newsfirstkannada.com

ವಿವಾದಿತ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಮದುವೆಗೆ ಯಾರೆಲ್ಲಾ ಬರ್ತಾರೆ? ಯಾಕಿಷ್ಟು ಸಿಂಪಲ್‌?

Share :

Published June 23, 2024 at 6:03am

  ಗುರು ಹಿರಿಯರ ಒಪ್ಪಿಗೆ ಮೇರೆಗೆ ಮದುವೆಗೆ ಸಿದ್ಧರಾದ ನಟಿ ಸೋನಾಕ್ಷಿ

  ಮುಂಬೈನ ಬಾಸ್ಟಿಯನ್‌ನಲ್ಲಿ ನಡೆಯುತ್ತಿರೋ ಸೋನಾಕ್ಷಿ ಮದುವೆ

  ನಟಿ ಸೋನಾಕ್ಷಿ ಮದುವೆಗೆ ಖ್ಯಾತ ಸೆಲೆಬ್ರಿಟಿಗಳು ಭಾಗಿ ಸಾಧ್ಯತೆ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೀಗಾಗಿ ಸೋನಾಕ್ಷಿ ಸಿನ್ಹಾ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಜೂನ್‌ 20ರಿಂದಲೇ ಮದುವೆ ಕಾರ್ಯಕ್ರಮಗಳು ನಡೆದಿವೆ. ಸಾಮಾಜಿಕ ಜಾಲತಾಣದಲ್ಲಿ ಸೋನಾಕ್ಷಿ ಸಿನ್ಹಾ ಅವರ ಮೆಹಂದಿ ಕಾರ್ಯಕ್ರಮದ ಫೋಟೋಗಳು ವೈರಲ್​ ಆಗಿವೆ.

ಇನ್ನು, ನಟಿಯ ಮದುವೆ ತಯಾರಿ ಜೋರಾಗಿದ್ದು, ಸೋನಾಕ್ಷಿ ಸಿನ್ಹಾ ಅವರ ರಾಮಾಯಣ ಬಂಗಲೆಗೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಜೊತೆಗೆ ಮದುವೆ ನಿಮಿತ್ತ ಸೋನಾಕ್ಷಿ ಸಿನ್ಹಾ ಅವರ ಮನೆಗೆ ಅತಿಥಿಗಳ ದಂಡೇ ಹರಿದು ಬರ್ತಿದೆ. ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್‌ ಇಕ್ಬಾಲ್‌ ಮದುವೆ ನಡೆಯಲಿದೆ.

ಇದನ್ನೂ ಓದಿ: ಈಗ ದರ್ಶನ್ ಪರವಾಗಿ ಯಾರು ನಿಲ್ಲಲ್ಲ.. ಸಚಿವ ಜಮೀರ್ ಶಾಕಿಂಗ್ ರಿಯಾಕ್ಷನ್; ಹೇಳಿದ್ದೇನು?

ನಟಿ ಸೋನಾಕ್ಷಿ ಮತ್ತು ಇಕ್ಬಾಲ್‌ 2022ರಲ್ಲಿ ಬಿಡುಗಡೆಯಾದ ‘ಡಬಲ್‌ ಎಕ್ಸ್‌ಎಲ್‌’ ಚಿತ್ರದಲ್ಲಿ ನಟಿಸಿದ್ದರು. ಅಂದಿನಿಂದ ಈ ಇಬ್ಬರು ಡೇಟಿಂಗ್‌ ಮಾಡುತ್ತಿದ್ದರು ಎನ್ನಲಾಗಿತ್ತು. ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಆದರೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಹರಿದಾಡುತ್ತಿದ್ದವು. ಆದರೆ ಇದನ್ನು ನೋಡಿದ ಅಭಿಮಾನಿಗಳು ಈ ಇಬ್ಬರು ಲವ್​ ಮಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದರು.

ಇದೀಗ ಆ ಎಲ್ಲಾ ಅನುಮಾನ ನಿಜವಾಗಿ ಬಿಟ್ಟಿದೆ. ಮುಂಬೈನ ಬಾಸ್ಟಿಯನ್‌ನಲ್ಲಿ ಸೋನಾಕ್ಷಿ ಮತ್ತು ಜಹೀರ್ ಮದುವೆಯ ಆರತಕ್ಷತೆಯನ್ನು ಆಯೋಜಿಸಲಾಗಿದೆ. ಸೋನಾಕ್ಷಿ ಅವರ ಮದುವೆಗೆ ನಟ ಸಲ್ಮಾನ್ ಖಾನ್, ಹುಮಾ ಖುರೇಷಿ, ಶಾರುಖ್​ ಖಾನ್​ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿವಾದಿತ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಮದುವೆಗೆ ಯಾರೆಲ್ಲಾ ಬರ್ತಾರೆ? ಯಾಕಿಷ್ಟು ಸಿಂಪಲ್‌?

https://newsfirstlive.com/wp-content/uploads/2024/06/sonakshi3.jpg

Load More