ಕಾಶ್ಮೀರದಲ್ಲಾದ ನೋವಿಗೆ ಮಿಡಿದ ರಾಜ್ ಕುಟುಂಬ.. ಹುಟ್ಟುಹಬ್ಬದಂದು ಕೇಕ್ ಕತ್ತರಿಸಲು ನಿರಾಕರಿಸಿದ ಯುವ

author-image
Veena Gangani
Updated On
ಕಾಶ್ಮೀರದಲ್ಲಾದ ನೋವಿಗೆ ಮಿಡಿದ ರಾಜ್ ಕುಟುಂಬ.. ಹುಟ್ಟುಹಬ್ಬದಂದು ಕೇಕ್ ಕತ್ತರಿಸಲು ನಿರಾಕರಿಸಿದ ಯುವ
Advertisment
  • ಯುವ ರಾಜ್‍ಕುಮಾರ್ ಮನೆ ಮುಂದೆ ಜಮಾಯಿಸಿದ್ದ ಫ್ಯಾನ್ಸ್​
  • ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ನಟ ಯುವ ರಾಜ್​ ಕುಮಾರ್​
  • ಫ್ಯಾನ್ಸ್​ ತಂದಿದ್ದ ಕೇಕ್​ ಕಟ್​ ಮಾಡದ ನಟ ಯುವ

ಸ್ಯಾಂಡಲ್​ವುಡ್​ ನಟ ಯುವ ರಾಜ್​ಕುಮಾರ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಯುವ ರಾಜ್‍ಕುಮಾರ್ ಅವರ ನಿವಾಸದ ಮುಂದೆ ಜಮಾಯಿಸಿದ್ದರು. ಆದರೆ ನಿನ್ನೆ ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದ್ದಕ್ಕೆ ನಟ ಯುವ ರಾಜ್​ಕುಮಾರ್​ ಕೇಕ್ ಕತ್ತರಿಸಲಿಲ್ಲ.

publive-image

ಇದನ್ನೂ ಓದಿ:ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ

ಹುಟ್ಟುಹಬ್ಬಕ್ಕೆ ವಿಶೇಷವಾಗಿ ಎಕ್ಕ ಸಿನಿಮಾ ಟೀಸರ್ ಬಿಡುಗಡೆ ಆಗಬೇಕಿತ್ತು. ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಚಿತ್ರತಂಡ ಟೀಸರ್ ಬಿಡುಗಡೆಯನ್ನು ಮುಂದೂಡಿಕೆ ಮಾಡಿದೆ. ಬೆಳಗ್ಗೆ ಬಿಡುಗಡೆ ಆಗಬೇಕಿದ್ದ ಟೀಸರ್ ಇಂದು ಸಂಜೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತಾಡಿದ ನಟ ಯುವ ರಾಜ್‍ಕುಮಾರ್, ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು. ಕಾಶ್ಮೀರದ ಪಹಲ್ಗಾಂನಲ್ಲಿ ನಡೆದಿರೋ ದಾಳಿ ಖಂಡನೀಯ. ಈ ರೀತಿ ಮುಗ್ಧ ಜನರ ಕೊಲ್ಲೋದು ಸರಿಯಲ್ಲ. ದಾಳಿ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ ಆಗ್ಬೇಕು. ಮತ್ತೆ ಮತ್ತೆ ಈ ರೀತಿಯ ದಾಳಿ ಆಗ್ತಿದ್ದು, ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಕಾಶ್ಮೀರದಲ್ಲಿ ಯುವ ಸಾಂಗ್ ಶೂಟ್ ಆಗಿತ್ತು. ಯುವ ಸಿನಿಮಾದ ಒಂದು ಹಾಡನ್ನು ನಾವು ಲಡಾಕ್​ನಲ್ಲಿ ಚಿತ್ರೀಕರಣ ನಡೆಸಿದ್ವಿ. ಅಲ್ಲಿ ದಾಳಿಯ ಯಾವುದೇ ಅನುಭವ ಆಗಿರಲಿಲ್ಲ. ಅಲ್ಲಿ ಸೇನೆಯ ರಕ್ಷಣೆಯಿತ್ತು. ಯಾವುದೇ ಅಹಿತಕರ ಘಟನೆಗಳು ಆಗಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment