newsfirstkannada.com

ಮೆಕ್ಸಿಕನ್ ಬ್ಯೂಟಿಯ ಮದುವೆಯಾದ Zomato ಸಿಇಓ; ದೀಪಿಂದರ್ ಗೋಯಲ್​​ಗೆ ಇದು 2ನೇ ಮದುವೆ..!

Share :

Published March 22, 2024 at 2:39pm

    Zomato ಸಿಇಓ ಕೈಹಿಡಿದ ಮೆಕ್ಸಿಕನ್ ಚೆಲುವೆ ಯಾರು?

    ದೀಪಿಂದರ್​ ಗೋಯಲ್​​ಗೆ ಇದು ಮೊದಲನೇ ಮದುವೆ ಅಲ್ಲ

    ಸಸ್ಯಹಾರಿ vs ಮಾಂಸಹಾರಿ ಎಂಬ ಚರ್ಚೆ ಶುರುವಾಗಿದ್ದು ಏಕೆ?

ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ Zomato ಸಿಇಓ ದೀಪಿಂದರ್ ಗೋಯಲ್ (Deepinder Goyal) ಎರಡನೇ ಮದುವೆ ಆಗಿದ್ದಾರೆ. ಅವರು ಮೆಕ್ಸಿಕನ್ ಮಾಡೆಲ್ ಗ್ರೇಸಿಯಾ ಮುನೋಜ್ (Grecia Munoz) ರನ್ನು ಮದುವೆಯಾಗಿದ್ದಾರೆ. ಮದುವೆ ಬೆನ್ನಲ್ಲೇ ಇವರಿಬ್ಬರು ಹನಿಮೂನ್‌ ಮುಗಿಸಿ ವಾಸಪ್ ಆಗಿದ್ದಾರೆ ಎಂದು ಸುದ್ದಿಯಾಗಿದೆ.

ಅಂದ್ಹಾಗೆ ಇವರಿಬ್ಬರ ಮದುವೆ ಕಳೆದ ಫೆಬ್ರವರಿಯಲ್ಲೇ ಆಗಿದೆ. ಗೋಯಲ್​ಗೆ ಇದು ಎರಡನೇ ಮದುವೆ. ದೆಹಲಿ ಮೂಲದ ಬಾಲ್ಯ ಸ್ನೇಹಿತೆ ಕಾಂಚನ್ ಜೋಶಿ ಜೊತೆ ಮೊದಲ ವಿವಾಹ ನಡೆದಿತ್ತು.

ಗ್ರೇಸಿಯಾ ಯಾರು?
ಗ್ರೇಸಿಯಾ ಮುನೋಜ್ ಮೆಕ್ಸಿಕೋದಲ್ಲಿ ಜನಿಸಿದ ರೂಪದರ್ಶಿ. ಇವರು ಟಿವಿ ನಿರೂಪಕರೂ ಹೌದು. 2022ರಲ್ಲಿ ಅಮೆರಿಕದಲ್ಲಿ ನಡೆದ ಮೆಟ್ರೋಪಾಲಿಟನ್ ಫ್ಯಾಶನ್ ವೀಕ್ ವಿಜೇತರಾಗಿದ್ದಾರೆ. ಸದ್ಯ ಇವರು ಭಾರತದಲ್ಲಿದ್ದು, ಈ ಬಗ್ಗೆ ಇನ್​ಸ್ಟಾದಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಜನವರಿಯಿಂದಲೇ ಭಾರತದ ಕೆಲವು ಪ್ರವಾಸಿ ತಾಣಗಳ ಫೋಟೋಳನ್ನು ಶೇರ್ ಮಾಡುತ್ತ ಬಂದಿದ್ದಾರೆ. ಇನ್‌ಸ್ಟಾಗ್ರಾಮ್‌ ಬಯೋದಲ್ಲಿ ಭಾರತದಲ್ಲಿ ವಾಸವಾಗಿರುವ ಬಗ್ಗೆ ತಿಳಿಸಿದ್ದಾರೆ.

ದೀಪಿಂದರ್ ಗೋಯಲ್​ಗೆ 41 ವರ್ಷ. ದೇಶದ ಯುವ ಉದ್ಯಮಿ ಎನಿಸಿಕೊಂಡಿದ್ದಾರೆ. 2008 ರಲ್ಲಿ ಅವರು Zomato ಪ್ರಾರಂಭಿಸಿದರು. ಅದಕ್ಕೂ ಮೊದಲು ಗೋಯಲ್ ಬೈನ್ ಅಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಬ್ಲಿಂಕಿಟ್ ಪ್ರಾರಂಭಿಸಿದ ಕೀರ್ತಿಯೂ ಇದೆ
ಇತ್ತೀಚೆಗಷ್ಟೇ Zomato ವಿವಾದಗಳಲ್ಲಿ ಸಿಲುಕಿಕೊಂಡಿತ್ತು. ಕಂಪನಿಯು ಸಸ್ಯಾಹಾರಿ ಜನರಿಗೆ ಮೀಸಲಾದ ಶುದ್ಧ ಸಸ್ಯಾಹಾರಿ ವಿತರಣಾ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ತಿಳಿಸಿತ್ತು. ಕಂಪನಿಯ ಈ ನಡೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಸಸ್ಯಾಹಾರಿ ವರ್ಸಸ್ ಮಾಂಸಾಹಾರಿ ಎಂಬ ಚರ್ಚೆ ನಡೆದಿತ್ತು. ಜೊಮಾಟೊ ಹೊರತುಪಡಿಸಿ, ಗೋಯಲ್ ಆನ್​ಲೈನ್ ಸ್ಟೋರ್ ಕಂಪನಿ ಬ್ಲಿಂಕಿಟ್ (Blinkit) ಸಹ ಪ್ರಾರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಕ್ಸಿಕನ್ ಬ್ಯೂಟಿಯ ಮದುವೆಯಾದ Zomato ಸಿಇಓ; ದೀಪಿಂದರ್ ಗೋಯಲ್​​ಗೆ ಇದು 2ನೇ ಮದುವೆ..!

https://newsfirstlive.com/wp-content/uploads/2024/03/Grecia-Munoz.jpg

Load More