10, 20 ಕೋಟಿ ಅಲ್ಲವೇ ಅಲ್ಲ.. ಧನಶ್ರೀಗೆ ಚಹಾಲ್ ಕೊಟ್ರಂತೆ ಕೋಟಿ ಕೋಟಿ ಹಣ..!

author-image
Ganesh
Updated On
10, 20 ಕೋಟಿ ಅಲ್ಲವೇ ಅಲ್ಲ.. ಧನಶ್ರೀಗೆ ಚಹಾಲ್ ಕೊಟ್ರಂತೆ ಕೋಟಿ ಕೋಟಿ ಹಣ..!
Advertisment
  • ಧನಶ್ರೀ ಮತ್ತು ಚಹಾಲ್ ಮಧ್ಯೆ ಒಪ್ಪಂದ ಆಗಿದೆಯಾ?
  • ಡಿವೋರ್ಸ್ ಕನ್ಫರ್ಮ್​ ಎನ್ನುತ್ತಿವೆ ಕುಟುಂಬ ಮೂಲಗಳು
  • 2020ರ ಅಂತ್ಯದಲ್ಲಿ ಶುರುವಾದ ಇಬ್ಬರ ದಾಂಪತ್ಯ ಪಯಣ

ತುಂಬಾ ದಿನಗಳಿಂದ ಟೀಂ ಇಂಡಿಯಾ ಸ್ಟಾರ್ ಯುಜುವೇಂದ್ರ ಚಹಾಲ್ ಹಾಗೂ ಧನಶ್ರೀ ಟ್ರೆಂಡ್ ಆಗ್ತಿದ್ದಾರೆ. ಇಬ್ಬರು ಡಿವೋರ್ಸ್ ಪಡೆದುಕೊಂಡಿರೋದು ಹೌದು ಅಂತಾ ಕುಟುಂಬದ ಮೂಲಗಳು ತಿಳಿಸಿವೆ. ಬೆನ್ನಲ್ಲೇ, ಧನಶ್ರೀಗೆ ಚಹಾಲ್ ಕೋಟ್ಯಾಂತರ ರೂಪಾಯಿ ಹಣ ಪಾವತಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 27 ವರ್ಷದ ಬಳಿಕ ದೆಹಲಿಯಲ್ಲಿ ಅಧಿಕಾರದತ್ತ ಬಿಜೆಪಿ; ಭಾಷಣಕ್ಕೆ ಸಜ್ಜಾದ ಮೋದಿ! ವಿಜಯೋತ್ಸವಕ್ಕೆ ತಯಾರಿ ಹೇಗಿದೆ?

publive-image

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗ್ತಿದೆ. ಅದರಲ್ಲಿ ಚಾಹಲ್ ಮತ್ತು ಧನಶ್ರೀ ನಡುವೆ ಒಪ್ಪಂದ ಆಗಿದೆ. ಒಪ್ಪಂದದ ಪ್ರಕಾರ ಚಹಾಲ್ ಅವರು ಧನಶ್ರೀಗೆ ಕೋಟ್ಯಾಂತರ ರೂಪಾಯಿ ಪಾವತಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ, ಚಾಹಲ್ ಧನಶ್ರೀ ವರ್ಮಾ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು 60 ಕೋಟಿ ರೂ.ಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹೀಗಾಗಿ ಕೆಲವರು ಇದು ಸುಳ್ಳು ಅಂತಲೂ ಹೇಳುತ್ತಿದ್ದಾರೆ.

ಇದನ್ನೂ ಓದಿ: BIG BREAKING ಅರವಿಂದ್ ಕೇಜ್ರಿವಾಲ್​​ಗೆ ಹೀನಾಯ ಸೋಲು..!

2020ರ ಅಂತ್ಯದಲ್ಲಿ ಶುರುವಾದ ಇಬ್ಬರ ದಾಂಪತ್ಯ ಪಯಣ, 2025ರ ಆರಂಭದ ಹೊತ್ತಿಗೆ ಅಂತ್ಯದ ಹತ್ತಿರ ಬಂದು ನಿಂತಿದೆ. ಕೇವಲ 4 ವರ್ಷಗಳಲ್ಲೇ ಅನ್ಯೋನ್ಯವಾಗಿದ್ದ ಸಂಬಂಧ ಹಳಸಿದೆ. ನನಗೆ ನೀನು ನಿನಗೆ ನಾನು ಅಂತಿದ್ದ ಜೋಡಿಯ ಮನಸ್ಸು ದೂರಾಗಿ, ಮನೆ ಬದಲಾಗಿ.. ಕನಿಷ್ಟ ಜಗಳವನ್ನೂ ಆಡಲಾರದಷ್ಟು ದೂರಕ್ಕೆ ಬಂದಾಗಿದೆ. ಆರಂಭದಲ್ಲಿ ಇವ್ರಿಬ್ಬರ ನಡುವೆಯಿದ್ದ ಆತ್ಮೀಯತೆ, ಈಗಿರುವ ಸುದೀರ್ಘ ಮೌನವನ್ನ ನೋಡಿದ್ರೆ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬಾಳಿನಲಿ ಅನ್ನೋ ಹಾಡು ನೆನಪಾಗದೇ ಇರಲ್ಲ.

ಇದನ್ನೂ ಓದಿ: ಪ್ರೇಮ್ ಜೊತೆ ದರ್ಶನ್ ಸಿನಿಮಾ ಮಾಡಲ್ವಾ? ಇಬ್ಬರ ಮಧ್ಯೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment