/newsfirstlive-kannada/media/post_attachments/wp-content/uploads/2025/01/CHAHAL.jpg)
ಸ್ಟಾರ್ ಕ್ರಿಕೆಟಿಗ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ಡಿವೋರ್ಸ್‌ಗೆ ಅಧಿಕೃತ ಮುದ್ರೆ ಬಿದ್ದಿದೆ. ಮುಂಬೈ ಫ್ಯಾಮಿಲಿ ಕೋರ್ಟ್ ಇಂದು ಇವರಿಬ್ಬರ ಅರ್ಜಿ ಪುರಸ್ಕರಿಸಿ ಡಿವೋರ್ಸ್ ಮಂಜೂರು ಮಾಡಿದೆ. ಧನಶ್ರೀ ಅವರಿಂದ ಎರಡೂವರೆ ವರ್ಷದಿಂದ ದೂರವಾಗಿದ್ದ ಚಹಲ್ ಅಧಿಕೃತವಾಗಿ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ದಾರೆ.
ಮಾರ್ಚ್ 22ರಿಂದ ಐಪಿಎಲ್ ಹಣಾಹಣಿ ಆರಂಭವಾಗುವ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಡಿವೋರ್ಸ್ ರಾದ್ಧಾಂತದಿಂದ ನನಗೆ ಐಪಿಎಲ್ ಕಡೆ ಗಮನಹರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ವಿಚ್ಛೇದನದ ಅರ್ಜಿ ಇತ್ಯರ್ಥಗೊಳಿಸುವಂತೆ ಮನವಿ ಮಾಡಿದ್ದರು.
ಯಜುವೇಂದ್ರ ಚಹಲ್ ಅವರ ಅರ್ಜಿ ವಿಚಾರಣೆ ನಡೆಸಿದ ನಿನ್ನೆ ಬಾಂಬೆ ಹೈಕೋರ್ಟ್, ಫ್ಯಾಮಿಲಿ ನ್ಯಾಯಾಲಯಕ್ಕೆ ನಾಳೆಯೊಳಗೆ ಡಿವೋರ್ಸ್‌ಗೆ ಸಂಬಂಧಪಟ್ಟಂತೆ ಅಂತಿಮ ಆದೇಶ ನೀಡುವಂತೆ ಸೂಚನೆ ನೀಡಿತ್ತು. ಬಾಂಬೆ ಹೈಕೋರ್ಟ್ ಆದೇಶದಂತೆ ಬಾಂದ್ರಾ ಫ್ಯಾಮಿಲಿ ಕೋರ್ಟ್ ಇಂದು ಅಂತಿಮ ಆದೇಶ ನೀಡಿದೆ.
ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಇನ್ನೊಬ್ಬ ಯುವತಿ ಜೊತೆ ಸ್ಟಾರ್ ಕ್ರಿಕೆಟರ್ ಚಹಲ್.. ಆ ಹುಡುಗಿ ಯಾರು?
ಫ್ಯಾಮಿಲಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪರಸ್ಪರ ಒಪ್ಪಿಗೆ ಹಾಗೂ ಜೀವನಾಂಶ ನೀಡಲು ಯಜುವೇಂದ್ರ ಚಹಲ್ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಡಿವೋರ್ಸ್ ಮಂಜೂರು ಮಾಡಲಾಗಿದೆ.
ಜೀವನಾಂಶ ₹60 ಕೋಟಿ ಅಲ್ಲ.. ಮತ್ತೆಷ್ಟು?
ಕ್ರಿಕೆಟಿಗ ಯಜುವೇಂದ್ರ ಚಹಲ್- ಧನುಶ್ರೀ ವರ್ಮಾ ಡಿವೋರ್ಸ್ ಬಗ್ಗೆ ಹಲವು ದಿನಗಳಿಂದ ವದಂತಿ ಹಬ್ಬಿತ್ತು. ಯಜುವೇಂದ್ರ ಚಹಲ್ ಅವರು ಮಾಜಿ ಪತ್ನಿಗೆ 60 ಕೋಟಿ ರೂಪಾಯಿ ಜೀವನಾಂಶ ಕೊಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಚಹಲ್, ಧನುಶ್ರೀ ವರ್ಮಾಗೆ 4.75 ಕೋಟಿ ರೂಪಾಯಿ ಜೀವನಾಂಶ ನೀಡಲು ಕೋರ್ಟ್ ಆದೇಶ ನೀಡಿದೆ.
4 ಕೋಟಿ 75 ಲಕ್ಷ ರೂಪಾಯಿ ಜೀವನಾಂಶದಲ್ಲಿ ಈಗಾಗಲೇ 2 ಕೋಟಿ 37 ಲಕ್ಷ ರೂಪಾಯಿ ಹಣವನ್ನು ಯಜುವೇಂದ್ರ ಚಹಲ್, ಧನಶ್ರೀಗೆ ನೀಡಿದ್ದಾರಂತೆ. ಬಾಕಿ ಹಣವನ್ನು ನೀಡದೆ ಇರೋದಕ್ಕಾಗಿ ಅಧಿಕೃತವಾಗಿ ಡಿವೋರ್ಸ್ ಆದೇಶ ಆಗಿರಲಿಲ್ಲ. ಇಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದು ಯಜುವೇಂದ್ರ ಚಹಲ್- ಧನುಶ್ರೀ ವರ್ಮಾ ಅಧಿಕೃತವಾಗಿ ಬೇರೆ, ಬೇರೆ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ