/newsfirstlive-kannada/media/post_attachments/wp-content/uploads/2025/01/Chahal_Dhanashree.jpg)
ಕ್ರಿಕೆಟರ್ ಯುಜುವೇಂದ್ರ ಚಹಾಲ್ ಹಾಗೂ ಧನಶ್ರೀ ನಡುವಿನ ಸಂಸಾರದಲ್ಲಿ ಬಿರುಕು ಮೂಡಿದೆ. ಇಬ್ಬರೂ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ.
ಈ ವಿಚಾರ ಹೆಚ್ಚು ಟ್ರೆಂಡ್ ಆಗ್ತಿದ್ದ ಚಹಾಲ್ ಅವರು ನಿಗೂಢ ಪೋಸ್ಟ್ಗಳನ್ನು ಮಾಡಿ ಮತ್ತಷ್ಟು ಗೊಂದಲ ಸೃಷ್ಟಿಸ್ತಿದ್ದಾರೆ. ಈ ನಡುವೆ ನಿಗೂಢ ಹುಡುಗಿ ಜೊತೆ ಮುಂಬೈನ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡು ಹುಬ್ಬೇರಿಸುವಂತೆ ಮಾಡಿದ್ದಾರೆ ಚಹಾಲ್.
ಇದನ್ನೂ ಓದಿ:Stampede; ತಿರುಪತಿ ಕಾಲ್ತುಳಿತದಲ್ಲಿ ಜೀವ ಬಿಟ್ಟ ಕರ್ನಾಟಕದ ಓರ್ವ ಮಹಿಳೆ
ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ, ಧನಶ್ರೀ ಮಾತ್ರ ಮೌನವಾಗಿಯೇ ಇದ್ದರು. ಇದೀಗ ಅವರೂ ಕೂಡ ಇನ್ಸ್ಟಾಗ್ರಾಮ್ನಲ್ಲಿ ನಿಗೂಢ ಪೋಸ್ಟ್ ಒಂದನ್ನು ಮಾಡಿದ್ದಾರೆ. ತಮಗೆ ಆಗುತ್ತಿರುವ ನೋವಿನ ಬಗ್ಗೆ ಹಂಚಿಕೊಂಡಿರು ಧನಶ್ರೀ, ತಮ್ಮ ಪೋಸ್ಟ್ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
ಧನಶ್ರೀ ಬರೆದುಕೊಂಡಿದ್ದು ಏನು?
ಕಳೆದ ಕೆಲವು ದಿನಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾನೇ ನೋವು ಆಗ್ತಿದೆ. ಆಧಾರ ರಹಿತ, ಸುಳ್ಳುಗಳಿಂದ ಕೂಡಿದ ವರದಿಗಳು ಹಾಗೂ ದ್ವೇಷ, ಪ್ರಚೋದನಾಕಾರಿ ಟ್ರೋಲ್ಗಳಿಂದ ನನ್ನ ಚಾರಿತ್ರ್ಯ ವಧೆಯಾಗಿದೆ. ನನ್ನ ಹೆಸರು ಬಿಲ್ಡ್ ಮಾಡಲು ಮತ್ತು ನನ್ನ ಅಸ್ತಿತ್ವನ್ನು ಕಂಡುಕೊಳ್ಳಲು ತುಂಬಾ ವರ್ಷಗಳಿಂದ ಕಷ್ಟಪಟ್ಟಿದ್ದೇನೆ. ನನ್ನ ಮೌನ ದೌರ್ಬಲ್ಯದ ಸಂಕೇತವಲ್ಲ, ಶಕ್ತಿಯ ಸಂಕೇತ. ನೆಗೆಟೀವ್ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಸುಲಭವಾಗಿ ಹರಡುತ್ತವೆ. ನಾನು ನನ್ನ ಸತ್ಯವನ್ನು ನಂಬಿದ್ದೇನೆ. ನನ್ನ ಮೌಲ್ಯಗಳನ್ನು ಉಳಿಸಿಕೊಂಡು ಹೋಗ್ತೇನೆ. ಯಾವುದೇ ಸಮರ್ಥನೆಯ ಅಗತ್ಯವಿಲ್ಲದೆ ಸತ್ಯ ಹೊರಬರುತ್ತದೆ. ಓಂ ನಮಃ ಶಿವಾಯ.
ಇದನ್ನೂ ಓದಿ: ಗ್ರಾಂಡ್ ಫಿನಾಲೆಗೂ ಮುನ್ನ ಬಿಗ್ಬಾಸ್ಗೆ ಚಹಾಲ್, ಅಯ್ಯರ್ ಪ್ರವೇಶ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ