/newsfirstlive-kannada/media/post_attachments/wp-content/uploads/2024/11/YASH-MASTER-1.jpg)
ಸಿನಿಮಾ ತಾರೆಯರು ಹಾಗೂ ಕ್ರಿಕೆಟಿಗರು ಮದುವೆಯಾಗುವ ಸಂಪ್ರದಾಯ ಹೊಸದೇನೂ ಅಲ್ಲ. ಕ್ರಿಕೆಟಿಗರನ್ನು ಮದುವೆಯಾದ ನಂತರ ಸಿನಿಮಾ ನಟಿಯರು ಚಿತ್ರರಂಗದಿಂದ ದೂರ ಸರಿದ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ಖ್ಯಾತ ಕ್ರಿಕೆಟಿಗನ ಪತ್ನಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅದೂ ತೆಲುಗು ಸಿನಿಮಾ ಮೂಲಕ! ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮತ್ತು ಮಾಜಿ ಆರ್‌ಸಿಬಿ ಸ್ಟಾರ್ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ಸಿನಿ ರಂಗ ಪ್ರವೇಶ ಮಾಡಿದ್ದಾರೆ. ಸೋಶಿಲ್ ಮೀಡಿಯಾ ಸ್ಟಾರ್ ಆಗಿರುವ ಅವರು, ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.
ಇದನ್ನೂ ಓದಿ:ಚಹಾಲ್ ಮತ್ತೆ ಆರ್ಸಿಬಿಗೆ ಎಂಟ್ರಿ.. ಮ್ಯಾನೇಜ್ಮೆಂಟ್ನಲ್ಲಿ ಭಾರೀ ಲೆಕ್ಕಾಚಾರ..!
ಅದ್ಭುತ ಡ್ಯಾನ್ಸರ್ ಆಗಿರುವ ಧನಶ್ರೀ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು Instagram ನಲ್ಲಿ, ಯೂಟ್ಯೂಬ್ನಲ್ಲಿ ಹಂಚಿಕೊಳ್ಳುತ್ತಾರೆ. ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಧನಶ್ರೀ ಭಾಗವಹಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾಗುತ್ತಿರುವ Akasham Dati Vastava ಸಿನಿಮಾಗೆ ನಾಯಕಿಯಾಗಿದ್ದಾರೆ. ಖ್ಯಾತ ಡ್ಯಾನ್ಸ್ ಮಾಸ್ಟರ್ ಯಶ್ ನಾಯಕರಾಗಿ ನಟಿಸುತ್ತಿದ್ದಾರೆ. ದಿಲ್ ರಾಜು ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಹರ್ಷಿತ್ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ಚಿತ್ರ ನಿರ್ಮಿಸ್ತಿದ್ದಾರೆ. ಶಶಿಕುಮಾರ್ ಮುತ್ತುಲೂರಿ (Sasi Kumar Muthuluri) ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಈ ಚಿತ್ರದ ಕೆಲವು ಭಾಗಗಳನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ದೃಶ್ಯಗಳ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ. ಚಿತ್ರದಲ್ಲಿ ಧನಶ್ರೀ ಜೊತೆಗೆ ಮತ್ತೊಬ್ಬ ನಾಯಕಿ ನಟಿ ನಟಿಸಲಿದ್ದಾರೆ. ಸೀರತ್ ಕಪೂರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ