/newsfirstlive-kannada/media/post_attachments/wp-content/uploads/2024/12/Zakir_Hussain.jpg)
ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಇಹಲೋಕ ತ್ಯಜಿಸಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಹುಸೇನ್ ಚಿಕಿತ್ಸೆ ಫಲಿಸದೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜಾಕಿರ್ ಹುಸೇನ್ ಅವರು 73 ವಯಸ್ಸಾಗಿದ್ದು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ (idiopathic pulmonary fibrosis) ನಿಂದ ನಿಧನರಾದರು ಎಂದು ಅವರ ಕುಟುಂಬದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಹುಸೇನ್ ಅವರು ಪತ್ನಿ ಅಂಟೋನಿಯಾ ಮಿನ್ನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ, ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಉಸ್ತಾದ್ ಜಾಕಿರ್ ಹುಸೇನ್ ಭಾರತೀಯ ತಬಲಾ ವಾದಕ, ಸಂಯೋಜಕ, ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕ. ತಬಲಾ ಅಂದ್ರೆ ಝಾಕೀರ್, ಝಾಕೀರ್ ಅಂದ್ರೆ ತಬಲಾ. ಸಂಗೀತಗಾರ ಝಾಕೀರ್ ಹುಸೇನ್ ಇನ್ನು ನೆನಪು ಮಾತ್ರ.
/newsfirstlive-kannada/media/post_attachments/wp-content/uploads/2024/12/Zakir_Hussain_1.jpg)
ವಾದನ ನಿಲ್ಲಿಸಿದ ಹುಸೇನ್!
- ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಪುತ್ರ ಝಾಕೀರ್​
- ಮಾರ್ಚ್​ 9, 1951ರಂದು ಝಾಕೀರ್​ ಹುಸೇನ್​​ ಜನನ
- 6 ದಶಕಗಳ ಕಾಲ ತಬಲಾ ನುಡಿಸಿರೋ ಕೀರ್ತಿಗೆ ಪಾತ್ರ
- ಪ್ರಮುಖ ವಿವಿಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ
- ಅಂತರರಾಷ್ಟ್ರೀಯ ಕಲಾವಿದರೊಂದಿಗೆ ತಬಲಾ ವಾದನ
- 1988ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣಕ್ಕೆ ಭಾಜನ
- 2023ರಲ್ಲಿ ಝಾಕೀರ್​ ಹುಸೇನ್​ರಿಗೆ ಪದ್ಮವಿಭೂಷಣ ಗೌರವ
- ನಾಲ್ಕು ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದ ಹುಸೇನ್
- ಆಂಟೋನಿಯಾ ಮಿನ್ನೆಕೋಲಾ ಜೊತೆ ಝಾಕೀರ್ ಮದುವೆ
- ಅನಿಸಾ ಖುರೇಷಿ, ಇಸಾಬೆಲ್ಲಾ ಖುರೇಷಿ ಇಬ್ಬರು ಪುತ್ರಿಯರು
ಇನ್ನು ಝಾಕೀರ್ ಹುಸೇನ್​ರನ್ನ ವಿಶ್ವದ ಶ್ರೇಷ್ಠ ತಬಲಾವಾದಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹುಸೇನ್ ಮನೆತನದಲ್ಲಿ ಸಂಗೀತವು ಕೇವಲ ಒಂದು ಕಲಾ ಪ್ರಕಾರವಾಗಿರಲಿಲ್ಲ. ಅದು ಅವರು ಉಸಿರಾಡುವ ಗಾಳಿಯಾಗಿತ್ತು.
/newsfirstlive-kannada/media/post_attachments/wp-content/uploads/2024/12/Zakir_Hussain_2.jpg)
ಜಾಕೀರ್ ಹುಸೇನ್​ರ ಬಾಲ್ಯ ಜೀವನ
ಚಿಕ್ಕ ವಯಸ್ಸಿನಿಂದಲೂ, ಝಾಕೀರ್ ತಬಲಾ ಬಡಿತಗಳ ಸಂಕೀರ್ಣದ ಜಗತ್ತಿನಲ್ಲಿ ಮುಳುಗಿ, ತನ್ನ ತಂದೆಯ ಸಂಗೀತ ಬೋಧನೆಗಳನ್ನು ಹೀರಿಕೊಳ್ಳುತ್ತಾ ವಾದ್ಯದ ಬಗ್ಗೆ ಸಹಜ ತಿಳುವಳಿಕೆಯನ್ನು ಬೆಳೆಸಿಕೊಂಡರು. ಮುಂದೆ ಉಸ್ತಾದ್ ಜಾಕೀರ್ ಹುಸೇನ್ ಅವರು ತಮ್ಮ ಏಳನೇ ವಯಸ್ಸಿನಲ್ಲಿ ಸಂಗೀತ ಕಚೇರಿಗಳಲ್ಲಿ ತಬಲಾ ನುಡಿಸಲು ಪ್ರಾರಂಭಿಸಿದರು. ತಮ್ಮ ಕೌಶಲ್ಯ ಮತ್ತು ನಾವೀನ್ಯತೆಯಿಂದ ಅಭೂತಪೂರ್ವ ಜಾಗತಿಕ ಮನ್ನಣೆಗೆ ಪಾತ್ರರಾದರು.
ಇಬ್ಬರು ಸಹೋದರೊಂದಿಗೆ ತಂದೆಯಿಂದ ವಾದ್ಯ ಕಲೆಯುತ್ತಲೇ ಜಾಕೀರ್ ಹುಸೇನ್ ದೊಡ್ಡವರಾದರು, ಬಳಿಕ ಕಥಕ್ ಡ್ಯಾನ್ಸರ್ ಆಗಿದ್ದ ಅಂಟೋನಿಯಾ ಮಿನ್ನೆಕೋಲಾರನ್ನ ಮದುವೆಯಾದರು. ಹುಸೇನ್​ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಮುಂಬೈ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರ್ ಆಫ್ ಲಾ
ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಹ್ಯುಮಾನಿಟೀಸ್ ಕೌನ್ಸಿಲ್‌ನಿಂದ ಜಾಕೀರ್ ಹುಸೇನ್​ರನ್ನು ಓಲ್ಡ್ ಡೊಮಿನಿಯನ್ ಫೆಲೋ ಎಂದು ಗುರುತಿಸಲಾಯಿತು. ಸಂಗೀತ ವಿಭಾಗದಲ್ಲಿ ಪೂರ್ಣ ಪ್ರಾಧ್ಯಾಪಕರಾಗಿ 2005ರಲ್ಲಿ ಕೆಲಸ ಮಾಡಿದ್ದರು. ಇದಾದ ಮೇಲೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜಾಕೀರ್ ಹುಸೇನ್ ಅವರು ಸಂಗೀತಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ 2022ರ ಮೇನಲ್ಲಿ ಮುಂಬೈ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರ್ ಆಫ್ ಲಾ (LLD) ಪದವಿ ನೀಡಿ ಗೌರವಿಸಿತ್ತು.
ಜಾಕಿರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಝಾಕೀರ್ ಹುಸೇನ್ ಅಗಲಿಕೆ ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us