newsfirstkannada.com

ಯುವ ರಾಜ್ ಕುಮಾರ್‌ ಡಿವೋರ್ಸ್‌ ಕೇಸ್‌ಗೆ ಹೊಸ ಟ್ವಿಸ್ಟ್.. ವಿಚ್ಛೇದನ ಸಿಗೋದು ಕಷ್ಟ! ಕಾರಣವೇನು?

Share :

Published June 10, 2024 at 2:56pm

    ದೊಡ್ಡನೆಯಿಂದ ಈಗಾಗ್ಲೆ ದೂರ ಆಗಿರೋ ಯುವ ಪತ್ನಿ ಶ್ರೀದೇವಿ ಭೈರಪ್ಪ?

    ಗುರು ರಾಜಕುಮಾರ್ ವಿಚ್ಛೇದನದ ಅರ್ಜಿ‌ ಪರಿಗಣಿಸಿರುವ ಕೋರ್ಟ್

    ಯುವ ರಾಜ್‌ಕುಮಾರ್‌ಗೆ ತಕ್ಷಣಕ್ಕೆ ಡಿವೋರ್ಸ್ ನೀಡೋದು ಡೌಟ್!

ಬೆಂಗಳೂರು: ಸ್ಯಾಂಡಲ್​ವುಡ್‌ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ಬರಸಿಡಿಲಿನಂತೆ ಕೇಳಿ ಬಂದಿದೆ. ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾರೆ. ಯುವ ರಾಜ್‌ಕುಮಾರ್ ಅವರು ಈಗಾಗಲೇ ಫ್ಯಾಮಿಲಿ ಕೋರ್ಟ್​​ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿಚ್ಛೇದನ ಪ್ರಕರಣ ಸಂಚಲನ ಸೃಷ್ಟಿಸಿತ್ತು. ಆದರೆ ಯುವ ರಾಜ್‌ಕುಮಾರ್ ಅವರು ಡಿವೋರ್ಸ್ ಕೇಸ್ ಬೇರೆ ರೀತಿಯಾಗಿದೆ. ಯುವ ರಾಜ್‌ಕುಮಾರ್ ಅವರು ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವದಿಂದ ನೋಡಿಕೊಂಡ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಪತ್ನಿಯಿಂದ ನಾನು ಮಾನಸಿಕವಾಗಿ ಟಾರ್ಚರ್ ಅನುಭವಿಸಿದ್ದೇನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..! 

ಗುರು ರಾಜ್‌ ಕುಮಾರ್ ಅವರ ವಿಚ್ಛೇದನ ಅರ್ಜಿಯನ್ನು ಫ್ಯಾಮಿಲಿ ಕೋರ್ಟ್‌ ಪರಿಗಣಿಸಿದೆ. ಶ್ರೀದೇವಿ ಅವರಿಗೆ 1st ಅಡಿಷನಲ್ ಕೋರ್ಟ್​ನಿಂದ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಯುವ, ಶ್ರೀದೇವಿ ಡಿವೋರ್ಸ್ ಅರ್ಜಿಯ ವಿಚಾರಣೆಯನ್ನು ಜುಲೈ 4ನೇ ತಾರೀಖಿಗೆ ನಿಗದಿ ಮಾಡಲಾಗಿದೆ.

ಕೋರ್ಟ್​ನಲ್ಲಿ ಅರ್ಜಿ.. ಮುಂದೇನು?
ಈ ಡಿವೋರ್ಸ್ ಪ್ರಕರಣದಲ್ಲಿ ಯುವ ರಾಜ್‌ ಕುಮಾರ್ ಅವರು ಶ್ರೀದೇವಿ ಅವರಿಗೆ ಡಿವೋರ್ಸ್ ಕೊಡಲು ಒಪ್ಪಿದ್ದಾರೆ. ಆದರೆ ಶ್ರೀದೇವಿ ಅವರಿಗೆ ಇನ್ನೂ ವಿಚ್ಛೇದನದ ನೋಟಿಸ್ ತಲುಪಿಲ್ಲ. ಶ್ರೀದೇವಿ ಅವರು ಅಮೆರಿಕಾದಲ್ಲಿ ಇರುವ ಕಾರಣ ಈ ಬಗ್ಗೆ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು? 

ಈ ನೋಟಿಸ್ ಬಳಿಕ ಶ್ರೀದೇವಿ ಅವರಿಗೆ ಕೋರ್ಟ್ ಪ್ರಶ್ನೆ ಮಾಡಲಿದೆ. ಯುವ ರಾಜ್‌ಕುಮಾರ್ ಅವರಿಗೆ ಡಿವೋರ್ಸ್ ನೀಡುವುದಕ್ಕೆ ನಿಮಗೆ ಒಪ್ಪಿಗೆ ಇದೆಯಾ? ಇಲ್ಲವಾ? ಡಿವೋರ್ಸ್ ನೀಡಲ್ಲ ಅಂದ್ರೆ, ಆಕ್ಷೇಪಣೆ ಇರೋದು ಏನು? ಹೀಗೆ ಅವರ ಪ್ರತಿಕ್ರಿಯೆ ಕೇಳಿ ನ್ಯಾಯಾಲಯ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆ.

ಯುವರಾಜ್‌ಕುಮಾರ್ ಅವರ ಡಿವೋರ್ಸ್‌ ಕೇಸ್‌ನಲ್ಲಿ ಎರಡೂ ಕಡೆಯ ವಾದಗಳನ್ನು ಕೋರ್ಟ್ ಕೇಳಬೇಕಾಗುತ್ತದೆ. ಇದರ ಜೊತೆಯಲ್ಲೇ ವೇಟಿಂಗ್ ಪಿರಿಯಡ್ ಸಹ ನೋಡಬೇಕು. ನಂತರ ಕೋರ್ಟ್ ಈ ಪ್ರಕರಣದಲ್ಲಿ ತನ್ನ ಆದೇಶವನ್ನು ನೀಡುತ್ತೆ. ಈ ಎಲ್ಲಾ ಕಾನೂನು ಪ್ರಕ್ರಿಯೆಗಳ ಮುಗಿಯಬೇಕಿರೋದ್ರಿಂದ ತಕ್ಷಣಕ್ಕೆ ಡಿವೋರ್ಸ್ ನೀಡೋದು ಡೌಟ್ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವ ರಾಜ್ ಕುಮಾರ್‌ ಡಿವೋರ್ಸ್‌ ಕೇಸ್‌ಗೆ ಹೊಸ ಟ್ವಿಸ್ಟ್.. ವಿಚ್ಛೇದನ ಸಿಗೋದು ಕಷ್ಟ! ಕಾರಣವೇನು?

https://newsfirstlive.com/wp-content/uploads/2024/06/Yuva-Rajkumar-Divorce-6.jpg

Load More