/newsfirstlive-kannada/media/post_attachments/wp-content/uploads/2025/01/CHAHAL-2.jpg)
ಯುಜುವೇಂದ್ರ ಚಹಲ್ -ಧನಶ್ರೀ ವರ್ಮಾ ಡಿವೋರ್ಸ್ ಸದ್ಯ ಹಲ್ಚಲ್ ಎಬ್ಬಿಸಿದೆ. ಇದರ ನಡುವೆ ಚಹಲ್ ತಮ್ಮ ಪತ್ನಿಯನ್ನ ಎಷ್ಟು ಪ್ರೀತಿಸುತ್ತಿದ್ದರು ಅನ್ನೋ ಕಥೆಯನ್ನ ಜೆರ್ಸಿಯೊಂದು ರಿವೀಲ್ ಮಾಡಿದೆ. ಚಹಲ್ ಮನದಾಳದ ಪ್ರೀತಿಯ ಕಥೆ ಹೇಳುತ್ತಿರುವ ಜೆರ್ಸಿಯ ಇಂಟ್ರಸ್ಟಿಂಗ್ ಕಥೆಯೇ ಇವತ್ತಿನ ಸಖತ್ ಸ್ಟೋರಿ.
ಟೀಮ್ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ದಾಂಪತ್ಯ ಜೀವನದ ಬಂಡಿ ಹಳಿ ತಪ್ಪಿದ್ದು, ಚಹಲ್-ಧನಶ್ರೀ ದೂರವಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಇಬ್ಬರೂ ದೂರಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಸಂಕ್ರಾಂತಿ ಸಂಭ್ರಮ; ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರು ಕಾತರ
ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಯುಜುವೇಂದ್ರ ಚಹಲ್ ಇನ್ಸ್ಸ್ಟಾದಲ್ಲಿ, ಧನಶ್ರೀ ಜೊತೆಗಿದ್ದ ಎಲ್ಲಾ ಫೋಟೋ-ವಿಡಿಯೋಸ್ನ ಡಿಲೀಟ್ ಮಾಡಿದ್ದಾರೆ. ಎಲ್ಲಾ ಫೋಟೋ ಡಿಲೀಟ್ ಮಾಡಿದರೂ, ಇದೊಂದು ಫೋಟೋ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿದೆ. ಇದೇ ಪೋಟೋ ಚಹಲ್ ಮನದಾಳದ ಪ್ರೀತಿಯ ಕಥೆಯನ್ನ ಹೇಳುತ್ತಿದೆ.
ಟೀಮ್ ಇಂಡಿಯಾ ಬಿಟ್ಟು ಚಹಲ್ ಇಂಗ್ಲೆಂಡ್ಗೆ ಕೌಂಟಿ ಆಡೋಕೆ ತೆರಳಿದ್ದು ನಿಮಗೆ ಗೊತ್ತಿದೆ. ಅಲ್ಲಿ ಕೆಂಟ್ ಪರ ಕಣಕ್ಕಿಳಿದ ಚಹಲ್‌ಗೆ ಯಾವಾಗಲೂ 3ನೇ ನಂಬರಿನ ಜೆರ್ಸಿ ಸಿಕ್ಕಿರಲಿಲ್ಲ. ಬೇರೆ ಯಾರೋ ಆ ನಂಬರ್ ತೆಗೆದುಕೊಂಡಿದ್ರಿಂದ, ಹೊಸ ನಂಬರ್ ಪಡೆದುಕೊಳ್ಳುವಂತೆ ಕೇಳಲಾಗಿತ್ತು. ಆಗ ಚಹಲ್ ಆಯ್ಕೆ ಮಾಡಿದ್ದು ನಂಬರ್ 27. ಇದು ಧನಶ್ರೀ ವರ್ಮಾ ಹುಟ್ಟಿದ ದಿನಾಂಕ. ಅವರು 1996 ನವೆಂಬರ್ 27 ರಂದು ಜನಿಸಿದ್ದಾರೆ. ಪತ್ನಿಯ ಮೇಲಿನ ಪ್ರೀತಿಯಿಂದ ಚಹಲ್ ಈ ನಂಬರ್ ಜೆರ್ಸಿ ಆಯ್ಕೆ ಮಾಡಿ ಕೌಂಟಿ ಕ್ರಿಕೆಟ್ ಆಡಿದರು. ಆದರೆ ಈಗ, ಆ ಜೆರ್ಸಿ ಹಾಗೇ ಉಳಿದಿದೆ. ಇಬ್ಬರ ನಡುವಿನ ಪ್ರೀತಿ ಉಳಿದಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ