Advertisment

ಡಿವೋರ್ಸ್​​ ಸುದ್ದಿ ಮಧ್ಯೆ ಚಹಾಲ್​​ ಭಾವುಕ ಪೋಸ್ಟ್​; ಸ್ಟಾರ್​ ಕ್ರಿಕೆಟರ್ ಇನ್​ಸ್ಟಾ ಸ್ಟೋರಿಯಲ್ಲೇನಿದೆ?

author-image
Ganesh Nachikethu
Updated On
ಡಿವೋರ್ಸ್​​ ಸುದ್ದಿ ಮಧ್ಯೆ ಚಹಾಲ್​​ ಭಾವುಕ ಪೋಸ್ಟ್​; ಸ್ಟಾರ್​ ಕ್ರಿಕೆಟರ್ ಇನ್​ಸ್ಟಾ ಸ್ಟೋರಿಯಲ್ಲೇನಿದೆ?
Advertisment
  • ಟೀಮ್​ ಇಂಡಿಯಾದ ಸ್ಟಾರ್​ ಸ್ಪಿನ್ನರ್ ಯುಜ್ವೇಂದ್ರ ಚಹಾಲ್
  • ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ..!
  • ಧನಶ್ರೀಯ ಎಲ್ಲಾ ಫೋಟೋಸ್​ ಡಿಲೀಟ್​ ಮಾಡಿದ ಸ್ಪಿನ್ನರ್

ಟೀಮ್​ ಇಂಡಿಯಾದ ಸ್ಟಾರ್​ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಸುಮಾರು 5 ವರ್ಷಗಳ ನಂತರ ಚಹಾಲ್ ಮತ್ತವರ ಪತ್ನಿ ಧನಶ್ರೀ ವರ್ಮಾ ಬೇರೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸೋಷಿಯಲ್​​ ಮೀಡಿಯಾದಲ್ಲಿ ಇಬ್ಬರು ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು, ಇದು ಡಿವೋರ್ಸ್​ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

Advertisment

ಎಲ್ಲಾ ಫೋಟೋಸ್​ ಡಿಲೀಟ್​​​

ಚಹಾಲ್ ಧನಶ್ರೀ ಜತೆಗಿನ ಎಲ್ಲಾ ಫೋಟೋಸ್​ ಡಿಲೀಟ್​ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಇಬ್ಬರ ನಡುವಿನ ಡಿವೋರ್ಸ್​ ವಂದತಿಗೆ ಮತ್ತಷ್ಟು ಜೀವ ತುಂಬಿದೆ. ಇದರ ಮಧ್ಯೆ ಸ್ಟಾರ್​ ಪ್ಲೇಯರ್​​​ ಚಹಾಲ್ ಇನ್‌ಸ್ಟಾಗ್ರಾಮ್ ಸ್ಟೋರಿ ಭಾರೀ ವೈರಲ್​ ಆಗಿದೆ.

ಚಹಾಲ್​ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲೇನಿದೆ?

ಕಠಿಣ ಪರಿಶ್ರಮವೇ ಜನರ ನಡವಳಿಕೆ ಬಗ್ಗೆ ಹೇಳುತ್ತದೆ. ನಿಮ್ಮ ಪ್ರಯಾಣ ನಿಮಗೆ ತಿಳಿದಿದೆ. ನಿಮ್ಮ ನೋವು ನಿಮಗೆ ಗೊತ್ತಿದೆ. ಇಲ್ಲಿಗೆ ತಲುಪಲು ನೀವು ಏನೆಲ್ಲಾ ಮಾಡಿದ್ದೀರಿ ಎಂಬುದು ಗೊತ್ತಿದೆ. ನೀವು ಎಲ್ಲಿದ್ದೀರಿ ಎಂಬುದು ಇಡೀ ಜಗತ್ತಿಗೆ ಗೊತ್ತು. ನಿಮ್ಮ ತಂದೆ ತಾಯಿ ಹೆಮ್ಮೆ ಪಡುವಂತೆ ಮಾಡಲು ಬೆವರನ್ನೇ ಹರಿಸಿದ್ದೀರಿ. ಸದಾ ಪೋಷಕರ ಹೆಮ್ಮೆಯ ಮಗನಾಗಿ ಇರಿ ಎಂದು ಚಹಾಲ್​​ ತನ್ನ ಇನ್​ಸ್ಟಾಗ್ರಾಮ್​​​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಏನಿದು ವದಂತಿ?

ಚಹಾಲ್ ಮತ್ತು ಧನಶ್ರೀ ಕಳೆದ ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಸ್ಟಾರ್ ಜೋಡಿ ಡಿವೋರ್ಸ್​​ ವಿಚಾರ ಸದ್ದು ಮಾಡುತ್ತಿರೋದು ಇದೇ ಮೊದಲಲ್ಲ. 2023ರಲ್ಲಿ ಧನಶ್ರೀ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರನ್ನು ಅನ್‌ಫೋಲೋ ಮಾಡಿದ್ದರು. ಆಗಲು ಡಿವೋರ್ಸ್​ ವಿಚಾರ ಸದ್ದು ಮಾಡಿತ್ತು. ಈ ಸ್ಟಾರ್ ಜೋಡಿ 2020ರಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ಸದ್ಯದಲ್ಲೇ ಡಿವೋರ್ಸ್ ಆಗಲಿದೆ ಎನ್ನುವ ಸುದ್ದಿ ಇದೆ.

Advertisment

ಇದನ್ನೂ ಓದಿ:RCB ಕ್ಯಾಪ್ಟನ್ಸಿ ಬಗ್ಗೆ ಬಿಗ್​ ಅಪ್ಡೇಟ್​​; ನಾಯಕತ್ವಕ್ಕೆ ಈ ಮೂವರ ಮಧ್ಯೆ ಭಾರೀ ಪೈಪೋಟಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment