newsfirstkannada.com

ಸಿಕಂದರ್​ ರಾಜಾಗೆ ನಿರಾಸೆ! ಟೀಂ ಇಂಡಿಯಾಗೆ 152 ರನ್​​ಗಳ ಟಾರ್ಗೆಟ್​ ನೀಡಿದ ಜಿಂಬಾಬ್ವೆ

Share :

Published July 13, 2024 at 6:14pm

Update July 13, 2024 at 6:20pm

    ಭಾರತ ಮತ್ತು ಜಿಂಬಾಬ್ವೆ ನಡುವಿನ ನಾಲ್ಕನೇ ಟಿ20 ಪಂದ್ಯ

    ಹರಾರೆ ಸ್ಫೋರ್ಟ್ಸ್​​ ಕ್ಲಬ್​ನಲ್ಲಿ ಗೆಲುವಿಗಾಗಿ ಇತ್ತಂಡಗಳ ಹೋರಾಟ

    ನಿರಾಸೆಯಾಗಿ ಉಳಿದ ಸಿಕಂದರ್​ ರಾಜಾನ ಅರ್ಧ ಶತಕದಾಸೆ

ಭಾರತ ಮತ್ತು ಜಿಂಬಾಬ್ವೆ ನಡುವಿನ ನಾಲ್ಕನೇ ಟಿ20 ಪಂದ್ಯ ನಡೆಯುತ್ತಿದೆ. ಹರಾರೆ ಸ್ಫೋರ್ಟ್ಸ್​​ ಕ್ಲಬ್​ನಲ್ಲಿ ಈ ಪಂದ್ಯ ಏರ್ಪಟ್ಟಿದೆ. ಮೊದಲಿಗೆ ಟಾಸ್​ ಗೆದ್ದ ಇಂಡಿಯಾ ಬೌಲಿಂಗ್​ ಆಯ್ಕೆ ಮಾಡಿದೆ. ಅತ್ತ ಜಿಂಬಾಬ್ವೆ ತಂಡ ಬ್ಯಾಟಿಂಗ್​ ಇಳಿದು 152 ರನ್​ ಟಾರ್ಗೆಟ್​ ನೀಡಿದೆ.

ಓಪನಿಂಗ್​ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ವೆಸ್ಲಿ ಮಾಧೆವೆರೆ ಮತ್ತು ತಡಿವಾನಾಶೆ ಮರುಮಣಿ ಪಾರ್ಟರ್​ಶಿಪ್​ನಲ್ಲಿ ಬ್ಯಾಟ್​ ಮಾಡಲು ಮುಂದಾದರು. 24 ಬಾಲ್​ನಲ್ಲಿ 4 ಬೌಂಡರಿ ಜೊತೆಗೆ 25 ರನ್​ ಬಾರಿಸಿ ವೆಸ್ಲಿ ಔಟ್​ ಆದರು. ಅತ್ತ ಮರುಮಣಿ 31 ಎಸೆತಕ್ಕೆ 3 ಬೌಂಡರಿ ಬಾರಿಸಿ 32 ರನ್​ಗೆ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ: ‘ಅಮೃತಾಂಜನ’ ತಲೆ ನೋವಿಗೆ ಪರಿಹಾರ.. ಈ ಸಂಸ್ಥೆಯ ಸ್ಥಾಪಕ ಯಾರು ಗೊತ್ತಾ? ಹಿನ್ನೆಲೆ ಮಾತ್ರ ಅದ್ಭುತ

ಬ್ರಿಯಾನ್​ ಬೆನೆಟ್​​ 9 ರನ್​ ಮತ್ತು ಜೋನಾಥನ್​ ಕ್ಯಾಂಪ್ಬೆಲ್​ 3 ರನ್​ಗೆ ಔಟ್​ ಆದರು. ಆದರೆ ಜಿಂಬಾಬ್ವೆ ತಂಡದ ನಾಯಕ ಸಿಕಂದರ್​ ರಾಜಾ 28 ಬಾಲ್​ಗೆ  2 ಬೌಂಡರಿ ಮತ್ತು 3 ಸಿಕ್ಸ್​ ಸೇರಿ 46 ರನ್​ ಬಾರಿಸಿದರೆ. ಡಿಯೋನ್​ ಮೈಯರ್ಸ್​ 13 ಬಾಲ್​ಗೆ 12 ರನ್​ ಬಾರಿಸಿ ಔಟ್​​ ಆದರು.

ಬಳಿಕ ಕ್ಲೈವ್​ ಮತ್ತು ಫರಾಜ್​ ಮೈದಾನಕ್ಕಿಳಿದರು. ಕ್ಲೈವ್​ 7 ರನ್​ಗೆ ಔಟ್​​ ಆದರೆ ಫರಾಜ್​ 3 ರನ್​ ಬಾರಿಸುವ ಮೂಲಕ ಟೀಂ ಇಂಡಿಯಾಗೆ 152 ರನ್​ಗಳ ಟಾರ್ಗೆಟ್​ ನೀಡಿದರು.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ ಬರಲಿದೆ ಈ ವೈಶಿಷ್ಟ್ಯ.. ಏನದು?

ಇನ್ನು ವಾಷಿಂಗ್ಟನ್​ ಸುಂದರ್​, ಅಭಿಷೇಕ್​ ಶರ್ಮಾ, ಶಿವಂ ದುಬೆ, ತುಷಾರ್​ ದೇಶಪಾಂಡೆ​ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ಖಲೀಲ್​ ಅಹ್ಮದ್ 22 ವಿಕೆಟ್​​ ಕಿತ್ತರು. ಸದ್ಯ ಜಿಂಬಾಬ್ವೆ ನೀಡಿದ ಸವಾಲನ್ನು ಟೀಂ ಇಂಡಿಯಾ ತೆಗೆದುಕೊಂಡಿದೆ. ಈ ಸವಾಲನ್ನು ಬೀಟ್​ ಮಾಡಲು ಮುಂದಾಗಿದೆ. ಶುಭ್ಮನ್​ ಗಿಲ್​ ತಂಡ ಸರಣಿ ತನ್ನದಾಗಿಸಿಕೊಳ್ಳುವ ಛಲದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸಿಕಂದರ್​ ರಾಜಾಗೆ ನಿರಾಸೆ! ಟೀಂ ಇಂಡಿಯಾಗೆ 152 ರನ್​​ಗಳ ಟಾರ್ಗೆಟ್​ ನೀಡಿದ ಜಿಂಬಾಬ್ವೆ

https://newsfirstlive.com/wp-content/uploads/2024/07/INdvsZIm-1.jpg

Load More