28 ವರ್ಷದ ಈ ಸುಂದರ ನಟಿಗೆ ಪ್ರಪೋಸ್ ಮಾಡಿದ್ರಾ ಯಜುವೇಂದ್ರ ಚಹಲ್? 2ನೇ ಮದುವೆಗೆ ಸಜ್ಜಾದ್ರಾ ಕ್ರಿಕೆಟರ್ ?

author-image
Gopal Kulkarni
Updated On
28 ವರ್ಷದ ಈ ಸುಂದರ ನಟಿಗೆ ಪ್ರಪೋಸ್ ಮಾಡಿದ್ರಾ ಯಜುವೇಂದ್ರ ಚಹಲ್? 2ನೇ ಮದುವೆಗೆ ಸಜ್ಜಾದ್ರಾ ಕ್ರಿಕೆಟರ್ ?
Advertisment
  • ಚಹಲ್ ಧನುಶ್ರೀ ಡಿವೋರ್ಸ್ ಗುಸುಗುಸು ನಡುವೆ ಮತ್ತೊಂದು ಸುದ್ದಿ
  • 28 ವರ್ಷದ ಆ ನಟಿಯೊಂದಿಗೆ ಶುರುವಾಗಿದೆಯಾ ಚಹಲ್​ನ ಲವ್ವಿಡವ್ವಿ
  • ಡೇಟಿಂಗ್ ಪ್ರಪೋಸ್ ಬಗ್ಗೆ ಆ ಇಬ್ಬರು ನಟಿಯರು ಕೊಟ್ಟ ಸ್ಪಷ್ಟನೆ ಏನು?

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯಜುವೇಂದ್ರ ಚಹಲ್ ಇತ್ತೀಚಿನ ಕೆಲವು ದಿನಗಳಲ್ಲಿ ಅವರ ವೈಯಕ್ತಿಕ ಬದುಕಿನ ಬಗ್ಗೆಯ ಹೆಚ್ಚಿನ ಚರ್ಚೆಯಲ್ಲಿದ್ದಾರೆ. ಅವರ ಪತ್ನಿ ಧನುಶ್ರೀ ಅವರಿಗೆ ಡಿವೋರ್ಸ್ ನೀಡಿಲಿದ್ದಾರೆ ಎಂಬ ಸುದ್ದಿ ವಾಯುವೇಗದಲ್ಲಿ ಹರಡುತ್ತಿದೆ. ಆದ್ರೆ ಇಲ್ಲಿಯವರೆಗೂ ಇದರ ಬಗ್ಗೆ ಧನುಶ್ರೀ ಆಗಲಿ, ಚಹಲ್ ಆಗಲಿ ಎಲ್ಲಿಯೂ ಕೂಡ ಬಾಯಿ ಬಿಟ್ಟಿಲ್ಲ. ಇದರ ನಡುವೆಯೇ ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಯಜುವೇಂದ್ರ ಚಹಲ್ ಆರ್​​ಜೆ ಹಾಗೂ ನಟಿ ಮಹಾವಿಶ್​ಗೆ ಪ್ರಪೋಸ್ ಮಾಡಿದ್ದಾರೆ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡುತ್ತಿದೆ.

ಅದು ಮಾತ್ರವಲ್ಲ ಮಹಾವಿಶ್​ಗೆ ಚಹಲ್ ಮದುವೆಯ ಪ್ರಪೋಸಲ್​ ಕೂಡ ಮಾಡಿದ್ದಾರೆ ಎಂಬ ಸುದ್ದಿಯೂ ಈಗ ಜೋರಾಗಿ ಕೇಳಿ ಬರುತ್ತಿದೆ. ಒಂದು ಕಡೆ ಧನುಶ್ರೀಯೊಂದಿಗೆ ಡಿವೋರ್ಸ್​ ವಿಷಯ ಮತ್ತೊಂದು ಕಡೆ ಮಹಾವಿಶ್ ಜೊತೆಗೆ ಡೇಟಿಂಗ್ ಹಾಗೂ ಮದುವೆ ಪ್ರಪೋಸಲ್ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿಯಾಗುತ್ತಿವೆ.

ಇದನ್ನೂ ಓದಿ:ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ಬಂದ ದಾಖಲೆಗಳು ಯಾವ್ಯಾವು ಗೊತ್ತಾ?

publive-image

ಕೆಲವು ದಿನಗಳಿಂದ ಚಹಲ್ ಮತ್ತು ಮಹಾವಿಶ್ ಮುಂಬೈನಲ್ಲಿ ಅಲ್ಲಲ್ಲಿ ಒಟ್ಟಿಗೆ ಕಾಣುತ್ತಿದ್ದಾರೆ. ಇದು ಅವರಿಬ್ಬರ ನಡುವೆ ಡೇಟಿಂಗ್ ಶುರುವಾಗಿದೆ ಎಂಬ ಗುಸುಗುಸುವಿಗೆ ಮತ್ತಷ್ಟು ಇಂಧನವನ್ನು ಒದಗಿಸಿದೆ. ಆದ್ರೆ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ರೂಮರ್ಸ್ ವಿಚಾರದಲ್ಲಿ ನಟಿ ಮಹಾವಿಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಅಲ್ಲದೇ ಒಂದು ವೇಳೆ ಚಹಲ್ ನನಗೆ ಪ್ರಪೋಸ್ ಮಾಡಿದಲ್ಲಿ ನಾನೇ ಬಂದು ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:T20 ಅಂಡರ್-19 ವಿಶ್ವಕಪ್​ಗೆ ಮುತ್ತಿಕ್ಕಿದ ಭಾರತದ ಯುವತಿಯರು.. ಈ ವರ್ಲ್ಡ್​ಕಪ್​ನಲ್ಲಿ ಸೋತೇ ಇಲ್ಲ ಗರ್ಲ್ಸ್​

publive-image

ಈ ರೂಮರ್ಸ್​ ಜೊತೆಗೆ ಈಗ ಮತ್ತೊಂದು ರೂಮರ್ಸ್ ಕೂಡ ಚಹಲ್ ಬಗ್ಗೆ ಹರಿದಾಡುತ್ತಿದೆ. ಯಜುವೇಂದ್ರ ಚಹಲ್ ನಟಿ ಜಾರಾ ಯಾಸ್ಮಿನ್ ಜೊತೆ ಇತ್ತೀಚೆಗೆ ಸುತ್ತಾಟ ಜೋರಾಗಿ ನಡೆಸಿದ್ದಾರೆ. ಇಬ್ಬರು ಡೇಟಿಂಗ್ ನಡಿಸುತ್ತಿದ್ದಾರೆ ಎಂಬ ಸುದ್ದಿಯೂ ಕೂಡ ದೊಡ್ಡದಾಗಿ ಹರಿದಾಡುತ್ತಿದೆ. ಅವರಿಗೆ ಪ್ರಪೋಸ್ ಮಾಡಿದ್ದಾರೆ ಚಹಲ್ ಎಂಬ ಸುದ್ದಿಯೂ ಇದೆ. ಆದ್ರೆ ಇದಕ್ಕೂ ಕೂಡ ಜಾರಾ ತೆರೆ ಎಳೆದಿದ್ದಾರೆ ನನಗೆ ಚಹಲ್ ಎಂದಿಗೂ ಪ್ರಪೋಸ್ ಮಾಡಿಲ್ಲ. ಇದೆಲ್ಲೂ ಸುಳ್ಳು ಸುದ್ದಿಗಳು. ಆದ್ರೆ ನಾವಿಬ್ಬರು ಮೊಬೈಲ್​ನಲ್ಲಿ ಆಗಾಗ ಚಾಟಿಂಗ್ ಮಾಡುತ್ತೇವೆ. ಅದು ಕೋವಿಡ್​ ಟೈಮ್​​ನಿಂದಲೂ ಇದೆ. ಇದಾದ ಮೇಲೆಯೇ ಚಹಲ್ ಮತ್ತು ಧನುಶ್ರೀ ಮದುವೆಯಾಗಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment