತೆ ಯುವ ರಾಜ್ ಕುಮಾರ್, ಪವರ್​ಸ್ಟಾರ್ ಪುನೀತ್ ರಾಜ್ ಕುಮಾರ್​ ಲೆಗೆಸಿನಾ ಮುಂದುವರಿಸ್ತಾರೆ ಅನ್ನೋ ಅಭಿಪ್ರಾಯ ಕುತೂಹಲ ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us