ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕಿಗೆ ಮೂರು ಕಾರಣಗಳು..!

author-image
Ganesh
Updated On
ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕಿಗೆ ಮೂರು ಕಾರಣಗಳು..!
Advertisment
  • ಡಿವೋರ್ಸ್​ಗೆ ಮುಂದಾದ ಚಹಾಲ್, ಧನಶ್ರೀ
  • 4 ವರ್ಷದಲ್ಲೇ ಮುರಿದು ಬಿದ್ದ ಸ್ಟಾರ್​ಗಳ ಸಂಬಂಧ
  • ಡಿಸೆಂಬರ್​ 11, 2020 ರಂದು ಚಹಾಲ್​​-ಧನಶ್ರೀ ಮದುವೆ

ಟೀಂ ಇಂಡಿಯಾ ಸ್ಟಾರ್​ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ಸಂಸಾರದಲ್ಲಿ ಬಿರುಕು ಮೂಡಿದೆ. ಡಿವೋರ್ಸ್​ ಪ್ರಕ್ರಿಯೆಗಳು ನಡೆಯುತ್ತಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಹಾಲ್ ಆಗಲಿ, ಧನಶ್ರೀ ಆಗಲಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇನ್​ಸ್ಟಾಗ್ರಾಮ್​​ನಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ. ಚಹಾಲ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಧನಶ್ರೀ ಜೊತೆಗಿನ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ. ಆದರೆ ಧನಶ್ರೀ ಕೇವಲ ಅನ್​ಫಾಲೋ ಮಾತ್ರ ಮಾಡಿದ್ದು, ಚಹಾಲ್ ಜೊತೆಗಿನ ಫೋಟೋಗಳನ್ನು ಉಳಿಸಿಕೊಂಡಿದ್ದಾರೆ.

ಬಿರುಕಿಗೆ 3 ಕಾರಣ

ಬೇರೆ ವ್ಯಕ್ತಿಗಳ ಜೊತೆ ಹೆಸರು ಲಿಂಕ್

ಸೋಶಿಯಲ್ ಮೀಡಿಯಾದಲ್ಲಿ ಧನಶ್ರೀ ಹಾಗೂ ಚಹಾಲ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇದು ಅವರಿಬ್ಬರ ನಡುವಿನ ಸಂಬಂಧದ ಮೇಲೂ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಧನಶ್ರೀ ಅವರ ಕಾರ್ಯವೈಖರಿ ಕೂಡ ಇಲ್ಲಿ ಚರ್ಚೆ ಆಗ್ತಿದೆ. ಟ್ರೋಲ್ ಆದ ಅದೆಷ್ಟೋ ಸಂದರ್ಭಗಳಲ್ಲಿ ಧನಶ್ರೀ ಜೊತೆಗೆ ಬೇರೆ ವ್ಯಕ್ತಿಗಳ ಹೆಸರು ತಳಕು ಹಾಕಿಕೊಂಡಿದೆ. ಟೀಂ ಇಂಡಿಯಾದ ಮತ್ತೊಬ್ಬ ಸ್ಟಾರ್ ಶ್ರೇಯರ್ ಜೊತೆ ಧನಶ್ರೀ ಹೆಸರು ಕೇಳಿಬಂದಿತ್ತು. ಅಲ್ಲದೇ ಪ್ರತೀಕ್ ಉಟೇಕರ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಈ ವಿಚಾರಗಳಿಂದ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:OYO! ಪ್ರೇಮಿಗಳಿಗೆ ಓಯೋ ಅಯ್ಯೋ.. ಮದುವೆ ಆಗದ ಜೋಡಿಗಳಿಗೆ ಬಿಗ್​ ಶಾಕ್..!

publive-image

ನಿರ್ಲಕ್ಷ್ಯ

ಧನಶ್ರೀ ವಿರುದ್ಧ ಇಂತಹದೊಂದು ಆರೋಪ ಇದೆ. ಸೆಪ್ಟೆಂಬರ್ 27 ರಂದು ಅವರ ಹುಟ್ಟುಹಬ್ಬ ಇತ್ತು. ಆಗ ಚಹಾಲ್ ವಿಭಿನ್ನ ರೀತಿಯಲ್ಲಿ ಶುಭ ಹಾರೈಸಿದ್ದರು. ಚಹಾಲ್ ಹಾಕಿದ್ದ ಪೋಸ್ಟ್​​ಗೆ ಧನಶ್ರೀ ಸಾಮಾನ್ಯ ರಿಪ್ಲೈ ಮಾಡಿದ್ದರು. ಬೆನ್ನಲ್ಲೇ ಧನಶ್ರೀ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಪತ್ನಿಯಾಗಿ ನೀವು ನೀಡಿದ ಪ್ರತಿಕ್ರಿಯೆ ಸರಿ ಇಲ್ಲ ಎಂದು ನೆಟ್ಟಿಗರು ಜಾಡಿಸಿದ್ದರು.

ಸಮಯ ನೀಡದಿರೋದು

ಧನಶ್ರೀ ಹಾಗೂ ಚಹಾಲ್ ತುಂಬಾ ದಿನಗಳಿಂದ ಕ್ಯಾಮೆರಾ ಮುಂದೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ವಿಶೇಷ ಸಂದರ್ಭಗಳಾದ ಗಣೇಶ ಹಬ್ಬ, ದೀಪಾವಳಿ ಸೇರಿಂದಂತೆ ಅನೇಕ ಸ್ಪೆಷಲ್ ಡೇಗಳಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಈ ಎಲ್ಲಾ ವಿಚಾರಗಳಿಂದಾಗಿ ಇಬ್ಬರ ನಡುವೆ ಬಿರುಕು ಮೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ವೈಯಕ್ತಿಕ ಬದುಕಿನಲ್ಲಿ ಆಗ್ತಿರುವ ಕಹಿ ಘಟನೆಗಳಿಂದಾಗಿಯೇ ಚಹಾಲ್ ತಮ್ಮ ವೃತ್ತಿ ಜೀವನದಲ್ಲಿ ಹಿಂದೆ ಬೀಳ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:BBK11: 100ನೇ ದಿನಕ್ಕೆ ಕಾಲಿಟ್ಟ ಬಿಗ್​ಬಾಸ್; ಟಿಕೆಟ್ ಟು ಫಿನಾಲೆ ಪಾಸ್​ ಸಿಗೋದು ಯಾರಿಗೆ?

ಡಿಸೆಂಬರ್​ 11, 2020ರಂದು ಚಹಾಲ್​​-ಧನಶ್ರೀ ಹಸೆಮೆಣೆ ಏರಿದ್ರು. 2020ರ ಅಂತ್ಯದಲ್ಲಿ ಶುರುವಾದ ಇಬ್ಬರ ದಾಂಪತ್ಯ ಪಯಣ, 2025ರ ಆರಂಭದ ಹೊತ್ತಿಗೆ ಅಂತ್ಯದ ಹತ್ತಿರ ಬಂದು ನಿಂತಿದೆ. ಕೇವಲ 4 ವರ್ಷಗಳಲ್ಲೇ ಅನ್ಯೋನ್ಯವಾಗಿದ್ದ ಸಂಬಂಧ ಹಳಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment