/newsfirstlive-kannada/media/post_attachments/wp-content/uploads/2024/07/Chahal_RCB.jpg)
- ವರ್ಷದ ಕೊನೆಗೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್!
- ಈ ಮುನ್ನ ಐಪಿಎಲ್ ತಂಡಗಳು ರೀಟೈನ್ ಆಟಗಾರರ ಫೈನಲ್ ಮಾಡಬೇಕು
- ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿಯಿಂದ ಮಾಸ್ಟರ್ ಪ್ಲಾನ್
ವರ್ಷದ ಕೊನೆಗೆ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಮೆಗಾ ಆಕ್ಷನ್​ ನಡೆಯಲಿದೆ. ಎಲ್ಲಾ ಐಪಿಎಲ್​​ ತಂಡಗಳಿಗೂ 6 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಹೀಗಾಗಿ ಯಾರನ್ನು ಉಳಿಸಿಕೊಳ್ಳಬೇಕು? ಯಾರ ಕೈ ಬಿಡಬೇಕು ಎಂದು ಐಪಿಎಲ್​ ತಂಡಗಳ ಮಾಲೀಕರು ತಲೆ ಕೆಡಿಸಿಕೊಂಡಿದ್ದಾರೆ.
ಇನ್ನು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ವಿರಾಟ್​ ಕೊಹ್ಲಿ ಹೊರತುಪಡಿಸಿ ಮತ್ಯಾರನ್ನು ರೀಟೈನ್​ ಮಾಡಿಕೊಳ್ಳಲಿದೆ ಎಂಬ ಇನ್ನೂ ಸ್ಪಷ್ಟತೆ ಇಲ್ಲ. ಕನಿಷ್ಠ 4+1 ಆಟಗಾರರನ್ನು ರೀಟೈನ್​ ಮಾಡಿಕೊಂಡು ಉಳಿದ ಎಲ್ಲಾ ಆಟಗಾರರನ್ನು ಆರ್​​ಸಿಬಿ ರಿಲೀಸ್​ ಮಾಡಲಿದೆ. ಇದರ ಮಧ್ಯೆ ಆರ್​​ಸಿಬಿಗೆ ಮಾಜಿ ಆಟಗಾರ ಚಹಾಲ್​ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ.
ದಿನೇಶ್​ ಕಾರ್ತಿಕ್​​ ಅವರನ್ನು ಈಗಾಗಲೇ ಆರ್​ಸಿಬಿ ತಂಡದ ಮೆಂಟರ್​ ಮತ್ತು ಬ್ಯಾಟಿಂಗ್​ ಕೋಚ್​​ ಆಗಿ ನೇಮಕ ಮಾಡಲಾಗಿದೆ. ಇವರೇ ಚಹಾಲ್​ ಅವರನ್ನು ಮತ್ತೆ ಆರ್​ಸಿಬಿಗೆ ವಾಪಸ್​ ಕರೆ ತರಲು ಪ್ಲಾನ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಟ್ರೇಡ್​ಗಾಗಿ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎಂದು ವರದಿಯಾಗಿದೆ.
ಆರ್​​ಸಿಬಿ ಪರ 114 ಪಂದ್ಯ ಆಡಿದ್ದ ಚಹಾಲ್​​!
ವಿಶೇಷ ಎಂದರೆ ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಚಹಾಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್​ಸಿಬಿ ಪರ 114 ಪಂದ್ಯಗಳನ್ನಾಡಿದ್ದ ಯುಜ್ವೇಂದ್ರ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿದ್ದರು. ಈಗ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರೋ ಚಹಾಲ್ ಕಳೆದ ಸೀಸನ್​ನಲ್ಲಿ ಹೈಎಸ್ಟ್​ ವಿಕೆಟ್​ ಟೇಕರ್​ ಆಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್