ಬೆಂಗಳೂರಿನಲ್ಲಿ ಮತ್ತೆ ಗುಡುಗು ಸಹಿತ ಧಾರಕಾರ ಮಳೆ; ಜೀವಭಯದಲ್ಲಿ ಸಾರ್ವಜನಿಕರು

author-image
Ganesh Nachikethu
Updated On
ಬೆಂಗಳೂರಿನಲ್ಲಿ ಮತ್ತೆ ಗುಡುಗು ಸಹಿತ ಧಾರಕಾರ ಮಳೆ; ಜೀವಭಯದಲ್ಲಿ ಸಾರ್ವಜನಿಕರು
Advertisment
  • ಸಿಲಿಕಾನ್​​ ಸಿಟಿಯಲ್ಲಿ ವರುಣನ ಆರ್ಭಟ ಜೋರು
  • ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆ
  • ದಿಢೀರ್​​ ಮಳೆಯಿಂದ ವಾಹನ ಸವಾರರು ಪರದಾಟ

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನಿನ್ನೆ ಸುರಿದ ಭಾರೀ ಮಳೆಗೆ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ ಸಂಪೂರ್ಣ ಜಲಾವೃತವಾಗಿತ್ತು. ಇದರ ಪರಿಣಾಮ ಅಂಡರ್‌ಪಾಸ್‌ನಲ್ಲಿ ಮುಳುಗಿದ್ದ ಕಾರ್‌ನಲ್ಲಿ ಒಂದೇ ಕುಟುಂಬದ ಹಲವರನ್ನು ರಕ್ಷಿಸಲಾಗಿತ್ತು. ಯುವತಿಯೊಬ್ಬಳು ಚಿಕಿತ್ಸೆ ಫಲಿಸದೆ ಮಳೆಗೆ ಬಲಿಯಾದರು. ಇದರಿಂದ ಸಿಲಿಕಾನ್ ಸಿಟಿ ಮಂದಿಗೆ ಆತಂಕ ಎದುರಾಗಿತ್ತು.

ಇಂದು ಕೂಡ ರಾಜ್ಯದಲ್ಲಿ ಗುಡುಗು, ಸಿಡಿಲು ಮಳೆಯ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ಜನಜೀವನ ಅಸ್ತವ್ಯಸ್ತ ಆಗಿದೆ. ವಾಹನ ಸವಾರರು ತತ್ತರಿಸಿದ್ದಾರೆ. ಶಿವಾಜಿನಗರ, ವಿಜಯನಗರ, ಬಸವನಗುಡಿ, ಲಾಲ್ ಭಾಗ್ ರಸ್ತೆ, ಕಾರ್ಪೊರೇಷನ್, ಟೌನ್ ಹಾಲ್, ಮಲ್ಲೇಶ್ವರಂ, ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್, ರಾಜಾಜಿನಗರ, ಗಾಯತ್ರಿ ನಗರ, ಹೆಬ್ಬಾಳ, ಪದ್ಮನಾಭನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ದಿಢೀರ್​​ ಮಳೆಯಿಂದ ರಸ್ತೆ ಬದಿ ವ್ಯಾಪಾರಿ ಹಾಗೂ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment