ZEPTO ಗ್ರಾಹಕರೇ ಎಚ್ಚರ.. ಬೆಂಗಳೂರಲ್ಲಿ ಅಡ್ರೆಸ್​ ಸರಿಯಾಗಿ ಹಾಕಿಲ್ಲ ಅಂತ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ; VIDEO

author-image
Veena Gangani
Updated On
ZEPTO ಗ್ರಾಹಕರೇ ಎಚ್ಚರ.. ಬೆಂಗಳೂರಲ್ಲಿ ಅಡ್ರೆಸ್​ ಸರಿಯಾಗಿ ಹಾಕಿಲ್ಲ ಅಂತ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ; VIDEO
Advertisment
  • ಅಡ್ರೆಸ್ ವಿಚಾರಕ್ಕೆ ಕಿರಿಕ್ ಗ್ರಾಹಕನಿಗೆ ಪಂಚ್ ಕೊಟ್ಟ ಬಾಯ್
  • ಕಣ್ಣಿಗೆ ಗುದ್ದಿದ ಪರಿಣಾಮ ಕಣ್ಣು‌ ಕೆಳಗಿನ ಮೂಳೆ ಕಟ್
  • ಬಸವೇಶ್ವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಜೆಪ್ಟೋಗೆ ಸರಿಯಾಗಿ ಅಡ್ರೆಸ್​ ಹಾಕಿಲ್ಲ ಡೆಲಿವರಿ ಬಾಯ್ ಅಂತ ಗ್ರಾಹಕನ ಕಣ್ಣಿಗೆ ಪಂಚ್ ಕೊಟ್ಟಿರೋ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಇದನ್ನೂ ಓದಿ:ಎಂಟು ದಿನ ಮುಂಚೆಯೇ ಮುಂಗಾರು ಎಂಟ್ರಿ.. ಕರ್ನಾಟಕಕ್ಕೆ ಮುಂಗಾರಿನ ಅಭಿಷೇಕ ಯಾವಾಗ..?

publive-image


">May 25, 2025

ಮೇ 21ರಂದು ಬಸವೇಶ್ವರನಗರದಲ್ಲಿರುವ 30 ವರ್ಷದ ಉದ್ಯಮಿ ಶಶಾಂಕ್ ಎಸ್ ದಿನಸಿ ಸಾಮಗ್ರಿಗಳನ್ನು ಆರ್ಡರ್​ ಮಾಡಿದ್ದಾರೆ. ಹೀಗೆ ಶಶಾಂಕ್ ಅವರು ಅಡ್ರೆಸ್ ತಪ್ಪಾಗಿ ಕೊಟ್ಟಿದ್ದಾರಂತೆ. ಇದೇ ವಿಚಾರಕ್ಕೆ ಡೆಲಿವರಿ ಬಾಯ್ ಹಾಗೂ ಶಶಾಂಕ್​ ನಡುವೆ ಗಲಾಟೆ ಶುರುವಾಗಿದೆ.

publive-image

ಇದೇ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದು ಗ್ರಾಹಕರ ಮೇಲೆ ಡೆಲಿವರಿ ಬಾಯ್ ವಿಷ್ಣುವರ್ಧನ ಹಲ್ಲೆ ಮಾಡಿದ್ದಾನೆ. ವಿಷ್ಣುವರ್ಧನ ಜೋರಾಗಿ ಕೈಯಿಂದ ಕಣ್ಣಿಗೆ ಗುದ್ದಿದ ಪರಿಣಾಮ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಸದ್ಯ ಈ ಘಟನೆ ಸಂಬಂಧ ಬಸವೇಶ್ವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment