NIAಗೆ ಸಖತ್ ಕ್ಲೂ ಕೊಟ್ಟ ಅದೊಂದು ವಿಡಿಯೋ, ಪಹಲ್ಗಾಮ್ ದಾಳಿ ತನಿಖೆಗೆ ಬಿಗ್​ ಟ್ವಿಸ್ಟ್..!

author-image
Ganesh
Updated On
2 ದಿನ ಮುಂಚೆಯೇ ಸ್ಕೆಚ್‌.. ಮೊದಲೇ ಬಂದು ಸುಮ್ಮನೆ ಕುಳಿತಿದ್ದ ಉಗ್ರರು; ಪಹಲ್ಗಾಮ್‌ ಶಾಕಿಂಗ್ ಸತ್ಯ ಬಯಲು
Advertisment
  • ಅತ್ತ ಗುಂಡಿನ ದಾಳಿ ನಡೀತಿದ್ರೆ, ಇತ್ತ ಅಲ್ಲಾಹು ಅಕ್ಬರ್ ಘೋಷಣೆ
  • ಜಿಪ್​ಲೈನ್​ ಆಪರೇಟರ್‌ನ ವಶಕ್ಕೆ ಪಡೆದ NIA ಅಧಿಕಾರಿಗಳು
  • ಉಗ್ರರ ಬಗ್ಗೆ ಜಿಪ್​​ಲೈನ್​​​ ಆಪರೇಟರ್​​​ನಿಂದ ಮಾಹಿತಿ ಕಲೆ

ಪಹಲ್ಗಾಮ್​​ನಲ್ಲಿ ನರರಾಕ್ಷಸರ ದಾಳಿ ವೇಳೆ ತನಗೇನು ತಿಳಿಯದ ವ್ಯಕ್ತಿಯೊಬ್ಬ ಸೆಲ್ಫ್ ವಿಡಿಯೋ ಮಾಡಿದ್ದು, ಆ ವಿಡಿಯೋ ಇದೀಗ ಭಾರೀ ಸದ್ದು ಮಾಡ್ತಿದೆ.. ಈ ವಿಡಿಯೋದಿಂದ ತನಿಖೆ ಶುರು ಮಾಡಿರೋ ಎನ್​ಐಎ ಅಧಿಕಾರಿಗಳಿಗೆ ಸಖತ್​ ಕ್ಲೂ ಒಂದು ಸಿಕ್ಕಿದೆ. ಇದರ ಬೆನ್ನಲ್ಲೇ ಕಾಶ್ಮೀರದ 63 ಪ್ರವಾಸಿ ತಾಣಗಳ ಪೈಕಿ 45 ಪ್ರವಾಸಿ ತಾಣಗಳನ್ನ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.

ಕಾಶ್ಮೀರದಲ್ಲಿ ಹಿಂದೂ ಟೂರಿಸ್ಟ್​ಗಳ ದೇಹದಿಂದ ಪ್ರಾಣ ಕಿತ್ತ ನರರಾಕ್ಷಸರ ದಾಳಿ ಬಗ್ಗೆ ಒಂದರ ಮೇಲೆ ಒಂದರಂತೆ ಭಯಾನಕ ವಿಚಾರಗಳು ಹೊರ ಬರ್ತಿದೆ. ಪಹಲ್ಗಾಮ್ ಉಗ್ರ ದಾಳಿ ವೇಳೆ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆಯಾಗಿದ್ದು, ಅದರಲ್ಲಿ ಮುಸ್ಲೀಮರು ವ್ಯಕ್ತಿಯೊಬ್ಬ ನಡೆದುಕೊಂಡ ರೀತಿ ಭಾರೀ ಅಚ್ಚರಿ ಮೂಡಿಸಿದೆ.

ಜಿಪ್​ಲೈನ್​ ಆಪರೇಟರ್‌ನ ವಶಕ್ಕೆ ಪಡೆದ NIA ಅಧಿಕಾರಿಗಳು

ಪಹಲ್ಗಾಮ್​​ನಲ್ಲಿ ನರರಾಕ್ಷಸರು ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸ್ತಿದ್ರೆ, ಇತ್ತ ಬೈಸರನ್​​ನಲ್ಲಿ ಜಿಪ್​ಲೈನ್​ ಏರಿದ ವ್ಯಕ್ತಿ ಸೆಲ್ಫ್​ ವಿಡಿಯೋ ಮಾಡಲು ಶುರು ಮಾಡ್ಕೊಂಡಿದ್ದ. ಸುತ್ತ ಏನಾಗ್ತಿ ಅಂತನೂ ಗೊತ್ತಾಗದೆ. ತನ್ನ ಪಾಡಿಗೆ ವಿಡಿಯೋ ರೆಕಾರ್ಡ್​ ಮಾಡಲು ಶುರು ಮಾಡಿದ್ದ. ಈ ವಿಡಿಯೋದಲ್ಲಿ ಜಿಪ್​ಲೈನ್​ ಆಪರೇಟರ್​​ ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್.. ಅಂತ ಘೋಷಣೆ ಕೂಗಿರೋದು ಸೆರೆಯಾಗಿದೆ.

ಉಗ್ರರ ಬಗ್ಗೆ ಜಿಪ್​​ಲೈನ್​​​ ಆಪರೇಟರ್​​​ನಿಂದ ಮಾಹಿತಿ ಕಲೆ

ಹೀಗೆ ಹಿಂದೆ ಗುಂಡಿನ ದಾಳಿ ನಡೀತಿದ್ರೆ.. ಈ ಜಿಪ್​ಲೈನ್​ ಆಪರೇಟರ್​​ ಯಾಕೆ ಅಲ್ಲಾಹು ಅಕ್ಬರ್.. ಅಂತಿದ್ದ ಅಂತ ಡೌಟ್​ ಬಂದು ಎನ್​ಐಎ ಅಧಿಕಾರಿಗಳು ಆತನನ್ನ ವಶಕ್ಕೆ ಪಡೆದು.. ವಿಚಾರಣೆಗೆ ಕರೆತಂದಿದ್ದಾರೆ. ದಾಳಿ ಮುಂಚೆನೇ ಹಾಕಿದ್ದ ಪ್ಲಾನಾ.? ಯಾರು ಆ ಉಗ್ರರು.. ಅಂತ ನರಹಂತಕರ ಬಗ್ಗೆ ಜಿಪ್​​ಲೈನ್​​​ ಆಪರೇಟರ್​​​ನಿಂದ ಎನ್​ಐಎ ಮಾಹಿತಿ ಕಲೆ ಹಾಕ್ತಿದೆ.

ಭಾರತ ಯಾವುದೇ ಕ್ಷಣದಲ್ಲಾದ್ರೂ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಭೀತಿ ಹೆಚ್ಚಾಗ್ತಿದ್ದಂತೆ ಪಿಓಕೆಯಲ್ಲಿ 42 ಉಗ್ರರ ಲಾಂಚ್ ಪ್ಯಾಡ್​ನಲ್ಲಿ ಪಾಕ್ ಸೇನೆ ರಕ್ಷಣೆ ನೀಡ್ತಿರೋ ಉಗ್ರರನ್ನ ಬಂಕರ್​ಗಳಿಗೆ ಶಿಫ್ಟ್ ಮಾಡಲು ಪಾಕ್ ಮುಂದಾಗಿದೆ. 42 ಲಾಂಚ್ ಪ್ಯಾಡ್​ಗಳಲ್ಲಿ 110-130 ಉಗ್ರರು ಇರೋ ಬಗ್ಗೆ ಹಾಗೂ ಉಗ್ರರ ಶಿಬಿರಗಳ ಬಗ್ಗೆ ಭಾರತದ ಐ.ಬಿ, ರಾ ಏಜೆನ್ಸಿ ಮಾಹಿತಿ ಸಂಗ್ರಹಿಸಿದೆ.

ಉಲ್ಲಂಘನೆಯನ್ನೇ ಚಾಳಿ ಮಾಡ್ಕೊಂಡಿರೋ ಪಾಕ್ ಸೇನೆ.. ಏಪ್ರಿಲ್ ತಿಂಗಳಲ್ಲಿ 12 ಭಾರಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಏಪ್ರಿಲ್ 22 ರ ಬಳಿಕ ಪಾಕಿಸ್ತಾನ ಶಿಮ್ಲಾ ಒಪ್ಪಂದ ಸಸ್ಪೆಂಡ್​ನಲ್ಲಿಟ್ಟಿತ್ತು. ಹೀಗಾಗಿ ಇನ್ನೂ ಮುಂದೆ ಪಾಕಿಸ್ತಾನ ಕದನ ವಿರಾಮ ಪಾಲಿಸಲ್ಲ ಎಂದು ದೃಢವಾಗಿದೆ. ಈ ಹಿನ್ನೆಲೆ ಇನ್ನ ನಿತ್ಯ ಗಡಿಯಲ್ಲಿ ಪಾಕ್-ಭಾರತದ ಸೇನೆ ನಡುವೆ ಗುಂಡಿನ ಕಾಳಗ ಮುಂದುವರಿಯಲಿದೆ.

6 ದಿನದಲ್ಲಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದ 1 ಸಾವಿರ ಮಂದಿ

ಕಳೆದ 6 ದಿನಗಳಲ್ಲಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ 1 ಸಾವಿರ ಮಂದಿ ಭಾರತೀಯರು ಬಂದಿದ್ದಾರೆ. ಅದೇ ರೀತಿ ಭಾರತದಲ್ಲಿ ನಲೆಸಿದ್ದ 800 ಮಂದಿ ಪಾಕಿಸ್ತಾನಿಗಳು ದೇಶ ಬಿಟ್ಟು ತೆರಳಿದ್ದಾರೆ. ಭಾರತಕ್ಕೆ ಲಾಂಗ್ ಟರ್ಮ್ ವೀಸಾದಲ್ಲಿ ಬಂದಿರುವವರು ಭಾರತದಲ್ಲಿರಲು ಅವಕಾಶ ಕಲ್ಪಿಸಲಾಗಿದೆ. ಭಾರತ, ಪಾಕಿಸ್ತಾನಗಳೆರಡೂ ಪರಸ್ಪರರ ನಾಗರಿಕರಿಗೆ ನೀಡಿದ್ದ ವೀಸಾವನ್ನ ರದ್ದು ಮಾಡಿದೆ. ಇದರಿಂದಾಗಿ ಭಾರತದಲ್ಲಿದ್ದ ಪಾಕ್ ನಾಗರಿಕರು ಅಟ್ಟಾರಿ- ವಾಘಾ ಗಡಿಯ ಮೂಲಕ ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ.

ಕಾಶ್ಮೀರದ 63 ಪ್ರವಾಸಿ ತಾಣಗಳ ಪೈಕಿ 45 ತಾಣಗಳು ಬಂದ್​

ಕಾಶ್ಮೀರದ ಪ್ರವಾಸಿ ತಾಣಗಳು ಲಾಕ್‌ಡೌನ್‌ ಆದಂತೆ ಕಾಣಿಸ್ತಿದೆ.. ಉಗ್ರರ ದಾಳಿ ಬಳಿಕ ಹೆಚ್ಚಿದ ಭದ್ರತಾ ಕ್ರಮಗಳ ನಡುವೆ 63ರ ಪೈಕಿ 45 ಪ್ರವಾಸಿ ತಾಣಗಳನ್ನ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಪ್ರವಾಸಿಗರು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. 45 ತಾಣಗಳನ್ನ ಮುಚ್ಚಲಾಗಿದ್ರೂ.. ಗುಲ್ಮಾರ್ಗ್, ಅವಂತಿಪೋರಾ ದೇವಾಲಯ ಉದ್ಯಾನವನ ಸೇರಿ 18 ತಾಣಗಳು ಪ್ರವಾಸಿಗರಿಗೆ ಮುಕ್ತವಾಗಿವೆ. ಒಟ್ನಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೆ.. 26 ಮಂದಿ ಪ್ರಾಣ ಹೋದ ಮೇಲೆ ಕಾಶ್ಮೀರ ಪೊಲೀಸರು ಹೆಚ್ಚೆತ್ತುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment