/newsfirstlive-kannada/media/post_attachments/wp-content/uploads/2025/03/yuzvendra_chahal_wife.jpg)
2025ರ ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಪೈಪೋಟಿ ನಡೆದಿದೆ. ಈಗಾಗಲೇ ಬ್ಯಾಟಿಂಗ್ ಮಾಡಿರುವ ಕಿವೀಸ್ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ಗಳ ಟಾರ್ಗೆಟ್ ನೀಡಿದೆ. ಸದ್ಯ ಈ ಪಂದ್ಯದ ವೀಕ್ಷಣೆಗೆ ಭಾರತದ ಸ್ಪಿನ್ನರ್ ಯಜುವೇಂದ್ರ ಚಹಲ್, ಯುವತಿಯೊಬ್ಬರ ಜೊತೆ ಆಗಮಿಸಿರುವುದು ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ತನ್ನ ಪತ್ನಿ ಧನಶ್ರೀ ವರ್ಮಾರಿಂದ ಬೇರೆ ಆಗಿದ್ದಾರೆ ಎನ್ನವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಏಕಾಂಗಿಯಾಗಿರುವ ಕುರಿತು ಚಹಲ್ ತಮ್ಮ ಇನ್ಸ್ಟಾದಲ್ಲಿ ದಿನಕ್ಕೊಂದು ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ ಅರ್ಜಿ ಪುರಸ್ಕರಿಸಿ ಧನಶ್ರೀ-ಚಹಲ್ ವಿಚ್ಛೇದನ ಮಂಜೂರು ಮಾಡಿದೆ. ಆದರೆ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಬಿದ್ದು ಕೆಲವೇ ಕೆಲವು ದಿನಗಳು ಕಳೆದಿವೆ. ಅಷ್ಟರಲ್ಲೇ ಚಹಲ್ ಇನ್ನೊಬ್ಬ ಯುವತಿ ಜೊತೆ ಕಾಣಿಸಿರುವುದು ಸಖತ್ ಸುದ್ದಿಯಾಗಿದೆ.
ಇದನ್ನೂ ಓದಿ: ಕುಲ್ದೀಪ್, ವರುಣ್ ಸ್ಪಿನ್ ಮ್ಯಾಜಿಕ್.. ಕಿವೀಸ್ನ 3 ವಿಕೆಟ್ ಡಮಾರ್, ಭಾರತ ಸಂಭ್ರಮ!
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯವನ್ನು ಗ್ಯಾಲರಿಯಲ್ಲಿ ಕುಳಿತು ಯಜುವೇಂದ್ರ ಚಹಲ್ ವೀಕ್ಷಣೆ ಮಾಡುತ್ತಿದ್ದಾರೆ. ಆದ್ರೆ ಪಕ್ಕದಲ್ಲಿ ಬ್ಯೂಟಿಫುಲ್ ಯುವತಿ ಇದ್ದು ಅವರ ಜೊತೆ ಮಾತಿನಲ್ಲಿ ತೊಡಗಿದ್ದಾರೆ. ಚಹಲ್ ಜೊತೆ ಇರುವ ಯುವತಿ ಹೆಸರು ಆರ್.ಜೆ ಮಹ್ವಾಶ್ ಎನ್ನುವುದು ಗೊತ್ತಾಗಿದೆ.
ಚಹಲ್- ಆರ್.ಜೆ ಮಹ್ವಾಶ್ ಅವರ ಫುಲ್ ವೈರಲ್ ಆಗಿರುವ ಫೋಟೋಗಳಿಗೆ ನೆಟ್ಟಿಗರು ವಿಧ ವಿಧವಾದ ಕಮೆಂಟ್ಸ್ ಮಾಡುತ್ತಿದ್ದಾರೆ. ಇವರು ನ್ಯೂ ಬಾಬಿ ಎಂದು ಕಮೆಂಟ್ ಮಾಡಿದ್ರೆ, ಬ್ರೋ ಮತ್ತೆ ಸೆಟ್ ಮಾಡಿಕೊಂಡ ಎಂದು ಇನ್ನೊಬ್ಬರು ಹೇಳಿದ್ದಾರೆ. ಸಿಟಿಯಲ್ಲಿ ನ್ಯೂ ಕಪಲ್ಸ್ ಎಂದು ಮತ್ತೊಬ್ಬರು ಎಂದಿದ್ದಾರೆ. ಅದರಂತೆ ಸ್ಲೋ ಬೌಲರ್ ಬಟ್ ಫಾಸ್ಟ್ ಮೂವರು ಎಂದು ಕಮೆಂಟ್ ಕೂಡ ಇದೆ.
Yuzvendra Chahal in the stands for CT Final. pic.twitter.com/uJXZAGKJ9b
— Mufaddal Vohra (@mufaddal_vohra)
Yuzvendra Chahal in the stands for CT Final. pic.twitter.com/uJXZAGKJ9b
— Mufaddal Vohra (@mufaddal_vohra) March 9, 2025
">March 9, 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ