46ನೇ ವಯಸ್ಸಿಗೆ ಮೊದಲ ಮಗುವಿಗೆ ಅಪ್ಪನಾದ ಮಾಜಿ ಕ್ರಿಕೆಟರ್ ಜಹೀರ್ ಖಾನ್​.. ಇಟ್ಟ ಹೆಸರೇನು?

author-image
Bheemappa
Updated On
46ನೇ ವಯಸ್ಸಿಗೆ ಮೊದಲ ಮಗುವಿಗೆ ಅಪ್ಪನಾದ ಮಾಜಿ ಕ್ರಿಕೆಟರ್ ಜಹೀರ್ ಖಾನ್​.. ಇಟ್ಟ ಹೆಸರೇನು?
Advertisment
  • ಪ್ರೀತಿ ಮಾಡಿ, ಮದುವೆಯಾಗಿದ್ದ ಮಾಜಿ ಸ್ಟಾರ್ ಕ್ರಿಕೆಟರ್​​
  • ತಮ್ಮ ಮೊದಲ ಮಗುವಿಗೆ ಕ್ರಿಕೆಟರ್​ ಏನೆಂದು ಹೆಸರಿಟ್ಟರು?
  • ಇವ್ರು ಟೀಮ್ ಇಂಡಿಯಾದಲ್ಲಿ ಪೇಸ್​ ಬೌಲರ್ ಆಗಿದ್ದರು

ಟೀಮ್ ಇಂಡಿಯಾದ ಮಾಜಿ ಪೇಸ್ ಬೌಲರ್ ಹಾಗೂ ಸದ್ಯ ಲಕ್ನೋ ತಂಡದ ಮೆಂಟರ್ ಆಗಿರುವ ಜಹೀರ್ ಖಾನ್ ಅವರು ಮೊದಲ ಮಗುವಿಗೆ ತಂದೆಯಾಗಿದ್ದಾರೆ. ಮೊದಲ ಮಗು ಪಡೆದ ಖುಷಿಯಲ್ಲಿದ್ದ ಸ್ಟಾರ್ ದಂಪತಿ ಮಗುವಿನ ಜೊತೆ ಇರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮಾಜಿ ಕ್ರಿಕೆಟರ್​ನ ಮನೆಯಲ್ಲಿ ಸಂತಸ ತುಂಬಿದೆ.

publive-image

ಜಹೀರ್ ಖಾನ್ ಹಾಗೂ ಹಿಂದಿ ಸಿನಿಮಾ ನಟಿ ಸಾಗರಿಕಾ ಘಾಟ್ಗೆ (Sagarika Ghatge) ಅವರು 2017ರಲ್ಲಿ ಹೊಸ ಜೀವನಕ್ಕೆ ಕಾಲಿರಿಸಿದ್ದರು. ಜಹೀರ್ ಖಾನ್​ಗೆ 46 ವರ್ಷ ಆಗಿದ್ರೆ, ನಟಿ ಸಾಗರಿಕಾಗೆ 39 ವರ್ಷಗಳು ಆಗಿವೆ. ಇವರು ಮದುವೆಯಾದ ನಂತರ ಬರೋಬ್ಬರಿಗೆ 8 ವರ್ಷದ ಬಳಿಕ ಮೊದಲ ಮಗುವಿಗೆ ಅಪ್ಪ, ಅಮ್ಮ ಆಗಿದ್ದಾರೆ. ಗಂಡು ಮಗುವನ್ನು ಪಡೆದ ಖುಷಿಯಲ್ಲಿರುವ ಜಹೀರ್ ಖಾನ್ ಹಾಗೂ ಅವರ ಕುಟುಂಬಸ್ಥರು ಫತೇಸಿನ್ಹ್ ಖಾನ್ (Fatehsinh Khan) ಎಂದು ನಾಮಕರಣ ಮಾಡಿದ್ದಾರೆ.

ಮದುವೆಯಾದ ಕೆಲವು ವರ್ಷಗಳ ಬಳಿಕ ತಮಗೆ ಮಗು ಜನಿಸಿದ್ದಕ್ಕೆ ಜಹೀರ್​ ಖಾನ್ ಪತ್ನಿ ಸಾಗರಿಕಾ ಘಾಟ್ಗೆ ಅವರು ತಮ್ಮ ಇನ್​ಸ್ಟಾದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಇದರಲ್ಲಿ ಮಗನ ಜೊತೆಗಿನ ಫೋಟೋದಲ್ಲಿ ದಂಪತಿ ಖುಷಿಯಲ್ಲಿ ನಗುತ್ತ ಇದ್ದಾರೆ. ಪ್ರೀತಿ, ಕೃತಜ್ಞತೆ ಹಾಗೂ ದೈವಿಕ ಆಶೀರ್ವಾದಿಂದ ಮಗ ಫತೇಸಿನ್ಹ್ ಖಾನ್​ನನ್ನು ಪಡೆದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ..! ಚಲಿಸುವ ಟ್ರೈನ್​ ಅಲ್ಲೂ ಹಣ ಡ್ರಾ ಮಾಡಬಹುದು, ಹೇಗೆ ಗೊತ್ತಾ?

publive-image

ಜಹೀರ್ ಖಾನ್ ಹಾಗೂ ನನ್ನದು ಲವ್ ಮ್ಯಾರೇಜ್. 2017ಕ್ಕೂ ಮೊದಲು ಪ್ರೀತಿಯಲ್ಲಿ ಬಿದ್ದಾಗ ಜಹೀರ್ ಖಾನ್ ಮೊದ ಮೊದಲು ಮಾತಾಡಲು ಹಿಂಜರಿಯುತ್ತಿದ್ದರು. ಹೇಗೆ ಮಾತಾಡಿಸುವುದು ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ನಮ್ಮ ಮಧ್ಯೆ ಯಾವಾಗ ಅಂಗದ್ ಬೇಡಿ ಅವರು ಎಂಟ್ರಿ ಆದರೋ ಆವಾಗ ಜಹೀರ್ ಖಾನ್, ನಾನು ಪರಸ್ಪರ ಮಾತನಾಡಲು ಶುರು ಮಾಡಿದರು. ಮಾಜಿ ಕ್ರಿಕೆಟರ್​ ಯುವರಾಜ್ ಸಿಂಗ್ ಅವರ ಮದುವೆ ಸಮಾರಂಭದಲ್ಲಿ ನಮ್ಮ ನಡುವಿನ ಪ್ರೀತಿ ಎಲ್ಲರಿಗೂ ಗೊತ್ತಾಯಿತು ಎಂದು ಸಂದರ್ಶನವೊಂದರಲ್ಲಿ ನಟಿ ಸಾಗರಿಕಾ ಅವರು ಹೇಳಿಕೊಂಡಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment