/newsfirstlive-kannada/media/post_attachments/wp-content/uploads/2024/11/IPL_2025_4.jpg)
ಬಹು ನಿರೀಕ್ಷಿತ IPL 2025 ಮೆಗಾ ಹರಾಜು ಪ್ರಾರಂಭವಾಗಿದ್ದು ಇಂದು ಮತ್ತು ನಾಳೆ ನಡೆಯಲಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯುತ್ತಿದ್ದು ಈಗಾಗಲೇ ಕೆಲ ಆಟಗಾರರು ಹರಾಜು ಆಗಿದೆ. ಈ ಹಿಂದೆ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಯಜುವೇಂದ್ರ ಚಹಾಲ್ ಈ ಸಲ ಒಳ್ಳೆ ದುಡ್ಡನ್ನು ಕಮಾಯಿ ಮಾಡಿದ್ದಾರೆ.
ಟೀಮ್ ಇಂಡಿಯಾದ ಸ್ಪಿನ್ನರ್ ಆಗಿರುವ ಯಜುವೇಂದ್ರ ಚಹಾಲ್ ಖರೀದಿ ಮಾಡಲು ಆರ್ಸಿಬಿ, ಹೈದ್ರಾಬಾದ್, ಪಂಜಾಬ್ ಸೇರಿ ಭರ್ಜರಿ ಹರಾಜು ಕೂಗಿದವು. 17 ಕೋಟಿ ರೂಪಾಯಿಗೆ ಪಂಜಾಬ್ ಹರಾಜು ಕರೆಯಿತು. 17.25 ಕೋಟಿಗೆ ರೂಪಾಯಿಗೆ ಹೈದ್ರಾಬಾದ್ ಮತ್ತೆ ಕರೆಯಿತು. 17.75 ಕೋಟಿಗೆ ಮತ್ತೆ ಹೈದ್ರಾಬಾದ್ ತನ್ನ ಪಟ್ಟನ್ನು ಸಡಿಲ ಮಾಡಲಿಲ್ಲ. ಸ್ಪನ್ನರ್ ಖರೀದಿ ಮಾಡಲು ಎರಡು ಫ್ರಾಂಚೈಸಿಗಳು ಸಖತ್ ಆಗಿಯೇ ಜಿದ್ದಿಗೆ ಬಿದ್ದದ್ದವು.
ಪಂಜಾಬ್ ಟೀಮ್ 18 ಕೋಟಿ ರೂಪಾಯಿಗೆ ಹರಾಜು ಕರೆಯಿತು. ಈ ದುಡ್ಡಿನ ಮುಂದೆ ಯಾವ ತಂಡದ ಫ್ರಾಂಚೈಸಿಯು ಮುಂದೆ ಬರಲಿಲ್ಲ. ಹೀಗಾಗಿ ಕೊನೆಗೆ ಯಜುವೇಂದ್ರ ಚಹಾಲ್ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿದ್ದಾರೆ. ಏನೇ ಆಗಲಿ ಒಬ್ಬ ಸ್ಪನ್ನರ್ ಆಗಿರುವ ಚಹಾಲ್ ದೊಡ್ಡ ಮೊತ್ತದ ಹಣವನ್ನು ಈ ಸಲ ಪಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ