newsfirstkannada.com

ಸಾರ್ವಜನಿಕರೇ ಎಚ್ಚರ! ಈ ರೋಗ ಬಂದ್ರೆ ಮನುಷ್ಯ ಬದುಕೋದೆ ಡೌಟ್​​..!

Share :

Published February 21, 2024 at 5:54am

    ಮನುಷ್ಯ ಕುಲಕ್ಕೆ ಮತ್ತೊಂದು ಮಾರಕ ಕಾಯಿಲೆ ಪೆಟ್ಟು ಕೊಡುತ್ತದೆಯೇ?

    ಒಮ್ಮೆ ಈ ರೋಗ ಹರಡಿದರೆ ಜೀವವನ್ನು ತೆಗೆದುಕೊಂಡು ಹೋಗುತ್ತೆ

    ಅತಿ ವೇಗವಾಗಿ ಹರಡುವ ರೋಗ ಅಮೆರಿಕದಲ್ಲಿ ಕಾಣಿಸಿಕೊಂಡಿದೆಯಾ?

ವಿಶ್ವವು ಈಗಾಗಲೇ ಮಾರಾಣಾಂತಿಕ ವೈರಸ್​ ಅನ್ನ ಎದುರಿಸಿ ಸಾಮಾನ್ಯ ಜೀವನಕ್ಕೆ ಮರಳಿದೆ. ಇದರ ಬೆನ್ನಲ್ಲೇ ಮತ್ತೆ ಭಯಾನಕವಾದ ಜಿಂಕೆ ರೋಗವೊಂದು ಮಾನವ ಕುಲಕ್ಕೆ ಶೀಘ್ರದಲ್ಲೇ ಹರಡುವ ಸಾಧ್ಯತೆ ಇದೆ ಎಂದು ಕೆನಾಡದ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಜೊಂಬಿಯಾ ಜಿಂಕೆ ರೋಗ (zombie deer disease) ಇದರ ನಿಜವಾದ ಹೆಸರು ದೀರ್ಘಕಾಲದ ಕ್ಷೀಣತೆಯ ರೋಗ (chronic wasting disease)ವಾಗಿದೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ನರಗಳಿಗೆ ಸಂಬಂಧಿಸಿದ ರೋಗವಾಗಿದೆ. ಯಾವುದೇ ಪ್ರಾಣಿ ಇದಕ್ಕೆ ಒಮ್ಮೆ ತುತ್ತಾದರೆ ಸಾಕು ಬದುಕುವುದೇ ಇಲ್ಲ. ಇಂತಹ ಮಾರಕ ರೋಗ ಶೀಘ್ರದಲ್ಲೇ ಮನುಷ್ಯರಿಗೆ ಹರಡಲಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಈ ರೋಗ ಅಮೆರಿಕದ ಜಿಂಕೆಗಳಲ್ಲಿ ವೇಗವಾಗಿ ಹರಡುತ್ತಿದೆ. ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಕರಣವನ್ನ ದೃಢಪಡಿಸಲಾಗಿದೆ. ಹೀಗಾಗಿ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸಿಬ್ಬಂದಿ ಇದರ ಹರಡುವಿಕೆಯನ್ನು ತಡೆಗಟ್ಟಲು ಜನವರಿಯಿಂದ ಕೆಲ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಎರಡು ಪ್ರಕರಣಗಳು ಕಾಣಿಸಿಕೊಂಡಿವೆ. ಎಲ್ಲಿಯಾದರೂ ಜಿಂಕೆಗಳು ಸಾವನ್ನಪ್ಪಿದ್ದರೇ ಅದನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ ಎನ್ನಲಾಗಿದೆ.

ದೇಹದಲ್ಲಿ ಪ್ರೋಟೀನ್‌ಗಳು ಸರಿಯಾದ ಆಕಾರಕ್ಕೆ ಮಡಚಿಕೊಳ್ಳದಿದ್ದಾಗ ದೀರ್ಘವಾಗಿ ಕ್ಷೀಣಿಸುವುದಾದ ಜೊಂಬಿಯಾ ಜಿಂಕೆ ರೋಗ ಬರುತ್ತದೆ. ಸರಿಯಾದ ಆಕಾರಕ್ಕೆ ಮಡಚಿಕೊಳ್ಳದಿರುವ ಇವಕ್ಕೆ ಪ್ರಿಯಾನ್‌ಗಳು ಎಂದು ಕರೆಯಲಾಗುತ್ತದೆ. ಪ್ರಿಯಾನ್​ಗಳು ನಂತರ ಕೇಂದ್ರ ನರಮಂಡಲದ ಉದ್ದಕ್ಕೂ ಚಲಿಸುತ್ತವೆ. ಮೆದುಳಿನ ಅಂಗಾಂಶಗಳು ಮತ್ತು ದೇಹದೊಳಗಿನ ಅಂಗಗಳಲ್ಲಿ ಪ್ರಿಯಾನ್ ಪ್ರಭಾವ ಬೀರಿ ನರಗಳ ಮೇಲೆ ರೋಗವನ್ನುಂಟು ಮಾಡುತ್ತಾವೆ ಎನ್ನಲಾಗಿದೆ. ಇನ್ನು ಜೊಂಬಿಯಾ ಜಿಂಕೆ ರೋಗದಿಂದ ಬಳಲುತ್ತಿರುವ ಜಿಂಕೆಗಳಲ್ಲಿ ಬಾಯಿಂದ ಜೊಲ್ಲು ಸೋರುತ್ತಿರುತ್ತದೆ. ಎಡವಿ ಬೀಳುತ್ತಿರುತ್ತವೆ. ಅಲ್ಲದೇ ಅದರ ಜಡ ಮತ್ತು ದೃಷ್ಟಿಯಲ್ಲಿ ದೋಷಗಳು ಕಾಣಿಸುತ್ತಾವೆ ಎಂದು ಲಕ್ಷಣಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರ್ವಜನಿಕರೇ ಎಚ್ಚರ! ಈ ರೋಗ ಬಂದ್ರೆ ಮನುಷ್ಯ ಬದುಕೋದೆ ಡೌಟ್​​..!

https://newsfirstlive.com/wp-content/uploads/2024/02/Deer_Disease_.jpg

Load More