‘ಸರಿಗಮಪ’ ಗ್ರ್ಯಾಂಡ್ ಫಿನಾಲೆಯಲ್ಲಿ 6 ಸ್ಪರ್ಧಿಗಳು.. ಯಾರಿಗೆ ಸಿಗಲಿದೆ ವಿನ್ನರ್ ಪಟ್ಟ..?

author-image
Ganesh
Updated On
ಸಿನಿಮಾಗೆ ಹಾಡಲು ಆಫರ್ ಕೊಟ್ಟವರು ಲಹರಿನಾ ಫಿನಾಲೆಗೆ ಸೆಲೆಕ್ಟ್ ಮಾಡಿಲ್ಲ ಏಕೆ? ವೀಕ್ಷಕರು ಬೇಸರ!
Advertisment
  • ಜೀ ಕನ್ನಡ ವಾಹಿನಿ ವೀಕ್ಷಕರ ನೆಚ್ಚಿನ ಶೋ ಸರಿಗಮಪ
  • ಜೂನ್ 7 ರಂದು ಸಂಜೆ 6 ಗಂಟೆಯಿಂದ ಪ್ರಸಾರ
  • ಅಂತಿಮ ಘಟ್ಟ ತಲುಪಿದ ‘ಸರಿಗಮಪ’ ಶೋ

ಜೀ ಕನ್ನಡ ವಾಹಿನಿ ವೀಕ್ಷಕರ ನೆಚ್ಚಿನ ಸರಿಗಮಪ (Sa Re Ga Ma Pa) ಫಿನಾಲೆಗೆ ಕೌಂಟ್​ಡೌನ್​ ಶುರುವಾಗಿದೆ. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಫಿನಾಲೆಗೆ ಎಂಟ್ರಿ ನೀಡಿದ್ದು, ಯಾರು ವಿನ್ನರ್ ಆಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

publive-image

ಈ ಬಾರಿಯ ‘ಸರಿಗಮಪ’ ಆವೃತ್ತಿಯಲ್ಲಿ 6 ಸ್ಪರ್ಧಿಗಳು ಫಿನಾಲೆಯಲ್ಲಿದ್ದಾರೆ. ಅಂತೆಯೇ ಗ್ರ್ಯಾಂಡ್ ಫಿನಾಲೆ ಇಂದು ಸಂಜೆ ನಡೆಯಲಿದೆ. ನಿರೂಪಣಾ ಜವಾಬ್ದಾರಿಯನ್ನು ನಿರೂಪಕಿ ಅನುಶ್ರೀ ಹೊತ್ತಿದ್ದಾರೆ. ತೀರ್ಪುಗಾರರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಗೈಡೆನ್ಸ್​ನ ಸ್ಪರ್ಧಿಗಳಿಗೆ ಕೊಡಲಿದ್ದಾರೆ. ಅಲ್ಲದೇ ವೀಕ್ಷಕರು ಫಿನಾಲೆಯನ್ನು ಲೈವ್ ಆಗಿ Zee5 OTT ಪ್ಲಾಟ್​ಫಾರ್ಮ್​​ ಮೂಲಕ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ‘ಕಣ್ಣೇದುರೆ ಪ್ರಾಣ ಹೋಗ್ತಿದ್ರು ಜೈ RCB ಅಂತಿದ್ರು’.. ಹೃದಯ ವಿದ್ರಾವಕ ಕ್ಷಣದ ಬಗ್ಗೆ ಬಿಚ್ಚಿಟ್ಟ ಚಂದನ್ ಶೆಟ್ಟಿ

publive-image

Zee5ನಲ್ಲಿ ಲೈವ್ ನೋಡಲು ಮಿಸ್ ಮಾಡಿದವರು ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ. ತಮ್ಮ ನೆಚ್ಚಿನ ಶೋ ‘ಸರಿಗಮಪ’ ಫಿನಾಲೆಯ ಸಂಭ್ರಮದ ಕ್ಷಣಗಳನ್ನು 7 ರಂದು ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ನೋಡಬಹುದು. ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸರಿಗಮಪ.

publive-image

6 ವರ್ಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸಿದ ಈ ಆವೃತ್ತಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಈ ಬಾರಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಲ್ಲದೇ ಅವರ ಸ್ಫೂರ್ತಿದಾಯಕ ಕಥೆಗಳು ಕೂಡ ಜನರನ್ನು ಮತ್ತಷ್ಟು ಪ್ರೇರೇಪಿಸಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಆರ್​ಸಿಬಿಗೆ ಸಂಕಷ್ಟಗಳು ಹೆಚ್ಚಾಗಲಿವೆ.. ಹೈಕೋರ್ಟ್ ಕಟಕಟೆಯಲ್ಲಿ ಇಂದು ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment