/newsfirstlive-kannada/media/post_attachments/wp-content/uploads/2025/07/Nikhil_Kamath-1.jpg)
ಝರೋದಾ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕಾಮತ್. ಇವರು ಭಾರತದ ಪ್ರಮುಖ ಉದ್ಯಮಿ. ಈಗ ಉದ್ಯಮಿ ನಿಖಿಲ್ ಕಾಮತ್ ಅವ್ರು ತಮ್ಮ ಕೋರ್ ಟೀಮ್ ಜೊತೆಗೆ ಕೆಲಸ ಮಾಡಲು ಬಂಫರ್ ಆಫರ್ ನೀಡಿದ್ದಾರೆ. ನಿಖಿಲ್ ಕಾಮತ್ ಕೋರ್ ತಂಡದ ಜೊತೆ ಕೆಲಸ ಮಾಡಲು ಬಯಸೋರಿಗೆ ಇದು ಅದ್ಭುತ ಅವಕಾಶ ಆಗಿದೆ.
ಸಕ್ಸಸ್ಫುಲ್ ಉದ್ಯಮಿ ಜೊತೆ ಕೆಲಸ ಮಾಡಬೇಕು ಅನ್ನೋದು ಕನಸು ಎಷ್ಟೋ ಜನರಿಗೆ ಇದ್ದೇ ಇರುತ್ತೆ. ಅಂಥವರಿಗೆ ನಿಖಿಲ್ ಕಾಮತ್ ಇದೀಗ ಭರ್ಜರಿ ಉದ್ಯೋಗ ಆಫರ್ ನೀಡಿದ್ದಾರೆ. ವಿಶೇಷ ಅಂದರೆ ತಮ್ಮ ಕೋರ್ ಟೀಮ್ ಜೊತೆಯಲ್ಲೇ ಕೆಲಸ ಮಾಡಲು ಅವಕಾಶ ಇರೋದು. ಹೂಡಿಕೆ, ಸ್ಟಾಕ್ಸ್ ಸೇರಿದಂತೆ ಕೆಲ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವರು ಬೇಕಾಗಿದ್ದಾರೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಈ ಪ್ರಮುಖ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತರು ಅಪ್ಲೈ ಮಾಡಬಹುದು. ಸೆಲೆಕ್ಟ್ ಆದವರಿಗೆ ಕೈತುಂಬ ಸಂಬಳ ನೀಡಲಾಗುವುದು ಎಂದಿದ್ದಾರೆ.
ಹುದ್ದೆಗಳು ಯಾವುವು? ಸಂಬಳ ಎಷ್ಟು?
ನಿಖಿಲ್ ಕಾಮತ್ ಜೊತೆ ಕೆಲಸ ಮಾಡಬೇಕು ಅನ್ನೋರು ಕೂಡಲೇ ಅರ್ಜಿ ಹಾಕಬಹುದು. ಸೀನಿಯರ್ ಡೇಟಾ ಸೈಂಟಿಸ್ಟ್ ಹಾಗೂ ಸೀನಿಯರ್ ರಿಸರ್ಚರ್ (Senior Data Scientist, Senior Researcher,) ಎಂಬ 2 ಪ್ರಮುಖ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಯಲ್ಲಿ ಕೆಲಸ ಮಾಡಲು ಬಯಸುವವರು ಪ್ರತಿಭಾನ್ವಿತರಾಗಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಆಳವಾದ ಅಧ್ಯಯನ, ಅನುಭವ, ಪರಿಣತಿ ಇರಬೇಕು. ಜತೆಗೆ ಅನಾಲಿಟಿಕ್ಸ್ ಕುರಿತು ಡೆಪ್ತ್ ಇರಬೇಕು ಎಂದಿದ್ದಾರೆ ನಿಖಿಲ್ ಕಾಮತ್.
ವೇತನ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲವಾದ್ರೂ ಪ್ರಮುಖ ಹುದ್ದೆಯಾಗಿರುವ ಕಾರಣ ಕೈತುಂಬ ಸಂಬಳ ಖಚಿತ ಅನ್ನೋದರಲ್ಲಿ ಎರಡು ಮಾತಿಲ್ಲ.
ಅರ್ಜಿ ಸಲ್ಲಿಸೋದು ಹೇಗೆ..?
ನಿಖಿಲ್ ಕಾಮತ್ ಅವ್ರು ಈ ಬಗ್ಗೆ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಹಾಕಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸೋ ಮೊದಲು ಅರ್ಹತೆ ಮತ್ತು ಜವಾಬ್ದಾರಿಗಳ ಕುರಿತು ಡೀಟೈಲ್ ಆಗಿ ಓದಿಕೊಳ್ಳಬೇಕು. ಈ ಕುರಿತಾದ ಸಂಪೂರ್ಣ ವಿವರಣೆ ಪೋಸ್ಟ್ನಲ್ಲೇ ಉಲ್ಲೇಖ ಮಾಡಲಾಗಿದೆ.
ಸೆಲೆಕ್ಟ್ ಆದ ಅಭ್ಯರ್ಥಿಗಳ ಪೋಸ್ಟಿಂಗ್ ಎಲ್ಲಿ?
ಅರ್ಹ ಅಭ್ಯರ್ಥಿಗಳ ಅರ್ಜಿಯನ್ನು ಅಂತಿಮಗೊಳಿಸಿ ಸಂದರ್ಶನ ನಡೆಸಲಾಗುತ್ತದೆ. ಈ ಸಂದರ್ಶನದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ಮುಂಬೈನಲ್ಲಿ ನಿಖಿಲ್ ಕಾಮತ್ ತಂಡದ ಜೊತೆ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕುಸುಮ್ ಬಿ ಯೋಜನೆಯಡಿ ನೀರಾವರಿ ಪಂಪ್ ಸೆಟ್.. ಕೇಂದ್ರ, ರಾಜ್ಯ ಸರ್ಕಾರ ಎಷ್ಟು ಸಬ್ಸಿಡಿ ನೀಡುತ್ತವೆ?
2030ರ ವೇಳೆಗೆ ರೆಗ್ಯೂಲರ್ ಡಿಗ್ರಿ ಕೋರ್ಸ್‌ಗಳು ಅರ್ಥ ಕಳೆದುಕೊಳ್ಳಲಿದೆ. ಕಾರಣ ಈ ಡಿಗ್ರಿ ಸರ್ಟಿಫಿಕೇಟ್ ಔಟ್‌ಡೇಟೆಡ್ ಆಗಲಿದೆ. ಡಿಗ್ರಿ ಪಡೆದು ಕೆಲಸಕ್ಕಾಗಿ ಅಲೆದರೆ ಒಂದು ಕೆಲಸ ಸಿಗಲ್ಲ. ಕಾರಣ 2030ರ ವೇಳೆಗೆ ಉದ್ಯೋಗ ಪಡೆಯುವ ಸ್ವರೂಪವೇ ಬದಲಾಗಲಿದೆ ಎಂದು ಈ ಹಿಂದೆ ಹೇಳುವ ಮೂಲಕ ನಿಖಿಲ್ ಕಾಮತ್ ಸುದ್ದಿಯಾಗಿದ್ರು.
ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಕಾರ್ಮಿಕರು, ಡ್ರೈವರ್, ಪ್ಲಂಬರ್ ಸೇರಿದಂತೆ ಹಲವು ಫಿಸಿಕಲ್ ಉದ್ಯೋಗಗಳಿಗೆ ಭಾರಿ ಬೇಡಿಕೆ ಬರಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ನನ್ನ ಪ್ರಕಾರ ಎಐ, ಬಿಗ್ ಡೇಟಾ, ಸೈಬರ್ ಸೆಕ್ಯೂರಿಟಿ, ಕ್ರಿಯೇಟಿವ್ ಥಿಂಕಿಂಗ್, ಪರಿಸರ ಸರಂಕ್ಷಣೆ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಉದ್ಯೋಗ ಬೇಡಿಕೆ ಭಾರಿ ಹೆಚ್ಚಾಗಲಿದೆ ಎಂದಿದ್ದರು ನಿಖಿಲ್ ಕಾಮತ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ