newsfirstkannada.com

ಡಾ.ರಾಜ್ ಹುಟ್ಟೂರಲ್ಲಿ ಮೊಮ್ಮಗ ‘ಯುವ’ ರಾಜ್​ಕುಮಾರ್​ನ ಮೂವಿಯ ಟೈಟಲ್ ಸಾಂಗ್ ರಿಲೀಸ್

Share :

Published February 25, 2024 at 12:42pm

  ಆನಂದ್​ ರಾಮ್ ನಿರ್ದೇಶನದಲ್ಲಿ ಯುವರಾಜ್​ನ ಯುವ ಸಿನಿಮಾ

  ಚಿತ್ರ ರಿಲೀಸ್​ಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು

  ಈಗಾಗಲೇ ಟೀಸರ್​ನಿಂದ ಸಖತ್ ಹವಾ ಸೃಷ್ಟಿಸಿರುವ ಯುವ ಚಿತ್ರ

ಯುವ ರಾಜ್‍ಕುಮಾರ್ ನಟನೆಯ ಚೊಚ್ಚಲ ಸಿನಿಮಾ ‘ಯುವ’ ಬಿಡುಗಡೆಗೆ ಸಜ್ಜಾಗಿದೆ. ಇದು ಯುವ ರಾಜ್‍ಕುಮಾರ್ ಅಭಿನಯದ ಮೊದಲ ಮೂವಿ ಆಗಿರೋದ್ರಿಂದ ದೊಡ್ಮನೆ ಅಭಿಮಾನಿಗಳು ಬಿಗ್​ ಸ್ಕ್ರೀನ್​​ನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಟೈಟಲ್ ಸಾಂಗ್ ಅನ್ನು ಮಾರ್ಚ್​ ಮೊದಲ ವಾರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.

ಹೀಗಾಗಿ ಸಿನಿಮಾದ ಪ್ರಚಾರ ಕಾರ್ಯಗಳಿಗೂ ಸಿನಿಮಾದ ಕಂಟೆಂಟ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಸಿನಿಮಾದ ಮೊದಲ ಹಾಡನ್ನು ಡಾ.ರಾಜ್ ಹುಟ್ಟೂರಾದ ಚಾಮರಾಜನಗರದಲ್ಲಿ ನಡೆಸಲು ತಯಾರಿ ನಡೆಸಲಾಗ್ತಿದೆ. ಮಾರ್ಚ್ ಮೊದಲ ವಾರದಲ್ಲಿ ದೊಡ್ಡ ಈವೆಂಟ್ ಮೂಲಕ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಅದರಂತೆ ಮಾರ್ಚ್ 28 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಈಗಾಗಲೇ ಚಿತ್ರತಂಡ ಅನೌನ್ಸ್ ಮಾಡಿದೆ.

ಯುವ ಸಿನಿಮಾ ಟೀಸರ್‌ನಿಂದಲೇ ಭಾರೀ ಕುತೂಹಲ ಮೂಡಿಸಿದೆ. ಯುವರಾಜ್​ಗೆ ಜೋಡಿಯಾಗಿ ಸಪ್ತಮಿಗೌಡ ಮಿಂಚಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಯುವ ಸಿನಿಮಾವನ್ನು ಹೊಂಬಾಳೆ ಫಿಲಂ ಸಂಸ್ಥೆಯವರು ನಿರ್ಮಾಣ ಮಾಡಿದ್ದಾರೆ. ಇದೆಲ್ಲದಕ್ಕೂ ಮೀಗಿಲಾಗಿ ಮೂವಿಯಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾ.ರಾಜ್ ಹುಟ್ಟೂರಲ್ಲಿ ಮೊಮ್ಮಗ ‘ಯುವ’ ರಾಜ್​ಕುಮಾರ್​ನ ಮೂವಿಯ ಟೈಟಲ್ ಸಾಂಗ್ ರಿಲೀಸ್

https://newsfirstlive.com/wp-content/uploads/2024/02/YUVARAJ_SAPTAMI_1.jpg

Load More