/newsfirstlive-kannada/media/post_attachments/wp-content/uploads/2025/04/Chahal-1.jpg)
ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲವು ಪಡೆದು ಸಂಭ್ರಮಿಸಿದೆ. ಕೇವಲ 111 ರನ್ಗಳ ಗುರಿ ಮುಟ್ಟಲಾಗದ ಕೆಕೆಆರ್ ಯಜುವೇಂದ್ರ ಚಹಲ್ ಅವರ ಬೌಲಿಂಗ್ಗೆ ಬೆಂಡಾಯಿತು. ಇದರ ಜೊತೆ ಐಪಿಎಲ್ ಇತಿಹಾಸದಲ್ಲಿ ಯಜುವೇಂದ್ರ ಚಹಲ್ ವಿಶೇಷವಾದ ದಾಖಲೆ ಬರೆದಿದ್ದಾರೆ.
ಕೆಕೆಆರ್ ಹಾಗೂ ಪಂಜಾಬ್ನ ಒಂದೊಂದು ಓವರ್ ರೋಚಕ, ಒಂದೊಂದು ಎಸೆತಕ್ಕೂ ಕುತೂಹಲವಿತ್ತು. ಲೋ ಸ್ಕೋರಿಂಗ್ ಥ್ರಿಲ್ಲರ್ ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿತ್ತು. ಆರಂಭದಲ್ಲಿ ಎಲ್ಲರೂ ಕೋಲ್ಕತ್ತಾ ಗೆಲುವು ಪಡೆಯುತ್ತೆ ಎಂದು ಭಾವಿಸಿದ್ದರೂ ಆದ್ರೆ, ಕೊನೆಯಲ್ಲಿ ಚಹಲ್ ಮಾಡಿದ ಮ್ಯಾಜಿಕ್ಗೆ ಹಾಲಿ ಚಾಂಪಿಯನ್ ತಣ್ಣಗಾಯಿತು.
ಐಪಿಎಲ್ ಇತಿಹಾಸಲ್ಲಿ ಹೆಚ್ಚು ಬಾರಿ 4 ಗೊಂಚಲು ವಿಕೆಟ್ಗಳನ್ನು ಪಡೆದ ಬೌಲರ್ ಎಂದರೆ ಅದು ಕೆಕೆಆರ್ ಆಲ್ರೌಂಡರ್ ಸುನಿಲ್ ನರೈನ್ ಆಗಿದ್ದಾರೆ. ಆದರೆ ಇದೀಗ ಈ ಸಾಲಿಗೆ ಯಜುವೇಂದ್ರ ಚಹಲ್ ಬಂದು ನಿಂತಿದ್ದಾರೆ. ಸದ್ಯ ಇಬ್ಬರು 8 ಬಾರಿ 4 ಗೊಂಚಲು ವಿಕೆಟ್ಗಳನ್ನು ಪಡೆದು ಸಮವಾಗಿದ್ದಾರೆ. ಚಹಲ್ ಮತ್ತೊಮ್ಮೆ 4 ಗೊಂಚಲು ವಿಕೆಟ್ ಪಡೆದ್ರೆ ಹೊಸ ದಾಖಲೆ ಬರೆಯಲಿದ್ದಾರೆ.
ಇದನ್ನೂ ಓದಿ: 46ನೇ ವಯಸ್ಸಿಗೆ ಮೊದಲ ಮಗುವಿಗೆ ಅಪ್ಪನಾದ ಮಾಜಿ ಕ್ರಿಕೆಟರ್ ಜಹೀರ್ ಖಾನ್.. ಇಟ್ಟ ಹೆಸರೇನು?
ಕೆಕೆಆರ್ ವಿರುದ್ಧ ಸ್ಪಿನ್ ಮ್ಯಾಜಿಕ್ ಮಾಡಿದ ಚಹಲ್, ಕ್ಯಾಪ್ಟನ್ ಅಜಿಂಕ್ಯಾ ರಹಾನೆ, ಅಗ್ರೀಶ್ ರಘುವಂಶಿ, ರಿಂಕು ಸಿಂಗ್ ಹಾಗೂ ರಮನ್ದೀಪ್ ಸಿಂಗ್ ವಿಕೆಟ್ಗಳನ್ನ ಉರುಳಿಸಿ ಪಂಜಾಬ್ ಗೆಲವುಗೆ ಕಾರಣರಾದರು. ಚಹಲ್ ಮಾರಕ ಸ್ಮಿನ್ಗೆ ನಡುಗಿದ ಕೆಕೆಆರ್ ಕೇವಲ 95 ರನ್ಗೆ ಆಲೌಟ್ ಆಗಿ ಸೋತಿತು. ಸದ್ಯ 4 ಗೊಂಚಲು ವಿಕೆಟ್ ಪಡೆದು ನರೈನ್ ಅವರ ಸಾಲಿಗೆ ಬಂದು ನಿಂತಿದ್ದಾರೆ.
ಇದು ಅಲ್ಲದೇ ಕೆಕೆಆರ್ ತಂಡದ ವಿರುದ್ಧ 33 ವಿಕೆಟ್ಗಳನ್ನ ಕಬಳಿಸಿ 3ನೇ ಬೌಲರ್ ಯಜುವೇಂದ್ರ ಚಹಲ್ ಆಗಿದ್ದಾರೆ. ಜೊತೆಗೆ 4 ಗೊಂಚಲು ವಿಕೆಟ್ಗಳನ್ನು 3 ಬಾರಿ ಕೆಕೆಆರ್ ವಿರುದ್ಧವೇ ಚಹಲ್ ಅವರು ಪಡೆದಿರುವುದು ವಿಶೇಷ ದಾಖಲೆ ಎಂದೇ ಐಪಿಎಲ್ನಲ್ಲಿ ಪರಿಗಣಿಸಲಾಗಿದೆ.
ಟಿ20 ಕ್ರಿಕೆಟ್ನಲ್ಲಿ ಚಹಲ್ ಇದುವರೆಗೆ 318 ಪಂದ್ಯಗಳಿಂದ 370 ವಿಕೆಟ್ಗಳನ್ನು ಉರುಳಿಸಿದ್ದಾರೆ. ಚಹಾಲ್ಗಿಂತ ಮುಂದೆ ರಶೀದ್ ಖಾನ್ ಇದ್ದು ಇವರು 468 ಪಂದ್ಯಗಳಿಂದ ಒಟ್ಟು 638 ವಿಕೆಟ್ ಪಡೆದಿದ್ದಾರೆ. ಸದ್ಯ ಐಪಿಎಲ್ನಲ್ಲಿ ಚಹಲ್ 6 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದು ಸರಾಸರಿ 32.50 ಹೊಂದಿದ್ದು ಎಕಾನಮಿ 10.26 ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ