Advertisment

Watch: ಸಚಿವ ಜಮೀರ್ ಅಹ್ಮದ್​​ ಭರ್ಜರಿ ರೀಲ್ಸ್.. ಬಿಜೆಪಿ ಆಕ್ರೋಶ..!

author-image
Ganesh
Updated On
Watch: ಸಚಿವ ಜಮೀರ್ ಅಹ್ಮದ್​​ ಭರ್ಜರಿ ರೀಲ್ಸ್.. ಬಿಜೆಪಿ ಆಕ್ರೋಶ..!
Advertisment
  • ‘ಜಮೀರ್ ಅಣ್ಣ ಅಂದ್ರೆ ಸುಮ್ನೆನಾ ಮತ್ತೆ’ ಎಂದ ಬೆಂಬಲಿಗರು
  • ರೀಲ್ಸ್ ವಿಡಿಯೋ ಟ್ವೀಟ್ ಮಾಡಿ ಟೀಕಿಸಿದ ಕರ್ನಾಟಕ ಬಿಜೆಪಿ
  • ಭಾರೀ ಟೀಕೆಗೆ ಗುರಿಯಾಯ್ತು ಸಚಿವರ ಈ ರೀಲ್ಸ್​

ಸಚಿವ ಜಮೀರ್​​ ಅಹಮ್ಮದ್ ಅವರ ಹೊಸ ರೀಲ್ಸ್​​​ವೊಂದು ಸಖತ್ ಸದ್ದು ಮಾಡ್ತಿದೆ. ಜಮೀರ್​ ಅಹಮ್ಮದ್ ​ ಅವರು ತಮ್ಮ ಆಪ್ತರೊಂದಿಗೆ ಹಿಂದಿ ಹಾಡಿಗೆ ರೀಲ್ಸ್​​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Advertisment

ಆದರೆ ಇದನ್ನು ಖಂಡಿಸಿರುವ ರಾಜ್ಯ ಬಿಜೆಪಿ.. ಜಮೀರ್​​ ಅಹಮ್ಮದ್ ವಿರುದ್ಧ ಕಿಡಿಕಾರಿದೆ. ರಾಜ್ಯದಲ್ಲಿ ಡೆಂಘೀ ಮತ್ತು ಝೀಕಾ ವೈರಸ್​​​​ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಸಚಿವರೊಬ್ಬರು ರೀಲ್ಸ್​​ ಮಾಡುತ್ತಾ ಮಜಾ ಮಾಡುತ್ತಿದ್ದಾರೆ. ಆರೋಗ್ಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವ ಕರ್ನಾಟಕ ಇಂತಹ ಕಠಿಣ ಹಂತವನ್ನು ಎದುರಿಸುತ್ತಿದೆ. ಡೆಂಘೀ, ಝೀಕಾಗೆ ಸುಮಾರು 7 ರಿಂದ 8 ಮಕ್ಕಳು ಸಾವನ್ನಪ್ಪಿರುವ ವರದಿ ಇದೆ. ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ತರಕಾರಿ ಇಲ್ಲದೇ ಊಟ ನೀಡಲಾಗುತ್ತಿದೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಬರ್ಬರ ಕೊಲೆ.. ಮಾರಕಾಸ್ತ್ರಗಳಿಂದ ಕೊಚ್ಚಿ 24 ವರ್ಷದ ವ್ಯಕ್ತಿಯ ಹತ್ಯೆ

ರೈತರು ಪೂರೈಸಿದ ಡೈರಿ ಹಾಲಿನ ಹಣವನ್ನು ಇನ್ನೂ ಪಾವತಿಸಿಲ್ಲ. ಇತರೆ ಪ್ರಮುಖ ನಾಯಕರು ವಾಲ್ಮಿಕಿ ಮತ್ತು ದಲಿತರ ಮೀಸಲು ಹಣವನ್ನು ಲೂಟಿ ಮಾಡುತ್ತಿದ್ದರೆ, ಇತರರು ಈಜುಕೊಳದಲ್ಲಿ ಆನಂದಿಸುತ್ತಿದ್ದಾರೆ. ಇಂದು ಮತ್ತೊಬ್ಬ ಸಚಿವರು ಇನ್​ಸ್ಟಾಗ್ರಾಮ್​​ ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment