Advertisment

ಜೊಮ್ಯಾಟೊಗೆ 803 ಕೋಟಿ ರೂಪಾಯಿಯ ತೆರಿಗೆ ನೋಟಿಸ್​! ಕಾರಣವೇನು?

author-image
Gopal Kulkarni
Updated On
ಜೊಮ್ಯಾಟೊಗೆ 803 ಕೋಟಿ ರೂಪಾಯಿಯ ತೆರಿಗೆ ನೋಟಿಸ್​! ಕಾರಣವೇನು?
Advertisment
  • ಜಿಎಸ್​​ಟಿ ಸರಿಯಾಗಿ ಪಾವತಿ ಮಾಡಿಲ್ವಾ ಜೊಮ್ಯಾಟೊ?
  • 803.4 ಕೋಟಿ ರೂಪಾಯಿಯ ತೆರಿಗೆ ನೋಟಿಸ್ ಬಂದಿದ್ದೇಕೆ?
  • ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವ ಜೊಮ್ಯಾಟೊ

ಜೊಮ್ಯಾಟೊ ಸದ್ಯ ಭಾರತದ ಬೃಹತ್​ ನಗರಗಳಲ್ಲಿ ತನ್ನ ಗ್ರಾಹಕರು ಬೇಡಿದ ಆಹಾರವನ್ನು ಮನೆ ಮನೆಗೆ ತಲುಪಿಸುವ ಒಂದು ಆ್ಯಪ್​. ನಿತ್ಯ ಲಕ್ಷಾಂತರ ಮಂದಿಗೆ ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಹಾರ ಪೂರೈಸಿ ತನ್ನದೇ ಆದ ದೈತ್ಯ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ಕಂಪನಿಗಳಲ್ಲಿ ಒಂದು. ಈ ಜೊಮ್ಯಾಟೊ ಕಂಪನಿಗೆ ಈಗ ಸರಿಯಾಗಿ ಜಿಎಸ್​ಟಿ ಕಟ್ಟದ ಕಾರಣದಿಂದಾಗಿ 803 ಕೋಟಿ ರೂಪಾಯಿ ಪಾವತಿ ಮಾಡುವಂತೆ ನೋಟಿಸ್ ಹೋಗಿದೆ.

Advertisment

ಡಿಲವೆರಿ ಚಾರ್ಜಸ್​ ಮೇಲೆ ಇರುವ ಜಿಎಸ್​ಟಿಯನ್ನು ಕಟ್ಟದ ಕಾರಣ ಈ ಒಂದು ನೋಟಿಸ್​ ಜೊಮ್ಯಾಟೊಗೆ ಹೋಗಿದೆ.ಈ ಬಗ್ಗೆ ಮಾತನಾಡಿರುವ ಸಂಸ್ಥೆ ನಾವು ಈ ಬಗ್ಗೆ ನಾವು ಸಂಬಂಧಪಟ್ಟ ಮಂಡಳಿಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದೆ.

ಜೊಮ್ಯಾಟೊ ಕಂಪನಿಗೆ ಡಿಸೆಂಬರ್ 12,2024ರಂದು ನೋಟೀಸ್ ತಲುಪಿದೆ. 29 ಅಕ್ಟೋಬರ್ 2019 ರಿಂದ 31 ಮಾರ್ಚ್​ 2022ರವರೆಗೆ ನಡೆದ ವ್ಯವಹಾರದ ಕುರಿತು ನೋಟಿಸ್ ಹೋಗಿದೆ. ಸಿಜಿಎಸ್​ಟಿ ಮತ್ತು ಸೆಂಟ್ರಲ್ ಎಕ್ಸೈಸ್​, ಥಾಣೆ ಕಮಿಷನರೇಟ್ ಮಹಾರಾಷ್ಟ್ರ ಒಟ್ಟು 401 ಕೋಟಿ70 ಲಕ್ಷ 14 ಸಾವಿರ 706 ರೂಪಾಯಿ ಜಿಎಸ್​ಟಿ ಹಾಗೂ ದಂಡ ಹಾಗೂ ಬಡ್ಡಿ ಸೇರಿ ಒಟ್ಟು 803.4 ಕೋಟಿ ರೂಪಾಯಿ ಜೊಮ್ಯಾಟೊ ಪಾವತಿಸಬೇಕಿದೆ ಎಂದು ಸ್ಪಷ್ಟಿಕರಣ ನೀಡಿದೆ.

ಇದನ್ನೂ ಓದಿ:Breaking: ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಅರೆಸ್ಟ್; ಹೈದ್ರಾಬಾದ್ ಪೊಲೀಸರಿಂದ ಬಂಧನ

Advertisment

ಈ ಬಗ್ಗೆ ಮಾತನಾಡಿರುವ ಜೊಮ್ಯಾಟೊ ವಕ್ತಾರರು ನಾವು ನಮ್ಮ ಕಾನೂನು ಸಲಹೆಗಾರರು ಹಾಗೂ ತೆರಿಗೆ ಸಲಹೆಗಾರೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸಲಿದ್ದೆವೆ. ಈಗಾಗಲೇ ಈ ವಿಚಾರ ಕುರಿತು ಸಂಬಂಧಪಟ್ಟ ಮಂಡಳಿಗೆ ಮೇಲ್ಮನವಿಯನ್ನು ಸಲ್ಲಿಸಿಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment