Advertisment

ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು?

author-image
admin
Updated On
ಯುವರಾಜ್‌ ಕುಮಾರ್ ಡಿವೋರ್ಸ್‌ ಕೇಸ್‌ಗೆ ನಾಳೆ ಮೇಜರ್‌ ಡೇ.. ಕೋರ್ಟ್‌ನಲ್ಲಿ ದೊಡ್ಮನೆ ಕುಡಿ ಭವಿಷ್ಯ!
Advertisment
  • ದೊಡ್ಮನೆ ಮಗ ಯುವ ರಾಜ್‌ಕುಮಾರ್ ಡಿವೋರ್ಸ್‌ಗೆ ಮುಂದಾಗಿದ್ದೇಕೆ?
  • ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಯುವ ಬೆನ್ನಿಗೆ ನಿಂತಿದ್ದ ಶ್ರೀದೇವಿ!
  • ಯುವ ಸಿನಿಮಾ ರಿಲೀಸ್​ ವೇಳೆ ಯುವ, ಶ್ರೀದೇವಿ ಅವರು ದೂರ, ದೂರ

ಬೆಂಗಳೂರು: ಸ್ಯಾಂಡಲ್‌ವುಡ್ ಯುವರಾಜ ನಟ ಯುವ ರಾಜ್‌ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಶ್ರೀದೇವಿ ಅವರಿಂದ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇನ್ನೂ ಯುವ ರಾಜ್‌ಕುಮಾರ್ ಅವರಿಗೆ ವಿಚ್ಛೇದನ ಸಿಕ್ಕಿಲ್ಲ.

Advertisment

ಇದನ್ನೂ ಓದಿ:BREAKING: ಸ್ಯಾಂಡಲ್​ವುಡ್‌ನಲ್ಲಿ ಮತ್ತೊಂದು ಡಿವೋರ್ಸ್‌; ವಿಚ್ಛೇದನಕ್ಕೆ ಯುವ ರಾಜ್​ಕುಮಾರ್ ಡಿಸೈಡ್‌! 

ಯುವ ರಾಜ್‌ಕುಮಾರ್ ಅವರ ಡಿವೋರ್ಸ್‌ ಬಗ್ಗೆ ಡಾ.ರಾಜ್‌ ಕುಮಾರ್ ಕುಟುಂಬದ ಆಪ್ತರು ಮಾಹಿತಿ ನೀಡಿದ್ದಾರೆ. ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜ ಎನ್ನಲಾಗಿದೆ. ಸದ್ಯ ರಾಘಣ್ಣನ ಸೊಸೆ ಭಾರತದಲ್ಲಿ ಇಲ್ಲ. ಶ್ರೀದೇವಿ ಅವರು ಸದ್ಯ ಅಮೆರಿಕಾದಲ್ಲಿದ್ದು, ಅವರಿಗೆ ಇನ್ನೂ ವಿಚ್ಛೇದನ ಅರ್ಜಿಯ ಮಾಹಿತಿ ಸಿಕ್ಕಿಲ್ಲ. ಕಳೆದ 4 ದಿನಗಳ ಹಿಂದೆ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ಶ್ರೀದೇವಿ ಅವರಿಗೆ ವಿಚ್ಛೇದನದ ಅರ್ಜಿ ಸಿಕ್ಕಿಲ್ಲಿ. ಅಮೆರಿಕಾದಲ್ಲಿರುವ ಶ್ರೀದೇವಿ ಅವರು ವಿಚ್ಛೇದನದ ಅರ್ಜಿ ಸ್ವೀಕರಿಸಿದ ಬಳಿಕ ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದರ ಮೇಲೆ ಈ ಕೇಸ್ ನಿಂತಿದೆ. ಸದ್ಯಕ್ಕೆ ಶ್ರೀದೇವಿ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎನ್ನಲಾಗಿದೆ.

publive-image

ಯಾರು ಶ್ರೀದೇವಿ ಭೈರಪ್ಪ?
ಶ್ರೀದೇವಿ ಅವರು ಮೈಸೂರಿನಲ್ಲೇ ಹುಟ್ಟಿ ಬೆಳೆದು, ಅಲ್ಲಿಯೇ ಉನ್ನತ ಶಿಕ್ಷಣ ವ್ಯಾಸಾಂಗ ಮಾಡಿದ್ದಾರೆ. ಇವರು ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ ರೂವಾರಿ ಆಗಿದ್ದರು. ಸುಮಾರು 7 ವರ್ಷದ ಹಿಂದೆ ಶ್ರೀದೇವಿ ಹಾಗೂ ಯುವರಾಜ್ ಕುಮಾರ್ ಪರಿಚಯವಾಗಿತ್ತು. ಸ್ನೇಹ, ಪ್ರೀತಿ ಬಳಿಕ ಇಬ್ಬರು ಪ್ರೀತಿಸಿ ವಿವಾಹವಾಗಿದ್ದರು.

Advertisment

ಇದನ್ನೂ ಓದಿ:ನಿವೇದಿತಾಗೆ ಡಿವೋರ್ಸ್ ಕೊಟ್ಟಿದ್ದು ಯಾಕಂದ್ರೆ.. ಕೊನೆಗೂ ಕಾರಣ ಹೇಳಲು ಮುಂದೆ ಬಂದ ಚಂದನ್! 

2016ರಲ್ಲಿ ತೆರೆಕಂಡ ಯುವ ರಾಜ್‌ಕುಮಾರ್ ಅವರ ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಶ್ರೀದೇವಿ ಅವರು ಭಾಗಿಯಾಗಿದ್ದರು. ರನ್ ಆ್ಯಂಟನಿ ಪ್ರಮೋಷನ್‌ನಲ್ಲೂ ಶ್ರೀದೇವಿ ಭೈರಪ್ಪ ಅವರು ತೊಡಗಿಕೊಂಡಿದ್ದರು.
ಕಳೆದ ಆರೇಳು ತಿಂಗಳ ಹಿಂದೆಯೇ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಅವರು ದೂರ, ದೂರ ಆಗಿದ್ದರು. ಹಲವು ತಿಂಗಳಿಂದ ಯುವ ಜೊತೆ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಈ ಹಿಂದೆ ದೊಡ್ಮನೆಯ ಪ್ರತಿ ಕಾರ್ಯಕ್ರಮದಲ್ಲಿ ಇರ್ತಿದ್ದ ಶ್ರೀದೇವಿ ಅವರು ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯುವ ಸಿನಿಮಾ ಮಹೂರ್ತಕ್ಕೆ ಇದ್ದರೂ ರಿಲೀಸ್​ ವೇಳೆ ಶ್ರೀದೇವಿ ಅವರು ನಾಪತ್ತೆ ಆಗಿದ್ದರು. ಇದ್ದಕ್ಕಿದ್ದ ಹಾಗೆ ಯುವರಾಜ್ ಜೊತೆ ಅಂತರ ಕಾಯ್ದುಕೊಂಡು ಯುವ ಸಿನಿಮಾದ ಶೂಟಿಂಗ್, ಪ್ರಮೋಷನ್​ಗೂ ನಾಪತ್ತೆಯಾಗಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment