/newsfirstlive-kannada/media/post_attachments/wp-content/uploads/2025/01/IYER.jpg)
ಅಂತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಹಿಂದಿ ಬಿಗ್ಬಾಸ್ ಸೀಸನ್ 18 ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಿದೆ. ಅದಕ್ಕೂ ಮುನ್ನ ಈ ವಾರ ನಡೆಯಲಿರುವ ‘ವೀಕೆಂಡ್ ಕಾ ವಾರ್’ ಎಪಿಸೋಡ್ನಲ್ಲಿ ಅನೇಕ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರೆ.
ಕೆಲವು ಮಾಹಿತಿಗಳ ಪ್ರಕಾರ, ಸಲ್ಮಾನ್ ಖಾನ್ ಆಪ್ತ ಸ್ನೇಹಿತೆ ರವೀನಾ ಟಂಟನ್, ಅವರ ಮಗಳು ರಾಶಾ ಹಾಗೂ ಅಜಯ್ ದೇವಗನ್ ಸಹೋದರಳಿ ಅಮನ್ ಕೂಡ ಬಿಗ್ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರ ಜೊತೆಗೆ ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಹಾಗೂ ಶ್ರೇಯಸ್ ಅಯ್ಯರ್ ಕೂಡ ಬಿಗ್ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ.
ಇದನ್ನೂ ಓದಿ:ಕಾಲ್ತುಳಿತದಲ್ಲಿ 40ಕ್ಕೂ ಹೆಚ್ಚು ಭಕ್ತರು ಗಂಭೀರ.. ನಾಲ್ವರ ಸ್ಥಿತಿ ಚಿಂತಾಜನಕ, ಸದ್ಯ ತಿರುಪತಿಯಲ್ಲಿ ಏನಾಗುತ್ತಿದೆ?
ರವೀನಾ ಟಂಡನ್ ಮತ್ತು ಇತರರು ಸಿನಿಮಾ ಪ್ರಮೋಷನ್ ಸಂಬಂಧ ಶನಿವಾರ ಬಿಗ್ಬಾಸ್ ಮನೆಗೆ ಬರಲಿದ್ದಾರೆ. ಭಾನುವಾರದ ಎಪಿಸೋಡ್ನಲ್ಲಿ ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಾಲ್ ಮತ್ತು ಶಶಾಂಗ್ ಸಿಂಗ್ ಬರಬಹುದು ಎನ್ನಲಾಗುತ್ತಿದೆ. ಈ ಮೂವರು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆಟಗಾರರು.
ಕಳೆದ ಕೆಲವು ದಿನಗಳಿಂದ ಚಹಾಲ್ ಹಾಗೂ ಪತ್ನಿ ಧನಶ್ರೀ ವರ್ಮಾ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಇದೇ ವದಂತಿಯಲ್ಲಿ ಶ್ರೇಯಸ್ ಅಯ್ಯರ್ ಹೆಸರು ಕೂಡ ಸಿಲುಕಿಕೊಂಡಿದೆ. ಹೀಗಾಗಿ ಶ್ರೇಯಸ್ ಅಯ್ಯರ್, ಚಹಾಲ್ ಒಟ್ಟಿಗೆ ಶೋನಲ್ಲಿ ಕಾಣಿಸಿಕೊಳ್ಳುತ್ತಿರೋದು ವೀಕ್ಷಕರಿಗೆ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಗೋವಿಂದನ 7 ಭಕ್ತರು ಕೊನೆಯುಸಿರು.. ಕಾಲ್ತುಳಿತಕ್ಕೆ ಅಸಲಿ ಕಾರಣ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ