newsfirstkannada.com

ಅಬ್ಬಬ್ಬಾ! ಕೊರೆಯೋ ಚಳಿಗೆ ತತ್ತರಿಸಿದ ಜನ.. ಈ ಸ್ಥಳಗಳಲ್ಲಿ ವಾಸಿಸೋರು ಓದಲೇಬೇಕಾದ ಸ್ಟೋರಿ!

Share :

Published January 19, 2024 at 10:09pm

    ಕೊರೆಯುವ ಚಳಿಗೆ ಪ್ರವಾಸಿತಾಣ ಊಟಿ ತತ್ತರ!

    ಊಟಿಯಲ್ಲಿ ಕನಿಷ್ಠ 0 ಡಿಗ್ರಿ ತಾಪಮಾನ ದಾಖಲು

    ಮನೆಯಿಂದ ಹೊರ ಬರಲಾಗದೇ ಜನ ಕಂಗಾಲು

ಈ ವರ್ಷದ ಚಳಿಗಾಲ ಅದ್ಯಾಕೋ ಜನರ ಜೀವದ ಜೊತೆ ಚೆಲ್ಲಾಟ ಆಡ್ತಿದೆ. ಪ್ರವಾಸಿಗರ ಹಾಟ್‌ ಫೇವರೆಟ್‌ ಊಟಿಯಲ್ಲಿ ತಾಪಮಾನ ದಿಢೀರನೇ ಇಳಿಕೆಯಾಗಿದ್ರೆ, ಕಾಶ್ಮೀರದಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣ ಕಂಡು ಬಂದಿದೆ. ಪ್ರತಿ ವರ್ಷದ ಜನವರಿಯಲ್ಲಿ ಕಾಣುತ್ತಿದ್ದ ಹವಾಮಾನದಲ್ಲಿ ಭಾರೀ ಏರುಪೇರಾಗಿರೋದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.

ಅಬ್ಬಾ.. ಎಂಥಾ ಚಳಿ ಇದೆಯಪ್ಪಾ.. ಬೆಳಗೆದ್ದು ಮಂಜು ಮುಸುಕಿದ ವಾತಾವರಣ ನೋಡಿ, ನೋಡಿ ಸುಸ್ತಾಗಿರೋ ನಿಮಗೆಲ್ಲಾ ಶಾಕಿಂಗ್ ನ್ಯೂಸ್ ಇದು. ಈ ವರ್ಷ ಎದುರಾಗಿರೋ ಭಯಾನಕ ಚಳಿಗಾಲ ಪ್ರತಿವರ್ಷದಂತೆ ಇಲ್ಲವೇ ಇಲ್ಲ. ವಿಪರೀತ ಚಳಿ, ಮಂಜು ಮುಸುಕಿದ ವಾತಾವರಣ ದೇಶಾದ್ಯಂತ ಸೃಷ್ಟಿಸಿರೋ ಭಯ ಅಷ್ಟಿಷ್ಟಲ್ಲ. ಕೊರೆಯೋ ಚಳಿಗೆ ಉತ್ತರ ಭಾರತದ ಜನ ನಡುಗುತ್ತಾ ದಿನ ದೂಡುತ್ತಾ ಇದ್ರೆ, ಹವಮಾನ ವೈಪರೀತ್ಯ ದಕ್ಷಿಣ ಭಾರತವನ್ನು ಬಿಗಿದಪ್ಪಿಕೊಳ್ಳುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೇ ಊಟಿಯ ತಾಪಮಾನ.

ಊಟಿಯಲ್ಲಿ ಕನಿಷ್ಠ 0 ಡಿಗ್ರಿ ತಾಪಮಾನ ದಾಖಲು
ಮನೆಯಿಂದ ಹೊರ ಬರಲಾಗದೇ ಜನ ಕಂಗಾಲು

ವಿಪರೀತ ಕೊರೆಯುವ ಚಳಿ ಬರೀ ಉತ್ತರ ಭಾರತದಲ್ಲಿ ಅಷ್ಟೇ ಅಲ್ಲ ದಕ್ಷಿಣ ಭಾರತದಲ್ಲೂ ಆವರಿಸಿದೆ. ತಮಿಳುನಾಡಿನ ಕೆಲವು ಜಿಲ್ಲೆಯಲ್ಲಂತೂ ದಾಖಲೆಯ ಕನಿಷ್ಠ ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ ತಮಿಳುನಾಡಿನ ಕಾಂತಲ್, ತಲೈಕುಂಠ, ಉದಗಮಂಡಲಂನಲ್ಲಿ ಕೇವಲ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾದ ಬೊಟಾನಿಕಲ್ ಗಾರ್ಡನ್‌ನಲ್ಲಿ 2 ಡಿಗ್ರಿ ಉಷ್ಣಾಂಶ, ಊಟಿಯಲ್ಲಿ 1 ಡಿಗ್ರಿಯಿಂದ ಝೀರೋ ಡಿಗ್ರಿಗೆ ತಾಪಮಾನ ಕುಸಿದಿದೆ. ಊಟಿಯಲ್ಲಿ ಮನೆಯಿಂದ ಹೊರ ಬರಲು ಜನ ಭಯಪಡುತ್ತಿದ್ದು, ಹೆಪ್ಪುಗಟ್ಟಿದ ಮಂಜಿಗೆ ನಡುಗುತ್ತಿದ್ದಾರೆ.

ದಟ್ಟ ಮಂಜಿನ ಜೊತೆಗೆ ಹೆಪ್ಪುಗಟ್ಟಿದ ವಾತಾವರಣ
ನೀಲಗಿರಿಯ ಗಿರಿಧಾಮಗಳಲ್ಲಿ ಪ್ರವಾಸಿಗರು ಹೈರಾಣ

ಊಟಿ ಸೇರಿದಂತೆ ನೀಲಗಿರಿಯ ಹಲವು ಗಿರಿಧಾಮಗಳು ಪ್ರವಾಸಿಗರಿಗೆ ನೆಚ್ಚಿನ ತಾಣಗಳಾಗಿವೆ. ಆದರೆ ಜನವರಿಯಲ್ಲಿ ಮಂಜಿನ ಜೊತೆಗೆ ಹೆಪ್ಪುಗಟ್ಟಿದ ವಾತಾವರಣ ಕಂಡು ಬಂದಿರೋದಕ್ಕೆ ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಜಾಗತಿಕ ತಾಪಮಾನ ವೈಪರೀತ್ಯದಿಂದ ಈ ರೀತಿಯ ವಾತಾವರಣ ಎದುರಾಗುತ್ತಿದೆ ಎನ್ನಲಾಗಿದೆ. ಊಟಿಯ ಗಿರಿಧಾಮದಲ್ಲಿ ಮುಂಜಾನೆಯಂತೂ ಹೆಪ್ಪುಗಟ್ಟಿದ ವಾತಾವರಣ ಕಂಡು ಬಂದಿದೆ. ಮನೆಯಿಂದ ಹೊರ ಬಂದ ಜನರು ಕೊರೆಯೋ ಚಳಿಯಲ್ಲಿ ನಡುಗುತ್ತಿದ್ದು ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀಲಗಿರಿಯ ಹಲವು ಅರಣ್ಯ ಪ್ರದೇಶದಲ್ಲಿ ಕನಿಷ್ಠ 0 ಡಿಗ್ರಿ ತಾಪಮಾನ ಕಂಡು ಬಂದಿದೆ.

ಉತ್ತರ ಭಾರತದ ಹಲವೆಡೆ ವಿಪರೀತ ಚಳಿಯ ಕಾಟ

ದೆಹಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶದಲ್ಲಿ ಇನ್ನೂ ಕೊರೆಯೋ ಚಳಿಯ ಕಾಟ ಮುಂದುವರಿದಿದೆ. ದೆಹಲಿಯಲ್ಲಿ 6-10 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ರೆ, ಪಂಜಾಬ್‌ನಲ್ಲಿ 2-5 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಕುಸಿಯುತ್ತಿದೆ. ಇನ್ನು ನಾಲ್ಕೈದು ದಿನ ಇದೇ ರೀತಿಯ ಚಳಿಯೇ ಮುಂದುವರೆಯಲಿದೆ ಅನ್ನೋ ಮಾಹಿತಿ ಸಿಕ್ಕಿದೆ. ಚಳಿಗೆ ಉತ್ತರ ಭಾರತದ ಸ್ಥಿತಿ ಹೀಗಿದ್ರೆ ಕಣಿವೆ ರಾಜ್ಯದ ಪರಿಸ್ಥಿತಿ ಮಾತ್ರ ಬದಲಾಗಿದೆ.

ಈ ವರ್ಷ ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಪರದಾಟ
ಕಣಿವೆ ರಾಜ್ಯದ ಪ್ರವಾಸೋದ್ಯಮಕ್ಕೆ ಅತಿದೊಡ್ಡ ಪೆಟ್ಟು

ಜಮ್ಮು, ಕಾಶ್ಮೀರದಲ್ಲಿ ಪ್ರತಿವರ್ಷ ಜನವರಿ ಬಂತು ಅಂದ್ರೆ ಪ್ರವಾಸಿಗರು ತುಂಬಿ ತುಳುಕುತ್ತಾರೆ. ಹಿಮಪಾತ ಮಂಜಿನ ಮಳೆಯಲ್ಲಿ ಮಸ್ತ್ ಮಾಡಲು ಹಾತೊರೆಯುತ್ತಾರೆ. ಆದರೆ ಈ ವರ್ಷ ಕಾಶ್ಮೀರದ ತಾಪಮಾನದಲ್ಲಿ ಭಾರೀ ಇಳಿಮುಖ ಕಂಡು ಬಂದಿದೆ. ಶ್ರೀನಗರದ ವಾತಾವರಣ ಮೈನಸ್ 4.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಹಿಮಪಾತದ ನಿರೀಕ್ಷೆಯಲ್ಲಿ ಕಾಶ್ಮೀರಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ.

ಜನವರಿ 25ರಿಂದ ಶ್ರೀನಗರದಲ್ಲಿ ಹಿಮ ಬೀಳುವ ಭರವಸೆ
ಸದ್ಯಕ್ಕಂತೂ ಕಾಶ್ಮೀರಕ್ಕೆ ತೆರಳುವ ಪ್ರವಾಸಿಗರಿಗೆ ನಿರಾಸೆ

ಕಣಿವೆ ರಾಜ್ಯದಲ್ಲಿ ಬದಲಾಗಿರುವ ವಾತಾವರಣದಿಂದಾಗಿ ಜಮ್ಮು, ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಸದ್ಯಕ್ಕಂತೂ ಖಾಲಿ, ಖಾಲಿ ಕಾಶ್ಮೀರವನ್ನು ನೋಡಿ ಪ್ರವಾಸಿಗರು ನಿರಾಸೆಯಿಂದ ವಾಪಸ್ ಆಗುತ್ತಿದ್ದಾರೆ. ಜನವರಿ 25 ರಿಂದ ಜಮ್ಮು ಮತ್ತು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಲಘು ಮಳೆ ಮತ್ತು ಹಿಮ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 28 ಮತ್ತು 30 ರ ನಡುವೆ ಅಲ್ಲಲ್ಲಿ ಲಘು ಮಳೆ ಮತ್ತು ಹಿಮದ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ! ಕೊರೆಯೋ ಚಳಿಗೆ ತತ್ತರಿಸಿದ ಜನ.. ಈ ಸ್ಥಳಗಳಲ್ಲಿ ವಾಸಿಸೋರು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/01/Ooty.jpg

Load More