IPL 2025: ಆರ್​​ಸಿಬಿ ತಂಡದ ಮಾಜಿ ಆಟಗಾರ ಯುವರಾಜ್​ ಸಿಂಗ್​​ಗೆ ಭರ್ಜರಿ ಆಫರ್​​!

author-image
Ganesh Nachikethu
Updated On
ನೆಹ್ರಾಗೆ ಗೇಟ್​ಪಾಸ್​..! ಗುಜರಾತ್ ಟೈಟನ್ಸ್​ಗೆ ಯುವರಾಜ್​​ ಸಿಂಗ್ ಎಂಟ್ರಿ..!
Advertisment
  • ಟಿ20 ಕ್ರಿಕೆಟ್​​ನ ಸ್ಪೆಷಲಿಸ್ಟ್​, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
  • 2025ರ ಐಪಿಎಲ್​​ಗೆ ಯುವರಾಜ್​ ಸಿಂಗ್​​ ಭರ್ಜರಿ ಕಮ್​ಬ್ಯಾಕ್​​
  • ಕೋಚ್​ ಆಗಿ ಹೊಸ ಇನ್ನಿಂಗ್ಸ್​ ಶುರು ಮಾಡಲಿರೋ ಯುವಿ..!

ಟಿ20 ಕ್ರಿಕೆಟ್ನ ಸ್ಪೆಷಲಿಸ್ಟ್​, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇಂಡಿಯನ್​ ಪ್ರೀಮಿಯರ್​ಗೆ ಮತ್ತೆ ಕಮ್​ಬ್ಯಾಕ್​ ಮಾಡಲಿದ್ದಾರೆ. 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​​ಗೆ ಗುಜರಾತ್​ ಟೈಟನ್ಸ್​ ತಂಡದ ಪರ ಯುವರಾಜ್​​ ಸಿಂಗ್​ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಐಪಿಎಲ್​ಗೆ ನಿವೃತ್ತಿ ಘೋಷಿಸಿ ಎನ್​ಒಸಿ ಪಡೆದಿರೋ ಯುವಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಿಗೆ ಗುಜರಾತ್​​ ಟೈಟನ್ಸ್​ ತಂಡದ ಮುಖ್ಯ ಕೋಚ್​ ಆಗಿ ಹೊಸ ಇನ್ನಿಂಗ್ಸ್​ ಶುರು ಮಾಡಲಿದ್ದಾರೆ.

ಈ ಹಿಂದೆಯೇ ಐಪಿಎಲ್​ನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳಲು ಯುವರಾಜ್ ಸಿಂಗ್ ಬಯಸಿದ್ರು. ಯಾವುದಾದರೂ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲು ಇಚ್ಛಿಸಿದ್ರು. ಇದಕ್ಕಾಗಿ ತೆರೆಮರೆಯಲ್ಲೇ ಪ್ರಯತ್ನವನ್ನೂ ಕೂಡ ನಡೆಸಿದ್ರು. ಇದರ ಪ್ರತಿಫಲವಾಗಿ ಹೊಸ ಜವಾಬ್ದಾರಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಇನ್ನು, ಯುವರಾಜ್​​ ಸಿಂಗ್​ಗಾಗಿ ಗುಜರಾತ್ ಟೈಟನ್ಸ್​ ತಂಡದ ಕೋಚ್ ಆಶಿಶ್ ನೆಹ್ರಾ ಅವರಿಗೆ ಕೊಕ್​ ನೀಡಲಾಗುತ್ತಿದೆ. ಆಶಿಶ್​ ನೆಹ್ರಾ ಮಾರ್ಗದರ್ಶನದಲ್ಲಿ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್​ ಟೈಟನ್ಸ್​​​ 2022ರ ಐಪಿಎಲ್​ ಚಾಂಪಿಯನ್​ ಆಗಿತ್ತು.

ಯುವರಾಜ್​ ಸಿಂಗ್​ ಐಪಿಎಲ್​​ ಕರಿಯರ್​​..!

ಯುವರಾಜ್​ ಸಿಂಗ್​​ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​, ಪುಣೆ ವಾರಿಯರ್ಸ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ತಾನು ಆಡಿದ 132 ಪಂದ್ಯಗಳಲ್ಲಿ ಯುವರಾಜ್ ಸಿಂಗ್ 2750 ರನ್ಸ್​ ಹಾಗೂ 36 ವಿಕೆಟ್​ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ರಿಷಬ್​​ ಪಂತ್​ಗೆ ಬಿಗ್​ ಶಾಕ್​​.. ಡೆಲ್ಲಿ ಕ್ಯಾಪಿಟಲ್ಸ್​​ ತಂಡಕ್ಕೆ ರೋಹಿತ್​ ಶರ್ಮಾ ಕ್ಯಾಪ್ಟನ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment