/newsfirstlive-kannada/media/post_attachments/wp-content/uploads/2024/06/Yuva-rajkumar.jpg)
ಬೆಂಗಳೂರು: ನಿನ್ನ ಬಿಡಲ್ಲ ನಾನು. ಸುಲಭವಾಗಿ ಡಿವೋರ್ಸ್​​ ತೆಗೆದುಕೊಳ್ಳಲು ಆಗಲ್ಲ. ನಿನ್ನನ್ನು ನಾನು ಬೀದಿಗೆ ತರ್ತೇನೆ ಎಂದು ಶ್ರೀದೇವಿ ಭೈರಪ್ಪ ನಟ ಯುವ ರಾಜ್​ಕುಮಾರ್​ಗೆ ಬೆದರಿಕೆ ಹಾಕಿದ್ದಾಳೆ. ಆಕೆ ಬೆದರಿಕೆ ಹಾಕಿರೋ ಮೆಸೇಜ್​ಗಳು ನಮ್ಮ ಬಳಿ ಇವೆ ಎಂದು ಯುವ ರಾಜ್​​ಕುಮಾರ್​ ಪರ ವಕೀಲರಾದ ಪ್ರಸಾದ್​ ಆರೋಪ ಮಾಡಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಕೀಲರಾದ ಪ್ರಸಾದ್​ ಅವರು, ಶ್ರೀದೇವಿ ಒಳ್ಳೆ ಹುಡುಗಿ ಅಲ್ಲ ಎಂದು ಹಲವರು ಹೇಳಿದ್ರು ಯುವ ರಿಸ್ಕ್​ ತಗೊಂಡು ಮದುವೆಯಾದ. ಇಂದಲ್ಲ, ನಾಳೆ ಬದಲಾಗುತ್ತಾಳೆ ಎಂದು ಕಾದ. ಮಗು ಮಾಡಿಕೊಳ್ಳಲು ಹಿಂದೇಟು ಹಾಕಿದ್ದ ಆಕೆ ಯುವ ಅವರರಿಗೆ ಬೈಯುತ್ತಿದ್ದಳು ಎಂದು ಪ್ರಸಾದ್​ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/Laywer.jpg)
ಇನ್ನು, ಆಕೆ ಇನ್ನೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಯುವ ರಾಜ್​ಕುಮಾರ್​ ಅವರನ್ನು ತನ್ನ ಬಾಯ್​​ ಫ್ರೆಂಡ್​ ಜತೆ ಕಂಪೇರ್​ ಮಾಡುತ್ತಿದ್ರು. ಬಾಯ್​ ಫ್ರೆಂಡ್​ ಜತೆ ಮಗು ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದರು. ನೀನು ಚೆನ್ನಾಗಿಲ್ಲ, ನನ್ನ ಬಾಯ್​ ಫ್ರೆಂಡ್ ಚೆನ್ನಾಗಿದ್ದಾನೆ ಎಂದು ಯುವ ರಾಜ್​ಕುಮಾರ್​​ ಕಾಲೆಳೆಯುವುದು ಎಲ್ಲಾ ಮಾಡಿದ್ದಾರೆ ಎಂದು ಪ್ರಸಾದ್​ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ‘ಸ್ನೇಹಿತೆ ಜೊತೆ ಮದುವೆಯಾಗಿ ಸಹ ನಟಿ ಜತೆ ಲವ್’- ಯುವ ವಿಚ್ಛೇದನಕ್ಕೆ ಶ್ರೀದೇವಿ ಖಡಕ್ ರಿಪ್ಲೈ; ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us