/newsfirstlive-kannada/media/post_attachments/wp-content/uploads/2024/06/YUVA_RAJ_SHRIDEVI_3.jpg)
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ಗೆ ಇಂದು 14 ದಿನಗಳ ನ್ಯಾಯಾಂಗ ಬಂಧನ ಅಂತ್ಯವಾದರೆ, ಅತ್ತ ರಾಜ್ಕುಮಾರ್ ಮೊಮ್ಮಗ ಯುವ ರಾಜ್ಕುಮಾರ್ ಮತ್ತು ಸೊಸೆ ಶ್ರೀದೇವಿ ಭೈರಪ್ಪರವರ ವಿಚ್ಛೇದನ ಅರ್ಜಿಯನ್ನು ಕೋರ್ಟ್ ಇಂದು ವಿಚಾರಣೆ ನಡೆಯಲಿದೆ. ಆದರೆ ಡಿವೋರ್ಸ್ ಅರ್ಜಿ ವಿಚಾರಣೆಗೆ ಮುನ್ನ ಶ್ರೀದೇವಿಯವರು ಸಾಮಾಜಿಕ ಜಾಲತಾಣದಲ್ಲಿ ಮಹತ್ವದ ಪೋಸ್ಟ್ ಹಂಚಿಕೊಂಡಿದ್ದಾರೆ.
ಶ್ರೀದೇವಿಯವರು ‘ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತೆ ಎಂದು ನಾನು ನಂಬಿದ್ದೇನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
ನಟ ರಾಘವೇಂದ್ರ ರಾಜ್ಕುಮಾರ್ರವರ ಮಗ ಯುವರಾಜ್ ಕುಮಾರ್ ಜೂನ್ 6ನೇ ತಾರೀಖು ಡಿವೋರ್ಸ್ಗೆ ಅರ್ಜಿ ಹಾಕಿದ್ದರು. ಕೋರ್ಟ್ ಮೆಟ್ಟಿಲೇರಿದ್ದರು. ಮಾತ್ರವಲ್ಲದೆ ಪತ್ನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಫ್ಯಾಮಿಲಿ ಕೋರ್ಟ್ ಮುಂದಿನ ವಿಚಾರಣೆಯನ್ನ ಜುಲೈ 4ಕ್ಕೆ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಬರಲಿ ಮಳೆ.. ಹರಿಯಲಿ ಹೊಳೆ.. KRS ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಇಳಿಕೆ.. ಇಂದು ಎಷ್ಟಿದೆ ನೀರಿನ ಮಟ್ಟ?
ಈಗಾಗಲೇ ಡಿವೋರ್ಸ್ ವಿಚಾರವಾಗಿ ಶ್ರೀದೇವಿ ವಿದೇಶದಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಫ್ಯಾಮಿಲಿ ಕೋರ್ಟ್ಗೆ ಹಾಜರಾಗುವ ಮೂಲಕ ವಿಚಾರಣೆ ಎದುರಿಸಲಿದ್ದಾರೆ.
ಇದನ್ನೂ ಓದಿ: Rain Effects: ರಣಭೀಕರ ಪ್ರವಾಹಕ್ಕೆ 38 ಮಂದಿ ಬಲಿ, ಮಲೆನಾಡಿನ ಹಲವು ಜಲಪಾತಗಳಿಗೆ ನಿರ್ಬಂಧ
[caption id="attachment_72699" align="alignnone" width="800"] ಶ್ರೀದೇವಿ ಭೈರಪ್ಪ ಹಂಚಿಕೊಂಡ ಪೋಸ್ಟ್[/caption]
ಶ್ರೀದೇವಿ ಭೈರಪ್ಪ ಯಾರು? ಯಾವ ಊರು?
ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು. ಯುವ ಮತ್ತು ಶ್ರೀದೇವಿ ಪ್ರಾರಂಭದಲ್ಲಿ ಫ್ರೆಂಡ್ಸ್ ಆಗಿದ್ದರು. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಅಚ್ಚರಿಯ ಸಂಗತಿ ಎಂದರೆ 7 ವರ್ಷದಿಂದ ಈ ಜೋಡಿ ಪ್ರೀತಿಸಿ ಬಳಿಕ ವಿವಾಹವಾಗುತ್ತಾರೆ. 2019ರಲ್ಲಿ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ