newsfirstkannada.com

ರಾಜಕೀಯ ಅಖಾಡಕ್ಕೆ ಯುವರಾಜ್ ಸಿಂಗ್ ಎಂಟ್ರಿ.. ಈ ಪಕ್ಷದ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ..!

Share :

Published February 22, 2024 at 12:14pm

    2ನೇ ಇನ್ನಿಂಗ್ಸ್​ ಆರಂಭಿಸಲು ಸಜ್ಜಾದ ಯುವರಾಜ್​ ಸಿಂಗ್​

    ಲೋಕಸಭಾ ಚುನಾವಣಾ ಅಖಾಡಕ್ಕೆ ಯುವಿ​ ಎಂಟ್ರಿ..!

    ಸನ್ನಿ ಡಿಯೋಲ್​ಗೆ ಕೊಕ್​, ಯುವರಾಜ್​ಗೆ ಮಣೆ..!

ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ 2ನೇ ಇನ್ನಿಂಗ್ಸ್​ ಆರಂಭಿಸಲು ಸಜ್ಜಾಗಿದ್ದಾರೆ. ಇಷ್ಟು ದಿನ ಕ್ರಿಕೆಟ್​ ಅಂಗಳಕ್ಕೆ ಮಾತ್ರ ಸೀಮಿತವಾಗಿದ್ದ ಯುವರಾಜ್​, ಇದೀಗ ಚುನಾವಣಾ ಕಣಕ್ಕೆ ಧುಮುಕಲು ಮುಂದಾಗಿದ್ದಾರೆ. ಹಾಗಾದ್ರೆ, ಯುವರಾಜ್​ ಎಲ್ಲಿ ಎಲೆಕ್ಷನ್​ಗೆ ನಿಲ್ತಾರೆ? ಯಾವ ಪಕ್ಷದಿಂದ ನಿಲ್ತಾರೆ?

ಕ್ರಿಕೆಟ್​ ಲೋಕಕ್ಕೆ ಗುಡ್​ ಬೈ ಹೇಳಿದ ಬಳಿಕ ಯುವರಾಜ್​ ಸಿಂಗ್​ ಸಾರ್ವಜನಿಕ ಜೀವನದಿಂದ ಅಂತರ ಕಾಯ್ದುಕೊಂಡಿದ್ರು. ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಿದ್ದು, ಅಲ್ಲಿ-ಇಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ್ದು ಬಿಟ್ರೆ, ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಎಲ್ಲದರಿಂದ ದೂರವೇ ಉಳಿದಿದ್ದ ಯುವರಾಜ್​ ಸಿಂಗ್, ಇದೀಗ ಸೈಲೆಂಟಾಗೇ ​2ನೇ ಇನ್ನಿಂಗ್ಸ್​ ಆರಂಭಿಸಲು ಸಜ್ಜಾಗಿದ್ದಾರೆ.

ದೇಶದೆಲ್ಲೆಡೆ ಸದ್ದಿಲ್ಲದೇ ಲೋಕಸಭಾ ಚುನಾವಣೆಯ ಕಾವು ಜೋರಾಗ್ತಿದೆ. ಚುನಾವಣಾ ಚದುರಂಗದಾಟಕ್ಕೆ ರಾಜಕೀಯ ಪಕ್ಷಗಳು ಸಿದ್ಧತೆಯನ್ನ ಆರಂಭಸಿವೆ. ತೆರೆಯ ಹಿಂದಿನ ಕಸರತ್ತುಗಳಂತೂ ಜೋರಾಗಿದ್ದು, ಈ ಚುನಾವಣೆಯ ಬಿಸಿ ಇದೀಗ ಕ್ರಿಕೆಟ್​ ಲೋಕಕ್ಕೂ ತಟ್ಟಿದೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್​​ ಕಿಂಗ್ ಯುವರಾಜ್​ ಸಿಂಗ್​ ಚುನಾವಣಾ ರಾಜಕೀಯಕ್ಕೆ ಧುಮುಕಲು ಸಜ್ಜಾಗಿದ್ದಾರೆ.

ಲೋಕಸಭಾ ಚುನಾವಣಾ ಅಖಾಡಕ್ಕೆ ಯುವರಾಜ್​ ಎಂಟ್ರಿ..!
ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಮುಂದಾಗಿದ್ದಾರೆ. ಈಗಾಗಲೇ ಯುವರಾಜ್​ ಸಿಂಗ್​, ಪಕ್ಷವೊಂದರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಬಹುತೇಕ ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನೂ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೇನಿದ್ರೂ, ಚುನಾವಣಾ ಅಖಾಡಕ್ಕೆ ಧುಮುಕುವುದೊಂದೆ ಬಾಕಿ ಅನ್ನೋದು ಮೂಲದ ಮಾಹಿತಿಯಾಗಿದೆ.

ಕೇಸರಿ ಪಾಳಯ ಸೇರಲಿದ್ದಾರಾ ಯುವರಾಜ್​ ಸಿಂಗ್.​.?
ಬಹುತೇಕ ಯುವರಾಜ್​ ಸಿಂಗ್​ ಭಾರತೀಯ ಜನತಾ ಪಕ್ಷವನ್ನ ಸೇರೋದು ಕನ್​​ಫರ್ಮ್​ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ನಿತಿನ್​ ಗಡ್ಕರಿಯನ್ನ ತಾಯಿಯೊಂದಿಗೆ ಯುವರಾಜ್​ ಸಿಂಗ್​ ಭೇಟಿಯಾಗಿದ್ರು. ಈ ಭೇಟಿಯ ವೇಳೆಯಲ್ಲೇ ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಟಿಕೆಟ್ ನೀಡುವ ಬಗ್ಗೆ ಗಡ್ಕರಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಬಹುತೇಕ ಯುವರಾಜ್​ ಸಿಂಗ್ ಕಣಕ್ಕಿಳಿಯೋ ಕ್ಷೇತ್ರವೂ ಫೈನಲ್​ ಆಗಿದೆ. ಪಂಜಾಬ್​ನ ಗುರುದಾಸ್​ಪುರ ಕ್ಷೇತ್ರದಿಂದ ಯುವರಾಜ್​ ಸಿಂಗ್​ ಕಣಕ್ಕಿಳಿಯೋ ಸಾಧ್ಯತೆಯಿದೆ. ಹಾಲಿ ಈ ಕ್ಷೇತ್ರವನ್ನ ಸನ್ನಿ ಡಿಯೋಲ್​ ಪ್ರತಿನಿಧಿಸ್ತಾ ಇದ್ದಾರೆ. ಆದ್ರೆ, ಕ್ಷೇತ್ರದಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿರದ ಸನ್ನಿ ಡಿಯೋಲ್​, ಲೋಕಸಭಾ ಕಲಾಪಗಳಲ್ಲೂ ಭಾಗವಹಿಸ್ತಾ ಇಲ್ಲ. ಕೆಲ ದಿನಗಳ ಹಿಂದಷ್ಟೇ ಸನ್ನಿ ಡಿಯೋಲ್​ ಕೂಡ ನಾನು ರಾಜಕೀಯಕ್ಕೆ ಫಿಟ್​ ಅಲ್ಲ ಎಂದು ಹೇಳಿದ್ರು. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನ ಬದಲಿಸುವ ಲೆಕ್ಕಾಚಾರದಲ್ಲಿದ್ದು, ಬಹುತೇಕ ಯುವರಾಜ್​ ಟಿಕೆಟ್​ ಸಿಗಲಿದೆ ಎನ್ನಲಾಗ್ತಿದೆ.

ಯುವರಾಜ್​ ಸಿಂಗ್​ ಮೇಲ್ಯಾಕೆ ಬಿಜೆಪಿ ಕಣ್ಣು..?
ಯುವರಾಜ್​ ಸಿಂಗ್​ಗೆ ಟಿಕೆಟ್​ ನೀಡಲು ಭಾರತೀಯ ಜನತಾ ಪಾರ್ಟಿ ಆಸಕ್ತಿ ತೋರಿರೋದ್ರ ಹಿಂದೆ ಕಾರಣಗಳು ಹಲವಿವೆ. ಹೊಸ ಹಾಗೂ ಯುವ ಮುಖವನ್ನಿಟ್ಟುಕೊಂಡು ಅಖಾಡಕ್ಕೆ ಇಳಿದರೆ ಸಕ್ಸಸ್​ ಸಿಗುತ್ತೆ ಅನ್ನೋದು ಬಿಜೆಪಿಯ ಮೊದಲ ಲೆಕ್ಕಾಚಾರ. ಕ್ರಿಕೆಟ್​ನಿಂದ ವಿಶ್ವಾದ್ಯಂತ ಪ್ರಸಿದ್ಧಿಯನ್ನ ಪಡೆದಿರೋ ಯುವರಾಜ್​ ಈಗಲೂ​ ಯಂಗ್​​ಸ್ಟರ್​ಗಳ ಫೇವರಿಟ್​ ಆಗಿದ್ದಾರೆ. ಇದಲ್ಲದೇ ಕ್ಯಾನ್ಸರ್​​ ಗೆದ್ದ ಕಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದೆ. ಯುವಿಯ ಆಟ, ಹೋರಾಟ ಇಂದಿಗೂ ಜನಮಾನಸದಲ್ಲಿ ಉಳಿದಿದ್ದು, ಹೀಗಾಗಿಯೇ ಮಣೆ ಹಾಕಲು ಬಿಜೆಪಿ ಮುಂದಾಗಿದೆ.

ಗುರಾದಾಸ್​ಪುರ ಕ್ಷೇತ್ರ ಹೇಳಿ ಕೇಳಿ ಸೆಲಬ್ರಿಟಿಗಳ ಪಾಲಿನ ಅದೃಷ್ಟದ ಕ್ಷೇತ್ರವಾಗಿದೆ. ಈ ಹಿಂದೆ ನಟ ವಿನೋದ್​ ಖನ್ನಾ1998ರಿಂದ 2014ರವರೆಗೆ 4 ಬಾರಿ ಈ ಕ್ಷೇತ್ರವನ್ನ ಪ್ರತಿನಿಧಿಸಿದ್ದರು. ಆ ಬಳಿಕ ಸನ್ನಿ ಡಿಯೋಲ್​ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಇದೀಗ ಇದೇ ಕ್ಷೇತ್ರದಲ್ಲಿ ಯುವರಾಜ್​ ಸಿಂಗ್​ ಅದೃಷ್ಟ ಪರೀಕ್ಷೆಗೆ ಮುಂದಾಗ್ತಾರೆ ಎನ್ನಲಾಗಿದ್ದು, ಮತದಾರನ ನಿರ್ಧಾರ ಏನಿರುತ್ತೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕೀಯ ಅಖಾಡಕ್ಕೆ ಯುವರಾಜ್ ಸಿಂಗ್ ಎಂಟ್ರಿ.. ಈ ಪಕ್ಷದ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ..!

https://newsfirstlive.com/wp-content/uploads/2024/02/YUVARAJ-1.jpg

Load More