/newsfirstlive-kannada/media/post_attachments/wp-content/uploads/2025/06/ZAMBIA.jpg)
ಅಹ್ಮದಾಬಾದ್ ವಿಮಾನ ದುರಂತ ಪ್ರಕರಣಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ವಿಮಾನದಲ್ಲಿದ್ದ ಎಲ್ಲಾ 241 ಪ್ರಯಾಣಿಕರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇದರಿಂದ ಇಡೀ ಭಾರತ ಶೋಕದಲ್ಲಿದೆ.. ಕ್ರೀಡಾ ಜಗತ್ತು ಕೂಡ ಇಂತಹ ದುರಂತ ಘಟನೆಗಳಿಂದ ಹೊರತಾಗಿಲ್ಲ. 1993 ರಲ್ಲಿ ಅಂತಹ ಒಂದು ಘಟನೆ ಸಂಭವಿಸಿತ್ತು. ಆಗ ಒಂದು ದೇಶದ ರಾಷ್ಟ್ರೀಯ ತಂಡದ 18 ಆಟಗಾರರು ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡಿದ್ದರು. ಈ ನೋವಿನ ಘಟನೆ ಇಂದಿಗೂ ನಿಮ್ಮ ಕಣ್ಣಲ್ಲಿ ನೀರು ತರಿಸುತ್ತದೆ..
ಇದನ್ನೂ ಓದಿ: ವಿಮಾನ ದುರಂತಕ್ಕೆ 3 ದಿನ.. ಇನ್ನೂ ಸಿಕ್ಕಿಲ್ಲ 2ನೇ BLACK BOX
ಏಪ್ರಿಲ್ 27, 1993.. ಬೆಳಗ್ಗೆ ಸೂರ್ಯ ಉದಯಿಸ್ತಿದ್ದಂತೆಯೇ ಸಮುದ್ರತೀರದಲ್ಲಿ ಶವಗಳು ರಾಶಿ ಬಿದ್ದಿರುತ್ತವೆ ಅಂತಾ ಯಾರೂ ಊಹಿಸಿರಲಿಲ್ಲ. 1994ರ FIFA ವಿಶ್ವಕಪ್ ಅರ್ಹತಾ ಪಂದ್ಯಕ್ಕಾಗಿ ಜಾಂಬಿಯಾ ಫುಟ್ಬಾಲ್ (Zambia football team) ತಂಡವು ಸೆನೆಗಲ್ (Senegal) ವಿರುದ್ಧದ ಪಂದ್ಯಕ್ಕಾಗಿ ಡಾಕರ್​ಗೆ (Dakar ) ಹೋಗಬೇಕಾಗಿತ್ತು.. ಜಾಂಬಿಯಾ ವಾಯುಪಡೆಯು ತನ್ನ ತಂಡಕ್ಕಾಗಿ ವಿಶೇಷ ವಿಮಾನ ವ್ಯವಸ್ಥೆ ಮಾಡಿತ್ತು. ಜಾಂಬಿಯಾದಿಂದ ಸೆನೆಗಲ್‌ಗೆ ಸುಮಾರು 6,000 ಕಿಲೋಮೀಟರ್ ದೂರ. ಹೀಗಾಗಿ ಆ ಸ್ಥಳವನ್ನು ಕ್ರಮಿಸಲು ವಿಮಾನವು ಇಂಧನ ತುಂಬಿಸಲು 3 ಬಾರಿ ನಿಲ್ಲಬೇಕಾಗಿತ್ತು..
/newsfirstlive-kannada/media/post_attachments/wp-content/uploads/2025/06/ZAMBIA-1.jpg)
ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು..?
ಜಾಂಬಿಯಾ ಫುಟ್ಬಾಲ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿ ಒಟ್ಟು 25 ಪ್ರಯಾಣಿಕರಿದ್ದರು. ಅವರಲ್ಲಿ ವಿಮಾನ ಐದು ಸಿಬ್ಬಂದಿ ಆಗಿದ್ದರು. ವಿಮಾನವು ಇಂಧನ ತುಂಬಿಸಲು (ಮಧ್ಯ ಆಫ್ರಿಕಾ) ಬ್ರೆಜಾವಿಲ್ಲೆಯಲ್ಲಿ ಮೊದಲು ಲ್ಯಾಂಡ್ ಆಗಿತ್ತು. ಅಲ್ಲಿ ಎಂಜಿನ್ ಸಮಸ್ಯೆ ಪತ್ತೆಯಾಗಿದೆ. ಇದರ ಹೊರತಾಗಿಯೂ ವಿಮಾನವು ಮೊದಲ ನಿಲ್ದಾಣದಿಂದ ಹೊರಟು ಎರಡನೇ ಇಂಧನ ತುಂಬಿಸಲು ಲಿಬ್ರೆವಿಲ್ಲೆಯಲ್ಲಿ (ಆಫ್ರಿಕಾದ ಪಶ್ಚಿಮ ಕರಾವಳಿ)ಗೆ ಇಳಿಯಿತು. ಅಲ್ಲಿನ ವಿಮಾನ ನಿಲ್ದಾಣದಿಂದ ಹೊರಟ ಕೆಲವು ಕ್ಷಣಗಳಲ್ಲಿ ಎಂಜಿನ್ ಬೆಂಕಿಗೆ ಆಹುತಿಯಾಯಿತು.
ಮುಂದೆ ಏನಾಯ್ತು..?
ಇದರಿಂದ ಗಾಬರಿಯಾದ ಪೈಲಟ್, ಎಂಜಿನ್ ಮಿಸ್ಟೇಕ್ ಆಗಿ ಆಪ್ ಮಾಡಿದ್ದಾರೆ. ಇದರಿಂದ 500 ಮೀಟರ್ ದೂರ ಹೋಗಿ ವಿಮಾನ ಅಪ್ಪಳಿಸಿದೆ. ಈ ದುರಂತದಲ್ಲಿ ಜಾಂಬಿಯಾ ತಂಡದ ಎಲ್ಲಾ 18 ಆಟಗಾರರು, ಕೋಚ್ ದುರಂತ ಅಂತ್ಯಕಂಡರು ಎಂದು ತನಿಖಾ ವರದಿ ಹೇಳಿದೆ.
ಇದನ್ನೂ ಓದಿ: ಪ್ರೀತಿಗೂ ಕೊಳ್ಳಿ ಇಟ್ಟ ವಿಮಾನ ದುರಂತ.. ಗೆಳತಿಯ ಕಳ್ಕೊಂಡು ಆಸ್ಪತ್ರೆ ಎದುರು ಪ್ರೇಮಿಯ ಆಕ್ರಂದನ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us