ದೇವ್ರಾಣೆಗೂ ಅಪ್ಪ ಡಾಲಿ ಮದುವೆಗೆ ಬಂದಿದ್ದು ಗೊತ್ತಿಲ್ಲ- ಸಚಿವ ಜಮೀರ್ ಅವರ ಮಗ ಹೇಳಿದ್ದೇನು?

author-image
Bheemappa
Updated On
ದೇವ್ರಾಣೆಗೂ ಅಪ್ಪ ಡಾಲಿ ಮದುವೆಗೆ ಬಂದಿದ್ದು ಗೊತ್ತಿಲ್ಲ- ಸಚಿವ ಜಮೀರ್ ಅವರ ಮಗ ಹೇಳಿದ್ದೇನು?
Advertisment
  • ಅಪ್ಪ ಮದುವೆಗೆ ಬಂದು ಹೋಗಿರುವುದು ಮಗನಿಗೆ ಗೊತ್ತೇ ಇಲ್ಲ
  • ಧನಂಜಯ ಮದುವೆಗೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್
  • ಆರತಕ್ಷತೆಗೆ ಆಗಮಿಸಿದ್ದ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್

ಮೈಸೂರು: ಧನಂಜಯ ಹಾಗೂ ಧನ್ಯತಾ ಅವರ ಮದುವೆ ಗ್ರ್ಯಾಂಡ್ ಆಗಿ ಅರಮನೆ ನಗರಿಯ ವಸ್ತು ಸಂಗ್ರಹಾಲಯ ಮೈದಾನದಲ್ಲಿ ನಡೆಯುತ್ತಿದೆ. ಆರತಕ್ಷತೆ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಸೇರಿದಂತೆ ಸಿನಿರಂಗದ ಗಣ್ಯರು ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಈ ಮದುವೆಗೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಅವರ ಮಗ ಜೈದ್ ಖಾನ್ ಅವರು, ನನ್ನ ಅಪ್ಪ ಇಲ್ಲಿಗೆ ಬಂದಿರೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ ನಟ ಜೈದ್ ಖಾನ್ ಅವರು, ಎಷ್ಟೋ ವರ್ಷಗಳ ಆದ ಮೇಲೆ ಮೈಸೂರಿನಲ್ಲಿ ಮದುವೆಗೆ ಬಂದಿದ್ದೇನೆ. ಡಾಲಿ ಧನಂಜಯ ಹಾಗೂ ಧನ್ಯತಾ ಅವರಿಗೆ ದೇವರು ಆಯುಷ್ಯ, ಆರೋಗ್ಯ ಎಲ್ಲವನ್ನು ಚೆನ್ನಾಗಿ ಕೊಡಲಿ. ನೂರು ಕಾಲ ಇಬ್ಬರು ಸುಖವಾಗಿ ಜೀವನ ಸಾಗಿಸಲಿ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: ನ್ಯೂಸ್​ಫಸ್ಟ್​ ಜೊತೆ ಐಶ್ವರ್ಯ ಗೌಡ EXCLUSIVE ಮಾತು.. ಎಸಿಪಿ ಭರತ್ ರೆಡ್ಡಿ ಕಡೆ ಬೊಟ್ಟು ಮಾಡಿದ್ರಾ?

ಈ ವೇಳೆ ನಿಮ್ಮಪ್ಪ ಅವರು ಮದುವೆಗೆ ಬಂದಿದ್ದರು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈದ್ ಖಾನ್, ಅಪ್ಪ ಬಂದಿದ್ರಾ?. ನಿಗವಾಗಲೂ!. ದೇವ್ರಾಣೆಗೆ ಅಪ್ಪ ಇಲ್ಲಿಗೆ ಬಂದಿದ್ದಾರೆ ಎಂದು ಗೊತ್ತಿರಲಿಲ್ಲ. ನಿಜವಾಗಲೂ ಅಪ್ಪ ಬಂದಿರೋದು ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.

ಧನಂಜಯ್ ಹಾಗೂ ಧನ್ಯತಾ ಅವರ ಮದುವೆ ಸಂಭ್ರಮದಿಂದ ಮೈಸೂರಿನಲ್ಲಿ ನಡೆಯುತ್ತಿದೆ. ನಿನ್ನೆ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇಂದು ಕನ್ಯಾಧಾನ, ಧಾರ ಮುಹೂರ್ತ ನಡೆಯುತ್ತಿದೆ. ಸಾವಿರಾರು ಜನ ಡಾಲಿ ಜೋಡಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಪ್ರೀತಿಯಿಂದ ಶುಭಾಶಯ ಕೋರುತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಮದುವೆ ಶಾಸ್ತ್ರಗಳು ಶುರುವಾಗಿದೆ. ಮೊದಲಿಗೆ ಮಂಟಪ ಪೂಜೆ, ನವ ಪ್ರಧಾನ‌ ಕಲಶ ಪೂಜೆ, ಕನ್ಯಾಧಾನ ಆಮೇಲೆ ಧಾರ ಮುಹೂರ್ತ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment