newsfirstkannada.com

BCCIಗೆ ಓಪನ್​ ಆಫರ್.. ಟೀಮ್ ಇಂಡಿಯಾಕ್ಕೆ ಯುವಿ ಎಂಟ್ರಿಯಾದ್ರೆ ಸಮಸ್ಯೆ ಬಗೆಹರಿಯುತ್ತಾ?

Share :

Published January 15, 2024 at 2:39pm

  2011ರ ವಿಶ್ವಕಪ್​ನಲ್ಲಿ ಆಲ್​​ರೌಂಡ್​ ಆಟದಿಂದ ಮಿಂಚಿದ್ದ ಯುವಿ

  2013ರ ಚಾಂಪಿಯನ್ಸ್​ ಟ್ರೋಫಿಯಲ್ಲೂ ಸಾಲಿಡ್​ ಪರ್ಫಾಮೆನ್ಸ್​

  ಟೀಮ್ ಇಂಡಿಯಾಕ್ಕೆ ಯುವಿ ಎಂಟ್ರಿಯಾದರೆ ಕಪ್ ಪಕ್ಕಾ ಗೆಲ್ಲುತ್ತಾ?

ಚುಟುಕು ವಿಶ್ವಕಪ್​ಗೆ ಸಿದ್ಧತೆ ಆರಂಭಿಸಿರೋ ಬಿಸಿಸಿಐಗೆ ದಿಗ್ಗಜ ಕ್ರಿಕೆಟಿಗ ಓಪನ್​ ಆಫರ್​ ಕೊಟ್ಟಿದ್ದಾರೆ. ಲೆಜೆಂಡರಿ ಕ್ರಿಕೆಟರ್​ ಕೊಟ್ಟಿರೋ ಆಫರ್ ಖಂಡಿತವಾಗಲೂ ಟೀಮ್​ ಇಂಡಿಯಾಗೆ ಸಹಾಯ ಮಾಡಲಿದೆ. ಆದ್ರೆ, ಬಿಸಿಸಿಐ ಈ ಆಫರ್​ನ ಒಪ್ಪುತ್ತಾ? ರಿಜೆಕ್ಟ್​ ಮಾಡುತ್ತಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಅಷ್ಟಕ್ಕೂ ಆ ದಿಗ್ಗಜ ಯಾರು, ಕೊಟ್ಟಿರೋ ಆಫರ್​ ಎಂತಾದ್ದು?

ಅಫ್ಘಾನ್​ ವಿರುದ್ಧದ ಟಿ20 ಸರಣಿಯೊಂದಿಗೆ ಟೀಮ್​ ಇಂಡಿಯಾದ ವಿಶ್ವಕಪ್​ ತಯಾರಿ ಆರಂಭವಾಗಿದೆ. ಜೂನ್​ನಲ್ಲಿ ನಡೆಯೋ ಟಿ20 ವಿಶ್ವಕಪ್​ ದಂಗಲ್​​ನಲ್ಲಿ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್​ ಹಾಕುವ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾಗಿದೆ. ಅದಕ್ಕಾಗಿ ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಯಿಂದಲೇ ಭರ್ಜರಿ ತಯಾರಿ ಆರಂಭಿಸಿದೆ.

BCCIಗೆ ಯುವರಾಜ್​ ಸಿಂಗ್​ ಓಪನ್​ ಆಫರ್​.!

ಬಿಸಿಸಿಐ & ಟೀಮ್​ ಮ್ಯಾನೇಜ್​ಮೆಂಟ್​, ಅಫ್ಘಾನ್​ ವಿರುದ್ಧದ ಸರಣಿಯಲ್ಲಿ ಯುವ ಹಾಗೂ ಅನುಭವಿಗಳನ್ನೊಳಗೊಂಡ ಬ್ಯಾಲೆನ್ಸ್​ಡ್​ ಟೀಮ್​ ಕಟ್ಟಿ ಸಕ್ಸಸ್​ ಕಂಡಿದೆ. ಟೀಮ್​ ಕಾಂಬಿನೇಷನ್​ ಜೊತೆಗೆ ಟೂರ್ನಿ ನಡೆಯೋ ವೆಸ್ಟ್​ ಇಂಡೀಸ್​ ಹಾಗೂ ಅಮೇರಿಕದ ಕಂಡೀಷನ್ಸ್ ತಕ್ಕಂತೆ ಸ್ಟ್ರಾಟಜಿಗಳನ್ನ ವರ್ಕೌಟ್​​ ಮಾಡ್ತಿದೆ. ಟ್ರೋಫಿ ಗೆಲ್ಲಲು ಪಣ ತೊಟ್ಟು ಸಿದ್ಧತೆ ಆರಂಭಿಸಿರೋ ಬಿಸಿಸಿಐಗೆ ಇದೀಗ ಮಾಜಿ ಸ್ಫೋಟಕ ಆಲ್​​ರೌಂಡರ್​ ಓಪನ್​ ಆಫರ್​ ಕೊಟ್ಟಿದ್ದಾರೆ.

ಮೆಂಟರ್​ ಹುದ್ದೆ ಮೇಲೆ ಯುವರಾಜ್​ ಸಿಂಗ್​ ಕಣ್ಣು.!

ಯುವರಾಜ್​ ಸಿಂಗ್ ಟೀಮ್​ ಇಂಡಿಯಾ ಮಾತ್ರವಲ್ಲ, ವಿಶ್ವ ಕ್ರಿಕೆಟ್​​ ಕಂಡ ಸ್ಫೋಟಕ ಆಲ್​​ರೌಂಡರ್​. ಟಿ20 ವಿಶ್ವಕಪ್​, ಏಕದಿನ ವಿಶ್ವಕಪ್​​, ಚಾಂಪಿಯನ್ಸ್​ ಟ್ರೋಫಿ 3 ಐಸಿಸಿ ಟ್ರೋಫಿಗಳನ್ನ ಗೆದ್ದ ಆಟಗಾರ. 2007ರ ಚುಟುಕು ವಿಶ್ವಕಪ್​ ದಂಗಲ್​ನಲ್ಲಿ ಓವರ್​​ 6ಕ್ಕೆ ಆರು ಎಸೆತಗಳನ್ನ ಸಿಕ್ಸರ್​ಗಟ್ಟಿ ದಾಖಲೆ ಬರೆದ ಯುವರಾಜ್​, 2011ರ ವಿಶ್ವಕಪ್​ನಲ್ಲಿ ಆಲ್​​ರೌಂಡ್​ ಆಟದಿಂದ ಮಿಂಚಿ ಸರಣಿ ಶ್ರೇಷ್ಟ ಪ್ರಶಸ್ತಿ ಗೆದ್ದಿದ್ರು. 2013ರ ಚಾಂಪಿಯನ್ಸ್​ ಟ್ರೋಫಿಯಲ್ಲೂ ಸಾಲಿಡ್​ ಪರ್ಫಾಮೆನ್ಸ್​ ನೀಡಿ ಮಿಂಚಿದ್ರು. ಇಂತಾ ಯುವಿ ಇದೀಗ ಟೀಮ್​ ಇಂಡಿಯಾ ಆಟಗಾರರ ಪಾಠ ಮಾಡಲು ರೆಡಿ ಎಂದಿದ್ದಾರೆ.

‘ಮೆಂಟರಿಂಗ್​ ಮಾಡೋದು ನನಗಿಷ್ಟ’

‘ಯುವ ಆಟಗಾರರಿಗೆ ಒತ್ತಡದ ನಡುವೆ ಹೇಗೆ ಆಡಬೇಕು ಅನ್ನೋದನ್ನ ಕಲಿಸಬೇಕಿದೆ. ಅದು ನಮ್ಮ ಮುಂದಿರೋ ಸವಾಲು. ನಮ್ಮಲ್ಲಿ ಕೆಲ ಆಟಗಾರರು ಒತ್ತಡದ ನಡುವೆ ಆಡುವವರಿದ್ದಾರೆ. ಆದ್ರೆ, ಒಬ್ಬರು, ಇಬ್ಬರು ಮಾತ್ರವಲ್ಲ. ಇಡೀ ತಂಡ ಹಾಗೆ ಆಡಬೇಕು. ಮೆಂಟರಿಂಗ್​ ಮಾಡೋದು ನನಗಿಷ್ಟ. ಮುಂದಿನ ದಿನಗಳಲ್ಲಿ ನಾನು ಯುವ ಆಟಗಾರರಿಗೆ ಸಹಾಯ ಮಾಡಬೇಕೆಂದಿದ್ದೇನೆ. ಬಿಗ್​ ಟೂರ್ನಮೆಂಟ್​ಗಳಲ್ಲಿ ಮಾನಸಿಕ ಸಮಸ್ಯೆಯನ್ನ ಎದುರಿಸಿದ್ದೇವೆ. ನಾನು ಈ ವಿಚಾರದಲ್ಲಿ ಆಟಗಾರರ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ’

ಯುವರಾಜ್​ ಸಿಂಗ್​, ಮಾಜಿ ಕ್ರಿಕೆಟಿಗ

ಯುವರಾಜ್​ ಸಿಂಗ್​ ಹೇಳಿದಂತೆ ಕಳೆದ ಕೆಲ ಐಸಿಸಿ ಟೂರ್ನಿಗಳನ್ನ ಒತ್ತಡಕ್ಕೆ ಒಳಗಾಗಿಯೇ ಟೀಮ್​ ಇಂಡಿಯಾ ಕೈ ಚೆಲ್ಲಿದೆ. ಲೀಗ್​ ಹಂತದಲ್ಲಿ ಅದ್ಭುತವಾಗಿ ಆಡುವ ಟೀಮ್​ ಇಂಡಿಯಾ ಆಟಗಾರರು ನಾಕೌಟ್​ ಹಂತದಲ್ಲಿ ವೈಫಲ್ಯ ಅನುಭವಿಸ್ತಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲೂ ಇದೇ ಆಗಿದ್ದು.

ಯುವರಾಜ್​ ಎಂಟ್ರಿಯಾದ್ರೆ ಸಮಸ್ಯೆ ಪರಿಹಾರವಾಗುತ್ತಾ.?

ಅಂತರಾಷ್ಟ್ರೀಯ ಕ್ರಿಕೆಟ್​ನ ಅಪಾರ ಅನುಭವ ಹೊಂದಿರುವ ಯುವರಾಜ್​ ಸಿಂಗ್​, ಕ್ರಿಕೆಟ್​ ಆಳ-ಅಗಲದ ಬಗ್ಗೆ ಪಕ್ಕಾ ಮಾಹಿತಿಯಿದೆ. ಇನ್ನು, ಮಾನಸಿಕ ಆರೋಗ್ಯ ಹಾಗೂ ಒತ್ತಡದ ವಿಚಾರಕ್ಕೆ ಬಂದ್ರೆ, ಸ್ವತಃ ಯುವರಾಜ್​ ಸಿಂಗ್​ ಇದೆಲ್ಲವನ್ನ ಫೇಸ್​ ಮಾಡಿ ಗೆದ್ದಿದ್ದಾರೆ. ಕ್ಯಾನ್ಸರ್​​ ಮಹಮಾರಿಯೊಂದಿಗೆ ಹೋರಾಡ್ತಾ ಇದ್ರೂ, ಮೈದಾನಕ್ಕಿಳಿದು ಘರ್ಜಿಸಿದ್ರು. ಯುವಿಯ ಈ ಛಲದ ಹೋರಾಟವೇ ಯುವ ಆಟಗಾರರಿಗೆ ಸ್ಪೂರ್ತಿಯ ಪಾಠವಾಗಲಿದೆ.

ವಿಶ್ವಕಪ್​ ತಂಡಕ್ಕೆ ಯುವರಾಜ್​ ಸಿಂಗ್​ ಮೆಂಟರ್​.?

ಕಳೆದ 2021ರ ಟಿ20 ವಿಶ್ವಕಪ್​ ವೇಳೆ ಎಂ​.ಎಸ್​ ಧೋನಿ ಟೀಮ್​ ಇಂಡಿಯಾದ ಮೆಂಟರ್​ ಆಗಿ ಸೇವೆ ಸಲ್ಲಿಸಿದ್ರು. ಇದೀಗ 2024 ಟಿ20 ವಿಶ್ವಕಪ್​ಗೆ ಸಿದ್ಧತೆಯನ್ನ ಬಿಸಿಸಿಐ ಆರಂಭಿಸಿದೆ. ಈಗಲೂ ಕೂಡ ಟೀಮ್​ ಇಂಡಿಯಾಗೆ ಮೆಂಟರ್​​ ಹುದ್ದೆಯ ಬಗ್ಗೆ ಬಿಸಿಸಿಐ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿವೆ. ಇದ್ರ ಬೆನ್ನಲ್ಲೇ ಯುವರಾಜ್​ ಸಿಂಗ್​ ಓಪನ್​ ಆಫರ್​ ಕೊಟ್ಟಿದ್ದು, ಟಿ20 ವಿಶ್ವಕಪ್​ ತಂಡದ ಮೆಂಟರ್​​ ಆಗಿ ಆಯ್ಕೆಯಾದ್ರೂ ಅಚ್ಚರಿ ಪಡುವಂತಿಲ್ಲ.

ಯುವಿಯನ್ನ ವೈಟ್​ಬಾಲ್​ ಫಾರ್ಮೆಟ್​ ಕಂಡ ಒನ್​ ಆಫ್​ ಗ್ರೇಟೆಸ್ಟ್ AND ಪರ್ಫೆಕ್ಟ್​​ ಆಲ್​​ರೌಂಡರ್​ ಅಂದ್ರೆ ತಪ್ಪಾಗಲ್ಲ. ಬ್ಯಾಟಿಂಗ್​, ಬೌಲಿಂಗ್​ ಮಾತ್ರವಲ್ಲ, ಫೀಲ್ಡಿಂಗ್​ 3 ವಿಭಾಗದಲ್ಲೂ ಮಿಂಚು ಹರಿಸಿದ ಕ್ರಿಕೆಟಿಗ. ಇಂತಾ ಶ್ರೇಷ್ಟ ಆಲ್​​ರೌಂಡರ್ ತಂಡದ ಮೆಂಟರ್​ ಆದ್ರೆ ತಂಡಕ್ಕೆ ಲಾಭವೇ ಹೊರತು ನಷ್ಟವೇನಿಲ್ಲ. ಆದ್ರೆ, ಬಿಸಿಸಿಐ ಏನು ಮಾಡುತ್ತೆ ಅನ್ನೋದೆ ಸದ್ಯದ ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

BCCIಗೆ ಓಪನ್​ ಆಫರ್.. ಟೀಮ್ ಇಂಡಿಯಾಕ್ಕೆ ಯುವಿ ಎಂಟ್ರಿಯಾದ್ರೆ ಸಮಸ್ಯೆ ಬಗೆಹರಿಯುತ್ತಾ?

https://newsfirstlive.com/wp-content/uploads/2023/09/YUVARAJ_ROHIT.jpg

Load More