60ಕ್ಕೂ ಹೆಚ್ಚು ನಾಯಿಗಳ ರೇಪ್​ ಆ್ಯಂಡ್​​ ಮರ್ಡರ್​.. ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞನಿಗೆ 249 ವರ್ಷಗಳ ಕಾಲ ಜೈಲು ಶಿಕ್ಷೆ

author-image
AS Harshith
Updated On
60ಕ್ಕೂ ಹೆಚ್ಚು ನಾಯಿಗಳ ರೇಪ್​ ಆ್ಯಂಡ್​​ ಮರ್ಡರ್​.. ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞನಿಗೆ 249 ವರ್ಷಗಳ ಕಾಲ ಜೈಲು ಶಿಕ್ಷೆ 
Advertisment
  • ವಿಕೃತ ಆಸೆ ಬುರುಕ.. ನಾಯಿಯನ್ನು ಬಿಟ್ಟಿಲ್ಲ ಈ ಕಾಮುಕ
  • ಜಗತ್ತಿನ ಮುಂದೆ ಬಯಲಾಯ್ತು ಮೊಸಳೆ ತಜ್ಞನ ಕರ್ಮಕಾಂಡ
  • ಅತ್ಯಾಚಾರ ಎಸಗಿ ಮೂಕ ಪ್ರಾಣಿಗಳನ್ನು ಕೊಂದ ಹಂತಕ ಈತ

ಹೇಳಿಕೊಳ್ಳಲು ಪ್ರಾಣಿಶಾಸ್ತ್ರಜ್ಞ. ವಿಶೇಷವಾಗಿ ಮೊಸಳೆ ತಜ್ಞ. ಕ್ಯಾಮೆರಾದ ಮುಂದೆ ಅದ್ಭುತ ಅಭಿನಯ, ತಾನು ಒಳ್ಳೆಯವನು ಎಂಬ ತೋರ್ಪಡಿಕೆ. ಆದರೀಗ ಆತನ ಕರ್ಮಕಾಂಡ ಬಟಾ ಬಯಲಾಗಿದೆ. ಆತನೊಳಗಿದ್ದ ಬ್ಮಹ್ಮ ರಾಕ್ಷಸನ ಗುಟ್ಟು ರಟ್ಟಾಗಿದೆ. ಅಷ್ಟಕ್ಕೂ ಆತ ಮಾಡಿದ ಘನಂದಾರಿ ಕೆಲಸ ಕೇಳಿದ್ರೆ ನಿಮಗೂ ಅಚ್ಚರಿಯಾಗುತ್ತೆ.

ಇವನೇ ವಿಕೃತ ಆಸೆಬುರುಕ ಆಡಮ್ ಬ್ರಿಟನ್. ಬಹುಕಾಲದ ನಂತರ ಈತನಲ್ಲಿ ಆಡಗಿದ್ದ ವಿಕೃತ ಮನಸ್ಥಿತಿ ಹೊರ ಜಗತ್ತಿಗೆ ಗೊತ್ತಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 60ಕ್ಕೂ ಹೆಚ್ಚು ನಾಯಿಗಳನ್ನು ಅತ್ಯಾಚಾರ ಮಾಡಿದ ಕೀಚಕ. ಮಾತ್ರವಲ್ಲದೆ, ಅವುಗಳನ್ನು ಕೋಣೆಗಳಲ್ಲಿ ಕೂಡಿಹಾಕಿ ನಿರ್ದಯವಾಗಿ ಹಿಂಸಿಸುತ್ತಿದ್ದನು. ಅತ್ಯಾಚಾರವೆಸಗಿ ಮೂಕ ಪ್ರಾಣಿಗಳನ್ನು ಬರ್ಬರವಾಗಿ ಕೊಂದಿದ್ದಾನೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ

ಮಾಡಿದ್ದುಣ್ಣೋ ಮಹಾರಾಯ ಎಂಬತೆ ಆಡಮ್ ಬ್ರಿಟನ್​ಗೆ ಮಾಡಿದ ನೀಚ ಕೆಲಸಕ್ಕೆ ತಕ್ಕ ಶಿಕ್ಷೆಯಾಗಿದೆ. 249 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಹೌದು. ಕಳೆದ ವರ್ಷ ಈತ ತಾನು ಮಾಡಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಮೈಕಲ್​ ಗ್ರಾಂಟ್​​​ ‘ಇದೊಂದು ವಿಚಿತ್ರ ಕೌರ್ಯ’ ಎಂದು ಹೇಳಿದ್ದಾರೆ. ಮುಂದಿನ ವಿಚಾರಣೆ ಆಗಸ್ಟ್​ ತಿಂಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಓಡೋಡಿ ಬಂದ ಬಾಲಿವುಡ್​ ದಂಡು.. ದೈವದ ಬಳಿ ನಟಿ ಕತ್ರಿನಾ ಕೈಫ್ ಬೇಡಿಕೊಂಡಿದ್ದೇನು?

ಆಡಮ್ ಬ್ರಿಟನ್ ಪರ ವಕೀಲರು ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಬಾಲ್ಯದಿಂದಲೂ ಆತನಿಗೆ ಈ ಸಮಸ್ಯೆ ಇದೆ. ಅವರದ್ದೇನು ತಪ್ಪಿಲ್ಲ ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಸದ್ಯ ನ್ಯಾಯಾಲಯ ಈ ವಿಚಾರವನ್ನು ಪರಿಗಣಿಸಿ ತನಿಖೆ ನಡೆಸುತ್ತಿದೆ. ತನಿಖೆ ವೇಳೆ ಅಂತಹ ವಿಚಾರ ಗಮನಕ್ಕೆ ಬಂದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ.

ಆದರೆ ಹೆಸರಾಂತ ಮೊಸಳೆ ತಜ್ಞ ಆಡಮ್ ಬ್ರಿಟನ್ ಮಾತ್ರ ಜನರಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಅವರ ನೀಚ ಕೃತ್ಯದ ಬಗ್ಗೆ ಜನರು ಛೀಮಾರಿ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment