/newsfirstlive-kannada/media/post_attachments/wp-content/uploads/2025/05/karna6.jpg)
ಡಾಕ್ಟರ್ ಕರ್ಣ. ಮನೆ, ಮನೆಗೆ ಬರ್ತಾ ಇದ್ದಾನೆ ಕರ್ಣ. ಕನ್ನಡ ಕಿರುತೆರೆಯ ವೀಕ್ಷಕರು ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಬೇಕಿದ್ದ ಕರ್ಣ ಸೀರಿಯಲ್‌ಗೋಸ್ಕರ ಕಾಯ್ತಾ ಇದ್ದರು. ಕೊಟ್ಟ ಮಾತಿನಂತೆ 'ಕರ್ಣ' ಬಂದೇ ಬರ್ತಾನೆ ಅನ್ನೋದು ಮುಂದೂಡಿಕೆಯಾಗಿದೆ. ಜೀ ಕನ್ನಡ ವಾಹಿನಿ ಕರ್ಣ ಸೀರಿಯಲ್‌ಗಾಗಿ ಕಾಯ್ತಿದ್ದಂತೆ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದೆ.
ಶ್ರುತಿ ನಾಯ್ಡು ಸಂಸ್ಥೆಯಿಂದ ಮೂಡಿ ಬರ್ತಿರೋ ಬಹು ನಿರೀಕ್ಷಿತ ಧಾರಾವಾಹಿ ಕರ್ಣ. ಕಿರಣ್​ ರಾಜ್​ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/05/karna9.jpg)
ಭವ್ಯಾ ಹಾಗೂ ಕಿರಣ್​ ರಾಜ್​ ಜೋಡಿ ಆಗಿರೋ ಕ್ಯೂಟ್​ ಪ್ರೋಮೋ ಈಗಾಗಲೇ ಸಖತ್ ಹಿಟ್ ಆಗಿದೆ. ರಿಲೀಸ್​ ಆದ ಪ್ರೋಮೋಗೆ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕರ್ಣ ಧಾರಾವಾಹಿ ಕನ್ನಡ ಕಿರುತೆರೆಯಲ್ಲೇ ಹೈ ಬಜೆಟ್​ ಧಾರಾವಾಹಿ ಎಂದೇ ಹೇಳಲಾಗಿತ್ತು.
ಕರ್ಣ ಸೀರಿಯಲ್‌ನಲ್ಲಿ ಕಿರಣ್​ ರಾಜ್​ ಪಾತ್ರ ಗೈನಾಕಾಲಜಿಸ್ಟ್​. ಹೆರಿಗೆ ತಜ್ಞನ ಪಾತ್ರ ಮಾಡ್ತಿರೋ ಡಾಕ್ಟರ್ ಕರ್ಣನಿಗೆ ನಾಯಕಿಯರಾಗಿ ಭವ್ಯಾ, ನಮ್ರತಾ ಗೌಡ ಕಾಣಿಸಿಕೊಳ್ತಿದ್ದಾರೆ. ನಿತ್ಯಾ ಹಾಗೂ ನಿಧಿ ಎಂಬುದು ಪಾತ್ರದ ಹೆಸರು. ಭವ್ಯಾ ಸಾಫ್ಟ್​ ಆದ್ರೆ ನಮ್ರತಾ ಪ್ರ್ಯಾಕ್ಟಿಕಲ್​ ಆಗಿರೋ ಹುಡುಗಿ.
/newsfirstlive-kannada/media/post_attachments/wp-content/uploads/2025/04/karna-serial2.jpg)
ಕರ್ಣ ಸೀರಿಯಲ್ ಇಂದು ಅಂದ್ರೆ ಜೂನ್ 16ಕ್ಕೆ ರಾತ್ರಿ 8 ಗಂಟೆಗೆ ಪ್ರಸಾರವಾಗಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಜೀ ಕನ್ನಡ ವಾಹಿನಿಯಿಂದ ಶಾಕಿಂಗ್ ಸ್ಟೇಟ್‌ಮೆಂಟ್ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರೋ ವಾಹಿನಿ, ಕೊಟ್ಟ ಮಾತಿಗೆ ತಪ್ಪದ ಜೀವ ಅಂದ್ರೆ ಅದು ಕರ್ಣ. ನೀವೆಲ್ಲ ಕಾಯ್ತಾ ಇರ್ತೀರ ಅಂತ ಅವನಿಗೆ ಗೊತ್ತು. ಅದೇ ಪ್ರೀತಿ - ವಿಶ್ವಾಸದಿಂದ ‘ಕರ್ಣ’ನನ್ನ ಬರಮಾಡಿಕೊಳ್ತೀರಿ ಅಲ್ವಾ? ‘ಕರ್ಣ’ ಬಂದೇ ಬರ್ತಾನೆ! ಶೀಘ್ರದಲ್ಲಿ ಎಂದಿದೆ.
/newsfirstlive-kannada/media/post_attachments/wp-content/uploads/2025/06/karna-kannada-serial-1.jpg)
ಇನ್ನು, ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಅಸೂಯೆ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ ಎಲ್ಲಾ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು.
ನಿಷ್ಠೆ, ನಿಯತ್ತು, ತ್ಯಾಗ, ಧೈರ್ಯಕ್ಕೆ ಇನ್ನೊಂದು ಹೆಸರು ಅವನು. ಯುಗ ಯುಗಗಳೇ ಕಳೆದರೂ ದಾನಶೂರನಾಗಿ ಎಲ್ಲರ ಮನದಲ್ಲಿ ನೆಲೆಯಾದವನು. ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು, ಆದ್ರೆ ಬರೋದನ್ನ ತಡೆಯೋದಕ್ಕೆ ಸಾಧ್ಯವೇ ಇಲ್ಲ. ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ ಎಂದು ಜೀ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us